ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಚನ್ನಯ್ಯ ಒಡೆಯರ್ ರವರ ಸುಪುತ್ರರು ಹಾಗೂ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿಗಳಾದ ಶ್ರೀ ಶಿವಕುಮಾರ್ ಒಡೆಯರ್ ಅವರು ಇಂದು ದಾವಣಗೆರೆ ಲೋಕಸಭಾ ಕ್ಷೇತ್ರ ಮತ್ತು ಹರಿಹರ ವಿಧಾಸಭಾ ಕ್ಷೇತ್ರದ ವ್ಯಾಪ್ತಗೆ ಬರುವ ಹಾಲಿವಾಣ

ಕೋಮಾರನಹಳ್ಳಿ, ಕುಂಬಳೂರು, ಸಂಕ್ಲಿಪುರ, ಗುಳದಹಳ್ಳಿ, ಮಾಲನಾಯಕನಹಳ್ಳಿ, ಹರಳಹಳ್ಳಿ, ಕೊಪ್ಪ ಗ್ರಾಮಕ್ಕೆ ಭೇಟಿ ನೀಡಿ ಮುಂಬರುವ ಲೋಕಸಭಾ ಚುನಾವಣೆಯ ಬಗ್ಗೆ ಸಭೆ ನಡೆಸಲಾಯಿತು,

ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಪರಮೇಶ್ವರಪ್ಪನವರು, ರೇವಣಸಿದ್ಧಪ್ಪ, ಮಗಾನಹಳ್ಳಿ ಹಾಲಪ್ಪ, ಏಕಾಂತಪ್ಪ, ಶೇಖರಪ್ಪ, ಮಂಜುನಾಥ್, ಕುಮಾರ, ನಿಂಗಪ್ಪ, ಕಬ್ಬಾರ್ ಶೇಖರಪ್ಪ, ಮತ್ತು ಅನೇಕ ಮುಖಂಡರು ಗ್ರಾಮ ಪಂಚಾಯತಿ ಅಧ್ಯಕ್ಷರು ಸದಸ್ಯರು ಹಾಗೂ ಅನೇಕ ಮುಖಂಡರು ಮತ್ತು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು