Tuesday, December 24, 2024
Homeಸಾಧನೆಅನನ್ಯ ಅಗಾಧ ಸೇವೆ ಗೈಯ್ಯುತ್ತಿರುವ ಜೇನುಗೂಡು.

ಅನನ್ಯ ಅಗಾಧ ಸೇವೆ ಗೈಯ್ಯುತ್ತಿರುವ ಜೇನುಗೂಡು.

ಅನನ್ಯ ಅಗಾಧ ಸೇವೆ ಗೈಯ್ಯುತ್ತಿರುವ ಜೇನುಗೂಡು.
ಬಸವನ ಬಾಗೇವಾಡಿ:ಬಸವನ ಬಾಗೇವಾಡಿ ಈ ಹೆಸರಲ್ಲೇ ಅದೆಂಥದೋ ಅಗಾಧ ಅನುಭಾವದ ಮಕರಂಧದ ಮಧುಸೇವನೆ ಮಾಡಿದ ಮನೋಲ್ಲಾಸ ಮನದಾನಂದ ನೀಡುತ್ತದೆ.
ಆ ನೆಲದ ಮಹಿಮೆಯೇ ಹಾಗೆ.ವಿಶ್ವಗುರು ಬಸಬಣ್ಣನವರ ಪಾದಸ್ಪರ್ಷಗಳ ಆ ಭೂಮಿಯಲ್ಲಿ ಜನಿಸಿದವರೇ ಪರಮಪಾವಿತ್ರರು.ಇಂಥ ಒಂದು ಪವಿತ್ರಭೂಮಿಯಲ್ಲಿ ಬೆಳೆಬೆಳೆಯುವ ಅನ್ನದಾತರ ಕುಟುಂಬಗಳೇ ಹೆಚ್ಚು.ರೈತಾಪಿಜನರು ತಮ್ಮ ಹೊಲಮನೆಗಳಲ್ಲಿ ಹೇಗೆ ಶ್ರದ್ಧೆಯಿಂದ ಬೆವರುಸುರಿಸಿ ದುಡಿದು ಬದುಕುವರೋ ಅದೇರೀತಿ ಮಾತು,ನಡೆಯಲ್ಲೂಕೂಡಾ ಸತ್ಯ ತ್ಯಾಗ,ಪ್ರಾಮಾಣಿಕತೆಗೆ ಇನ್ನೊಂದು ಹೆಸರೇ ಈ ನಾಡು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ.

ಇತ್ತೀಚಿನ ಕೆಲವು ಸಂಘಸಂಸ್ಥೆಗಳು ತಮ್ಮತನವನ್ನು ಕಳೆದುಕೊಂಡು ಜಾತಿ,ಧರ್ಮಗಳ ಒಳನುಸುಳಿ ಪಾವಿತ್ರತೆಯನ್ನು ಕಳೆದುಕೊಂಡಿವೆ. ಕೆಲವುಸಂಘಟನೆಗಳಂತೂ ಬದುಕಿಗಾಗಿ,ಹೊಟ್ಟೆಪಾಡಿಗೆ ಅಂದರೆ ಉದರನಿಮಿತ್ಯಂ ಬಹುಕೃತವೇಷಂ ಎನ್ನುವಷ್ಟರ ಮಟ್ಟಿಗೆ ಕೀಳಮಟ್ಟಕ್ಕಿಳಿದಿವೆ.ಇಂಥಾ ಸಂದರ್ಭಗಳಲ್ಲಿ ಯೂ ಕೂಡಾ ಅಲ್ಲೊಂದು,ಇಲ್ಲೊಂದು ಎಲೆಮರೆಕಾಯಿಯಾಗಿ ಅಗಾಧ ಸೇವೆ ಸಲ್ಲಿಸುತ್ತಿರುವ ಸಂಘಟನೆಗಳೂ ಇವೆ.ಅವುಗಳಲ್ಲಿ ಬಸವನ ಬಾಗೇವಾಡಿಯ “ಜೇನುಗೂಡು”ಇದು ಸಂವೆಂದು ಅಥವಾ ಸಂಸ್ಥೆ ಎಂದು ಹೇಳಲಾಗದು.ಇದು ಕೇವಲ ನಿಸ್ವಾರ್ಥ ಸೇವೆ ಮಾಡುವುದೊಂದೇ ಇದರ ಮೂಲ ಉದ್ದೇಶ.ಇದು ಸಂಘ ಅಥವಾ ಸಂಸ್ಥೆ ಎಂದು ಹೇಳಲಾಗದು ಅಂತ ಯಾಕೆ ಹೇಳಿದೆ ಎಂದರೆ ಈ ಜೇನುಗೂಡಲ್ಲಿ ಕನಿಷ್ಟಪಕ್ಷ ಇನ್ನೂರಕ್ಕೂಹೆಚ್ಚು ಸದಸ್ಯರ ಒಟ್ಟು ನಾಯಕತ್ವದ ಜೇನುಗೂಡು.ಇದಕ್ಕೆ ಅಧ್ಯಕ್ಷರ ಕೊಂಬು ಇಲ್ಲಾ ಯಾವುದೇ ಪದಾಧಿಕಾರಿಗಳ ಕಿರೀಟವೂಇಲ್ಲಾ ಅದಕ್ಕಾಗಿಯೇ ಇದು ಜೇನುಗೂಡಾಗಿದೆ.

