Thursday, August 21, 2025
Homeಸಾರ್ವಜನಿಕ ಧ್ವನಿದಾವಣಗೆರೆ ತಾಲೂಕು ಬಿಸಿಯೂಟ ತಯಾರಕರಿಗೆ 2 ತಿಂಗಳ ಬಾಕಿ ವೇತನ ಬಿಡುಗಡೆಗಾಗಿ ಒತ್ತಾಯಿಸಿಪ್ರತಿಭಟನೆ

ದಾವಣಗೆರೆ ತಾಲೂಕು ಬಿಸಿಯೂಟ ತಯಾರಕರಿಗೆ 2 ತಿಂಗಳ ಬಾಕಿ ವೇತನ ಬಿಡುಗಡೆಗಾಗಿ ಒತ್ತಾಯಿಸಿಪ್ರತಿಭಟನೆ

ದಾವಣಗೆರೆ- ದಾವಣಗೆರೆ ತಾಲೂಕು ಅಕ್ಷರ ದಾಸೋಹ ಮಧ್ಯಾಹ್ನ ಉಪಹಾರ ಯೋಜನೆಯಡಿಯಲ್ಲಿ ಶಾಲೆಗಳಲ್ಲಿ ಅಡುಗೆ ಕೆಲಸ ಮಾಡುತ್ತಿರುವ ಬಿಸಿಯೂಟ ತಯಾರಕರಿಗೆ ಎರಡು ತಿಂಗಳ ವೇತನ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ದಾವಣಗೆರೆ ತಾಲೂಕು ಪಂಚಾಯಿತಿ ಕಚೇರಿ ಬಳಿ ಬಿಸಿಊಟ ತಯಾರಕರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಬಿಸಿಊಟ ತಯಾರಕರ ಫೆಡರೇಷನ್ (ಎಐಟಿಯುಸಿ ಸಂಯೋಜಿತ )ಜಿಲ್ಲಾಧ್ಯಕ್ಷ ಕಾಂ ಆವರಗೆರೆ ಚಂದ್ರು ತಿಳಿಸಿದ್ದಾರೆ.
31-7-23 ಸೋಮವಾರ ದಾವಣಗೆರೆ ಬೇತೂರು ರಸ್ತೆಯಲ್ಲಿರುವ ತಾಲೂಕು ಪಂಚಾಯಿತಿ ಕಚೇರಿ ಬಳಿ ಬಿಸಿಊಟ ತಯಾರಕರು ತಮಗೆ ಕೂಡಲೇ ಎರಡು ತಿಂಗಳ ಬಾಕಿ ಇರುವ ವೇತನವನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುವರು. ಆದ್ದರಿಂದ ದಾವಣಗೆರೆ ತಾಲೂಕಿನ ಬಿಸಿಯೂಟ ತಯಾರಕರು ಸೋಮವಾರ ಬೆಳಗ್ಗೆ 10.30 ಗಂಟೆಗೆ ದಾವಣಗೆರೆ ಬೇತೂರು ರಸ್ತೆ ಯಲ್ಲಿರುವ ತಾಲೂಕು ಪಂಚಾಯತಿ ಕಚೇರಿ ಬಳಿ ಆಗಮಿಸಬೇಕೆಂದು ಸಂಘಟನೆಯ ತಾಲೂಕು ಅಧ್ಯಕ್ಷೆ ಮಳಲ್ಕೆರೆ ಜಯಮ್ಮ ಪ್ರಧಾನ ಕಾರ್ಯದರ್ಶಿ ಜ್ಯೋತಿ ಲಕ್ಷ್ಮಿ ಖಜಾಂಚಿ ಪದ್ಮಾ ಪದಾಧಿಕಾರಿಗಳಾದ ನಾಗರತ್ನಮ್ಮ , ರತ್ಮಮ್ಮ, ರುದ್ರಮ್ಮ, ಮಂಜುಳಾ, ಸರೋಜಾ, ರೇಣುಕಮ್ಮ,ಪ್ರೇಮಕ್ಕ ಮತ್ತಿತರರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments