ಭಾರತೀಯ ಭೂ ಸೇನೆಯಲ್ಲಿ ಕರ್ತವ್ಯ ನಿರತ ಲೆಫ್ಟಿಂನೆಂಟ್ ಕರ್ನಲ್ ಏನ್. ಗಿರೀಶ್ ನಿಧನ – ಸ್ವಗ್ರಾಮವಾದ ಮನ್ಮನೆ ಗೆ ಪಾರ್ಥಿವ ಶರೀರ ರಾತ್ರಿ 08:00 ಗಂಟೆಗೆ ಬರುವ ಸಾಧ್ಯತೆ – ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಸಂಸ್ಕಾರಕ್ಕೆ ಸಕಲ ಸಿದ್ಧತೆ ತಹಸೀಲ್ದಾರ್ ಸ್ಪಷ್ಟನೆ
ಸಿದ್ದಾಪುರ (ಉ. ಕ ):- ಕಾರವಾರ ಜಿಲ್ಲೆ ಸಿದ್ದಾಪುರ (ಉ. ಕ ) ತಾಲ್ಲೂಕು ಮನ್ಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನ್ಮನೆ ಗ್ರಾಮದ ನಿವಾಸಿಯಾದ ಶ್ರೀಮಾನ್ ಏನ್. ಗಿರೀಶ್ ರವರು ಕಳೆದ 35 ವರ್ಷಗಳಿಂದ ಭಾರತೀಯ ಭೂ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೂ, ಪ್ರಾರಂಭದಲ್ಲಿ ಸ್ಟೋರ್ ಕೀಪರ್ ಆಗಿ ಕರ್ತವ್ಯಕ್ಕೆ ಸೇರಿದ್ದು, ಸಿಕಂದರ್ ಬಾದ್ ನ M. E. ಗ್ರೂಪ್ ನಲ್ಲಿ ಲೆಫ್ಟಿಂನೆಂಟ್ ಕರ್ನಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅನಾರೋಗ್ಯದಿಂದ ಪೂನಾ ಕಮಾಂಡಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೂ, ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಸಂಜೆ 06::00 ಗಂಟೆಯ ಸುಮಾರಿಗೆ ವಿಧಿವಶರಾದರು. ಇವರುಗಳು ಪತ್ನಿ ಇಬ್ಬರು ಮಕ್ಕಳು, ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.
ರಾತ್ರಿ 08:00 ಗಂಟೆಗೆ ಲೆಫ್ಟಿಂನೆಂಟ್ ಕರ್ನಲ್ ಏನ್. ಗಿರೀಶ್ ರವರ ಪಾರ್ಥಿವ ಶರೀರವೂ ಸ್ವಗ್ರಾಮವಾದ ಮನ್ಮನೆಗೆ ಮಿಲಿಟರಿ ವಾಹನದಲ್ಲಿ ಬರುತ್ತಿದ್ದೂ, ಕಾರವಾರ ಜಿಲ್ಲಾಡಳಿತ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದೂ ಸಿದ್ದಾಪುರದ ತಹಸೀಲ್ದಾರ್ ರವರಾದ ಎಂ. ಆರ್. ಕುಲಕರ್ಣಿ ಮಾಧ್ಯಮಕ್ಕೆ ಸ್ಪಷ್ಟನೆ ನೀಡುತ್ತಾ ಲೆಫ್ಟಿಂನೆಂಟ್ ಕರ್ನಲ್ ಶ್ರೀ ಗಿರೀಶ್ ರವರ ನಿಧನ ವಾರ್ತೆ ಕೇಳಿ ತೀವ್ರ ಬೇಸರ ವ್ಯಕ್ತಪಡಿಸುತ್ತಾ ರಾಷ್ಟ್ರಕ್ಕೆ ತುಂಬಲಾರದ ನಷ್ಟ ಎಂದೂ ನುಡಿದರು
✒️ ಓಂಕಾರ ಎಸ್. ವಿ. ತಾಳಗುಪ್ಪ