Wednesday, May 6, 2026
Homeಶಿಕ್ಷಣನಾಲಂದ ಪದವಿ ಪೂರ್ವ ಕಾಲೇಜು ಆವರಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಉದ್ಘಾಟನೆ

ನಾಲಂದ ಪದವಿ ಪೂರ್ವ ಕಾಲೇಜು ಆವರಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಉದ್ಘಾಟನೆ

ಜಗಳೂರು ಪಟ್ಟಣದ ನಾಲಂದ ಪದವಿ ಪೂರ್ವ ಕಾಲೇಜು ಆವರಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಉದ್ಘಾಟನೆ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಇದೆ ವೇಳೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ
ಕನ್ನಡ ನಿವೃತ್ತ ಉಪನ್ಯಾಸಕ ವಸಂತ ಅವರು ವಿಧ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಶಿಕ್ಷಣಕ್ಕೆ ಆದ್ಯತೆ ನೀಡಿ ಪೋಷಕರು ಶಿಕ್ಷಕರುನ್ನು ಗೌರವಿಸಿ ಎಂದರು.

ಇನ್ನೂ ಪ್ರಂಶುಪಾಲರಾದ ಸಿ‌. ತಿಪ್ಪೇಸ್ವಾಮಿ , ವಿದ್ಯಾರ್ಥಿಗಳ ಜೀವನ ದೇಸೆಯಲ್ಲಿ ಶ್ರದ್ಧೆ ಇಲ್ಲದೆ ಜೀವನ ಹಾಳು ಮಾಡಿ ಕೊಳುತ್ತಿದ್ದರೆ. ಶ್ರಧೆಯಿಂದ ವಿದ್ಯಾರ್ಥಿಗಳ ಸತತ ಪ್ರಯತ್ನದಿಂದ ಉನ್ನತ ಶ್ರೇಣಿಗಳಿ ಯಶಸ್ಸು ಕಾಣಾಬಹುದು. ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗಳುಲ್ಲಿ ಉತ್ತಮ ಅಂಗಳನ್ನು ಪಡೆಯುವುದರ ಜೊತೆಗೆ ಪಠ್ಯೇತರ ಚಟುವಟಿಕೆಗಳೊಂದಿಗೆ ಕ್ರೀಡಾ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತ ಹೇಳಿದರು.

ಈ ಸಂದರ್ಭದಲ್ಲಿ ಪ್ರಂಶುಪಾಲರಾದ ಸಿ‌. ತಿಪ್ಪೇಸ್ವಾಮಿ , ವಿಧ್ಯಾರ್ಥಿಗಳು ಸಂಘದ ಅಧ್ಯಕ್ಷ ಬಿ. ಏನ್. ಎಂ.ಸ್ವಾಮಿ , ಉಪನ್ಯಾಸಕರಾದ ನಾಗೇಶ್ ಆರ್ , ಕೆ.ಪಿ. ದೇವರಾಜ್‌, ರಾಜಣ್ಣ , ಪರಮೇಶ್ವರಪ್ಪ , ರಾಜೇಶ್ ಜೈನ್ ಸೇರಿದಂತೆ ಮತ್ತಿತರರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments