ದಾವಣಗೆರೆ ಆ೨:ಬಾಡ ಕ್ರಾಸ್ ಬಳಿ ವಿಶ್ವ ಮಾನವ ಮಂಟಪ ವಿಶಾಲ ಹಸಿರು ಮೈವೋದ್ದ ಸುಂದರ ಕುಟೀರದಲ್ಲಿ ಆಗಾಗ್ಗೆ ಅಲ್ಲಿ ವೈಚಾರಿಕ ಪ್ರಜ್ಞೆ ಚಿಂತನಶೀಲ ಪ್ರಬುದ್ಧತೆ ಹೊಂದಿದ ಪ್ರಗತಿಪರ ಸಂಘಟನೆಗಳ ಕ್ರಿಯಾಶೀಲರು ನೆಡೆಸುವ ಚಿಂಥನ ಮಂಥನ ಕಾರ್ಯಕ್ರಮದಲ್ಲಿ ಇಪ್ಟಾ ಸಾಂಸ್ಕೃತಿಕ ಸಾಮಾಜಿಕ ಕಳಕಳಿ ಸಂಘಟನಾ ಮನೋಭಾವ ಗೆಳೆಯರು
ಒಂದೆಡೆ ಸೇರಿ ಹಲವು ಪ್ರಗತಿಪರ ವಿಚಾರಗಳನ್ನು ಹಂಚಿಕೊಳ್ಳುವ ಮೂಲಕ ಕುವೆಂಪು ವಿಶ್ವ ಮಾನವ ಸಂದೇಶ ಸಾರುವ ಕಿರುಹೊತ್ತಿಗೆ ಅನಾವರಣ ಮಾಡುವ ಮುಖಾಂತರ ಪ್ರಗತಿಶೀಲ ವಿಚಾರ ತಲುಪಿಸಲು ಪ್ರತಿಜ್ಞೆ ಕೈಗೊಂಡರು.
ದಾವಣಗೆರೆಜಿಲ್ಲೆಯ ಹಿರಿಯ ರೈತ ಹೋರಾಟಗಾರ, ಚಿಂತಕರು, ಪ್ರಗತಿಶೀಲ ವಿಶ್ವ ಮಾನವ ಮಂಟಪ ಟ್ರಸ್ಟ್ ಸ್ಥಾಪಿಸಿ ಸುತ್ತ ೩ ದಶಕಗಳಿಂದ
ಒಂದಿಲ್ಲೊಂದು ರೀತಿಯಲ್ಲಿ
ವೈಚಾರಿಕ ಸಾಹಿತ್ಯ ಪ್ರಜ್ಞೆ,ಶರಣರ ಅನುಭಾವ ಸಾಹಿತ್ಯ ಕೃತಿ ಮಂಥನ, ಜನಪರ ಕಾಳಜಿಯ ಸಾಂಸ್ಕೃತಿಕ ಚಟುವಟಿಕೆಗಳು,ಬುದ್ದ ಬಸವ ಗಾಂಧಿ ಕನಕ, ವಾಲ್ಮೀಕಿ ಅಂಬೇಡ್ಕರ್ ರವರ ವಿಚಾರ
ಸ್ವಾತಂತ್ರ್ಯ ಹೋರಾಟಗಾರರನ್ನು ವಚನಕಾರರು ಕೃತಿ ಕಿರುಹೊತ್ತಿಗೆ ಮಾಡಿ ಜನರಲ್ಲಿ ತಮ್ಮದೇ ವಿಭಿನ್ನ ವಿಶಿಷ್ಟ ರೀತಿಯಲ್ಲಿ ಜನರಿಗೆ ತಲುಪಿಸುವ ಹೊಣೆಗಾರಿಕೆ ಹೊತ್ತು
ಭಿಕ್ಷಾನ್ನ ಮಾಡಿ ತಮ್ಮ ಕನಸುಗಳ ಸಾಕಾರ ಗೊಳಿಸುವ ನಿಟ್ಟಿನಲ್ಲಿ ಸಾಗುತ್ತಿರುವ ಅವರಗೆರೆ ರುದ್ರಮುನಿ ರವರ
ಪೂರ್ವಜರ ಸ್ವಂತ ವಿಶಾಲ ನೆಲದಲ್ಲಿ ತಾವೇ ಸ್ವತಃ ಬೇಡಿ, ಭಿಕ್ಷಾಟನೆ ಮಾಡಿ ಕಟ್ಟಿದ ವಿಶ್ವ ಮಾನವ ಮಂಟಪ ಕುಟೀರದಲ್ಲಿ ಆಗಾಗ್ಗೆ ಅಲ್ಲಿ ವೈಚಾರಿಕ ನೆಲೆಯಲ್ಲಿ ಸಮಾಜದಲ್ಲಿನ ಎಲ್ಲಾ ಸಮುದಾಯ ವರ್ಗದ ಜನರು ನೆಡೆಸುವ ಚಿಂಥನ ಕಾರ್ಯ
ಕುವೆಂಪು ಅವರ ವಿಶ್ವಮಾನವ ಸಂದೇಶ ವಿಚಾರ ಕ್ರಾಂತಿ ಕಿರು ಹೊತ್ತಿಗೆ ಬಿಡುಗಡೆ
ಸಂದರ್ಭದಲ್ಲಿ ಹಿರಿಯ ಸಾಮಾಜಿಕ ಶೋಷಿತ ವರ್ಗಗಳ ಇಪ್ಟಾ ಜನಪರ ಕಲಾತಂಡದ ಮುಖಂಡರಾದ ಹೆಗ್ಗೆರೆ ರಂಗಪ್ಪ
ಐರಣಿಚಂದ್ರು, ಹಿರಿಯ ಮಾಧ್ಯಮ ಪತ್ರಕರ್ತ ಪುರಂದರ್ ಲೋಕಿಕೆರೆ, ಶ್ರೀನಿವಾಸ್ ತುರ್ಚಘಟ್ಟ ಮಲ್ಲಿಕಾರ್ಜುನ ಹೊನ್ನಾಳಿ
ಬಾನಪ್ಪ ಅವರಗೆರೆ ಹರೀಶ್ ಮುದ್ದೇನಹಳ್ಳಿ, ಮಲ್ಲಿಕಾರ್ಜುನ
ಹಲವರು ಪಾಲ್ಗೊಂಡಿದ್ದರು
ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದ ಸಹಕಾರ ಸಂಘಗಳ ಒಕ್ಕೂಟದ ಮೂಲಕ ರೈತರ ಸಮಸ್ಯೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯ
ಅಂತರ್ಜಾತಿ ವಿವಾಹೀತರ ಸಾಮಾಜಿಕ, ಆರ್ಥಿಕ, ಸಬಲತೆ
ಅಂತರ್ ಧರ್ಮೀಯ ವಿವಾಹಿತರ ಕ್ಷೇಮಾಭಿವೃದ್ಧಿ ವೇದಿಕೆ ರಾಜ್ಯ ಮಟ್ಟದ ಸಮಾವೇಶ ಸಂಘಟಿಸಿ ಸರ್ಕಾರದ ಮೇಲೆ ಒತ್ತಡ ಹೇರಲು ಈ ಸಂದರ್ಭದಲ್ಲಿ ನಿರ್ಣಯ ಕೈಗೊಳ್ಳಲಾಯಿತು