ದಾವಣಗೆರೆ ಜುಲೈ 30- ದಾವಣಗೆರೆಯಲ್ಲಿ ನೂತನವಾಗಿ ನಿರ್ಮಿಸಿರುವ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣಕ್ಕೆ ಮಾಜಿ ಶಾಸಕರಾಗಿದ್ದ ಕಾಂ .ಪಂಪಾಪತಿ ಅವರ ಹೆಸರಿಡುವಂತೆ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಸಚಿವರು ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎಸ್ ಎಸ್ ಮಲ್ಲಿಕಾರ್ಜುನ ರವರಿಗೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರು ಆದ ಶ್ರೀ ಡಾ.ಶಾಮನೂರು ಶಿವಶಂಕರಪ್ಪನವರಿಗೆ ಭಾರತ ಕಮ್ಯುನಿಸ್ಟ್ ಪಕ್ಷದ ದಾವಣಗೆರೆ ಜಿಲ್ಲಾ ಮಂಡಳಿ ವತಿಯಿಂದ ಮನವಿ ಸಲ್ಲಿಸಲಾಯಿತು.
ಭಾನುವಾರ ಸಚಿವರ ನಿವಾಸಕ್ಕೆ ಪಕ್ಷದ ನಿಯೋಗದೊಂದಿಗೆ ತೆರಳಿ ಭೇಟಿ ಮಾಡಿದ ಸಿಪಿಐ ಜಿಲ್ಲಾ ಕಾರ್ಯದರ್ಶಿ ಕಾಂ ಆವರಗೆರೆ ಚಂದ್ರು ಪಂಪಾಪತಿಯವರು ನಗರಕ್ಕೆ ಮತ್ತು ಜಿಲ್ಲೆಗೆ ನೀಡಿದ ಕೊಡುಗೆ ಮತ್ತು ಸೇವೆಯನ್ನು ಪರಿಗಣಿಸಿ ನೂತನ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣಕ್ಕೆ ಕಾಂ ಪಂಪಾಪತಿ ಯವರ ಹೆಸರಿಡುವಂತೆ ನಿಯೋಗದೊಂದಿಗೆ ಸಚಿವರ ಗಮನಕ್ಕೆ ತಂದರು, ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರಾದ ಶ್ರೀ ಎಸ್ ಎಸ್ ಮಲ್ಲಿಕಾರ್ಜುನ್ ರವರು ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರು ಮಾಜಿ ಸಚಿವರು ಆದ ಶ್ರೀ ಶಾಮನೂರು ಶಿವಶಂಕರಪ್ಪನವರು ಮಾಜಿ ಶಾಸಕರಾದ ಪಂಪಾಪತಿ ಅವರ ಹೆಸರಿಡಲು ಪರಿಶೀಲಿಸುವುದಾಗಿ ನಿಯೋಗಕ್ಕೆ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಖಜಾಂಚಿ ಕಾಂ .ಆನಂದರಾಜ್ ಪಕ್ಷದ ಸಹಕಾರ್ಯದರ್ಶಿಗಳಾದ ಕಾಂ ಹೆಚ್ ಜಿ ಉಮೇಶ್ ಅವರಗೆರೆ ವಾಸು ರವರು ಉಭಯತರಿಗೂ ಪುಷ್ಪ ಹಾರ ಮತ್ತು ದಾವಣಗೆರೆ ಹತ್ತಿ ಗಿರಣಿ ಕಾರ್ಮಿಕರ ಹೋರಾಟದ ಇತಿಹಾಸ ಕುರಿತ ಪುಸ್ತಕ ನೀಡಿ ಸಚಿವರು ಮತ್ತು ಶಾಸಕರನ್ನು ಸನ್ಮಾನಿಸಿದರು.
ಸಚಿವರ ನಿವಾಸಕ್ಕೆ ತೆರಳಿದ ಪಕ್ಷದ ನಿಯೋಗದಲ್ಲಿ ಪಿಎಲ್ ನಾಗೇಂದ್ರ, ಎ ತಿಪ್ಪೇಶ್, ನರೇಗಾ ರಂಗನಾಥ್, ಎನ್ ಹೆಚ್ ರಾಮಣ್ಣ ,ಮಹೇಶ್, ಎಂ ಬಿ ಶಾರದಮ್ಮ, ಪಿ ಷಣ್ಮುಖ ಸ್ವಾಮಿ ,ವಿಶಾಲಾಕ್ಷಿ ,ಸರೋಜಾ, ನಿರ್ಮಲ, ಎಸ್ ಎಸ್ ಮಲ್ಲಮ್ಮ, ಬೆಳಲಗೆರೆ ರುದ್ರಮ್ಮ ,ಎಚ್ಎಸ್ ಚಂದ್ರು, ಈ ಎಸ್ ಉಮೇಶ್, ನೇತ್ರಾವತಿ ,ಚಿನ್ನಪ್ಪ, ನಿಟವಳ್ಳಿ ಬಸವರಾಜ, ಎ ಮರಿಯಪ್ಪ ಸೇರಿದಂತೆ ಇತರರು ನಿಯೋಗದಲ್ಲಿದ್ದರು.
(ವರದಿ- ಆವರಗೆರೆ ಚಂದ್ರು ಕಾರ್ಯದರ್ಶಿ ಸಿಪಿಐ ಜಿಲ್ಲಾ ಮಂಡಳಿ )