ಇದರಲ್ಲಿ ಕನಿಷ್ಠ ಇನ್ನೂರಕ್ಕೂಹೆಚ್ಚು ಸದಸ್ಯರು ಇದ್ದು ಇವರಲ್ಲಿ ಬಹುತೇಕ ಎಲ್ಲರೂ ಕಾಯಕಯೋಗಿಗಳೇ. ವಕೀಲರು, ವೈದ್ಯರು,ನೌಕರಸ್ತರು,ವ್ಯಾಪಾರಸ್ತರು…ಹೀಗೆ ಇವರು ಈ ಸಂಸ್ಥೆಯ ಕೆಲಸ ಕಾರ್ಯಗಳಿಗಾಗಿ ಯಾವ ರಾಜಕಾರಣಿ,ಅಧಿಕಾರಿ ಮುಂತಾದವರ ಬಳಿ ಹೋಗಿ ಚಂದಾವಸೂಲಿ ಮಾಡುವವರಲ್ಲಾ.ಸಂಘದ ಯಾವುದೇ ಕೆಲಸಕಾರ್ಯಗಳಿಗೆ ತಾವುಗಳೀ ಸ್ವತಃ ಹಣ,ಶ್ರಮ,ಸಮಯ ವ್ಯದಾನಮಾಡುತ್ತಾ ಸುಮಾರು ಎ್ಟುವರ್ಷಗಳಿಂದ ಸಮಾಜಿಕ

ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಮಾಡುತ್ತಿರು ಕೆಲಸಕಾರ್ಯಗಳನ್ನು ಗಮನಿಸಿದರೆ ಎಂಥವರಿಗೂ ಪ್ರೇರಣೆಯಾಗಬಲ್ಲದು.
ಜೇನುಗೂಡು ಬಸಬನಬಾಗೇವಾಡಿ ತಾಲೂಕಿನಾದ್ಯಂತ ಎಂಟು ವರ್ಷಗಳಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಗಿಡ ಗಳನ್ನು ನೆಟ್ಟಿರುವರು ಅವುಗಳಲ್ಲಿ ಬಹುತೇಕ ಗಿಡಗಳುಬೆಳೆದುನಿಂತು ಮರಗಳಾಗಿದ್ದಾವೆ ಅವುಗಳನ್ನು ನೋಡಿದರೆ ಬಹಳ ಮನದಾನಂದವಾಗುತ್ತದೆ ಎಂದು ಜೇನುಗೂಡು ಸದಸ್ಯರಾದ ಶ್ರೀಯುತ ಶಿವಪುತ್ರಯ್ಯ ಸ್ವಾಮಿ ಒಡೆಯರ್ ಖುಷಿಯಿಂದ ಹೇಳಿಕೊಳ್ತಾರೆ.

ಶಾಲೆ,ಕಾಲೇಜು,ಹಾಸ್ಟೆಲ್, ದೇವಸ್ಥಾನವುಗಳಲ್ಲಿ ಮತ್ತು ಇತರೆ ಕಡೆಗಳಲ್ಲಿ ಸುಮಾರು ಹತ್ತುಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿದ್ದಾರೆ ಇವುಗಳ ಪಾಲನಿಪೋಷನೆಗಳಲ್ಲಿ ಶಾಲಾಕಾಲೇಜು ಹಾಸ್ಟೆಲ್ ವಿದ್ಯಾರ್ಥಿ ಗಳ ಶ್ರಮವೂ ಹೆಚ್ಚಿನದಾಗಿದೆ ಎಂದು ಸ್ಲಾಗಿಸಿದರು.
ಈ ಜೇನುಗೂಡು ಕಾರ್ಯ ಇಷ್ಟಕ್ಕೇ ಸೀಮಿತವಾಗಿಲ್ಲಾ ಅತ್ಯಂತ ಪರಿಸರ ಪ್ರೇಮಿಯೂಕೂಡಾ ಹೌದು.ಪಾಳು ಬಾವಿಗಳನ್ನು ಸುಚಿಗೊಳಿಸುವುದು,ಶಾಲಾಕಾಲೇಜು ದೇವಸ್ಥಾನಗಳ ಸುತ್ತಮುತ್ತಲಿನ ಕಸಕಡ್ಡಿಗಳನ್ನು ತೆರವುಗೊಳಿಸಿ ಪರಿಸರ ಸ್ನೇಹಿ ಕಾರ್ಯಗಳನ್ನು ಇವರ ಸದಸ್ಯರು ಸ್ವತಃ ಶ್ರಮದಾನ ಮಾಡಿ ಪರಿಸರ ಪ್ರಿಯರಾಗಿದ್ದಾರೆ.ಬಸಬನಬಾಗೇವಾಡಿ ತಾಲೂಕಿನಾದ್ಯಂತ ನಿಸ್ವಾರ್ಥದಿಂದ ಸ್ವಯಂ ಪ್ರೇರಿತರಾಗಿ ಯಾವುದೇ ಪಲಾಪೇಕ್ಷೆಗಳಿಲ್ಲದೆ ಸಾಮಾಜಿಕ ಚಟುವಟಿಕೆಗಳಮುಖಾಂತರ ಪರಿಸರ ಪ್ರೇಮಿಗಳು ಶ್ರಮದಾನನೀಡುತ್ತಿರುವುದು ಇಂದಿನ ಪೀಳಿಗಿಯು ಅನುಸರಿಸುವಂತಾಗಲಿ.ಈ ಜೇನುಗೂಡು ಹೆಚ್ಚುಹೆಚ್ಚು ಜೇನು ಸೇರಿಸಿ ಮಕರಂದ ಗಳಂತೆ ಒಟ್ಟಾಗಿರಲೆಂದು ಹಾರೈಕೆ

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments