ಮೂಡಲಗಿ: ಸ, 09-ತಾಲೂಕಿನಲ್ಲಿ ನಗರೋತ್ಥಾನ ಯೋಜನೆಯಡಿ ಪ್ರಾರಂಭವಾದ ಕಾಮಗಾರಿಗಳು ಶೇಕಡಾ 25 ರಷ್ಷು ಭಾಗ ಪೂರ್ಣಗೊಂಡಿದ್ದು.ಅದರ ಪರಿಶೀಲನಾ ವರದಿಯನ್ನು ಸರ್ಕಾರಕ್ಕೆ ಕಳುಹಿಸಲು,ಜಿಲ್ಲೆಯಾದ್ಯಂತ ಕಾಮಗಾರಿಗಳನ್ನು ಪರಶೀಲನೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳಾದ ನಿತೀಶ ಪಾಟೀಲ ತಿಳಿಸಿದರು.
ಗುರುವಾರ ಪಟ್ಟಣದ ಲಕ್ಷ್ಮೀ ನಗರ ಹಾಗೂ ಆಝಾದ್ ನಗರ ವ್ಯಾಪ್ತಿಯಲ್ಲಿ ನಗರೋತ್ಥಾನ ಯೋಜನೆಯಡಿ ನಿರ್ಮಾಣ ಹಂತ-04ರಲ್ಲಿ ವಿವಿಧ ಕಾಮಗಾರಿಗಳನ್ನು ವಿಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿ,ತಾಲೂಕಿನ ಅರಭಾವಿ,ಕಲ್ಲೋಳಿ, ನಾಗನೂರು ಮತ್ತು ಮೂಡಲಗಿ ಪಟ್ಟಣದ ಕಾಮಗಾರಿ ಪರಿಶೀಲನೆ ಮಾಲಾಗಿದ್ದು.ಪ್ರಗತಿ ಹಂತದಲ್ಲಿವೆ ಎಂದರು. ಇದೆ ಸಂದರ್ಭದಲ್ಲಿ ಪುರಸಭೆ ವ್ಯಾಪ್ತಿಯಲ್ಲಿರುವ ಖಾಲಿ ಜಾಗವನ್ನು ಅಕ್ರಮವಾಗಿ ಬಳಿಸಿಕೊಂಡು ಶೇಡ್ ನಿರ್ಮಾಣ (ಹಾಕಿ) ಮಾಡಿಕೊಂಡಿರುವುದರ ಬಗ್ಗೆ ಸಾರ್ವಜನಿಕರು ಜಿಲ್ಲಾಧಿಕಾರಿಗಳ ಬಳಿ ಹೇಳಿಕೊಂಡ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಿತೀಶ ಪಾಟೀಲ ಅವರು ಸ್ಥಳೀಯ ಪುರಸಭೆ ಮುಖ್ಯಾಧಿಕಾರಿಗೆ ಪುರಸಭೆಯ ಖಾಲಿ ಜಾಗವನ್ನು ಅಕ್ರಮವಾಗಿ ಬಳಸಿಕೊಂಡು ನಿರ್ಮಾಣ ಮಾಡಿರುವ ಶೇಡ್ ಗಳನ್ನು ತೆರವುಗೊಳಿಸುವಂತೆ ಸೂಚಿಸಿದರು.
ಮೂಡಲಗಿ ತಹಶಿಲ್ದಾರರಾದ ಶಿವಾನಂದ ಬಬಲಿ,ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ,ತಹಶಿಲ್ದಾರರ ಕಛೇರಿಯ ಶಿರಸ್ಥೆದಾರ ಪರಶುರಾಮ ನಾಯಕ,ಪುರಸಭೆಯ ಆರೋಗ್ಯ ನಿರೀಕ್ಷಕ ಚಿದಾನಂದ ಮುಗಳಖೋಡ ಹಾಗೂ ವಿವಿಧ ಅಧಿಕಾರಿಗಳು ಪಾಲ್ಗೊಂಡಿದ್ದರು.