Saturday, December 21, 2024
Homeಸಾಧನೆಬೆಳ್ಳಿ ಸಂಭ್ರಮಕ್ಕೆ ಸಜ್ಜಾದ ಶ್ರೀ ಬಸವೇಶ್ವರ ಸೊಸಾಯಿಟಿ   

ಬೆಳ್ಳಿ ಸಂಭ್ರಮಕ್ಕೆ ಸಜ್ಜಾದ ಶ್ರೀ ಬಸವೇಶ್ವರ ಸೊಸಾಯಿಟಿ   

   ‌    ಮೂಡಲಗಿ: ಸ,22-ಪಟ್ಟಣದಲ್ಲಿ “ಬೆಳ್ಳಿ ಹಬ್ಬಕ್ಕೆ “ಸಜ್ಜಾಗಿದೆ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿ,ಮೂಡಲಗಿ.

 ಸಪ್ಟೆಂಬರ್ 25-2023 ರಂದು ಹಬ್ಬದ ವಾತಾವರಣದಂತೆ ಆಕರ್ಷಣೆ ಅಥವಾ ಮದುವನಗಿತ್ತಿ ಹಾಗೆ ಕಂಗೊಳಿಸುತ್ತದೆ.

ಸೋಮವಾರ 25 ರಂದು ಮಧ್ಯಾಹ್ನ  3 ಗಂಟೆಗೆ ಬಸವ ಮಂಟಪದಲ್ಲಿ ಕಾರ್ಯಕ್ರಮ ಜರುಗುವುದು ಎಂದು ಸೊಸಾಯಿಟಿಯ ಅಧ್ಯಕ್ಷ ಬಸವರಾಜ ತೇಲಿ ಹೇಳಿದರು.

  ಸೊಸಾಯಿಟಿಯ ಸಭಾ ಭವನದಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು.                      ಅರಭಾವಿ ಶ್ರೀ ದುರದುಂಡೇಶ್ವರ ಪುಣ್ಯರಣ್ಯ ಮಠದ ಶ್ರೀ ಸಿದ್ಧಲಿಂಗ ಸ್ವಾಮಿಗಳು,ಕೊಪ್ಪಳ ಶ್ರೀ ಗವಿಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮಿಗಳು,ಅಂಕಲಗಿ ಕುಂದರಗಿ ಮಠದ ಶ್ರೀ ಅಮರಸಿದ್ದೇಶ್ವರ ಸ್ವಾಮಿಗಳು,ಸುಣಧೋಳಿ ಶ್ರೀ ಜಡಿಸಿದ್ದೇಶ್ವರ ಮಠದ ಶ್ರೀ ಶಿವಾನಂದ ಸ್ವಾಮಿಗಳು ಮತ್ತು ಮೂಡಲಗಿ ಮಠದ  ಶ್ರೀದತ್ತಾತ್ರೇಯಬೋಧ ಸ್ವಾಮಿಗಳು ಸೊಸಾಯಿಟಿಯ ಸಮಾರಂಭದಲ್ಲಿ ಸಾನಿದ್ಯ ವಹಿಸುವವರು ಎಂದು ಸೊಸಾಯಿಟಿಯ ಉಪಾಧ್ಯಕ್ಷ ಗಿರೀಶ ಢವಳೇಶ್ವರ ತಿಳಿಸಿದರು.  ಸಚಿವ ಸತೀಶ ಜಾರಕಿಹೊಳಿ ಉದ್ಘಾಟಕರಾಗಿ,ಅತಿಥಿಗಳಾಗಿ ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ,ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಜಾರಕಿಹೊಳಿ,ಸಂಸದರಾದ ಶ್ರೀ ಮತಿ ಮಂಗಲಾ ಅಂಗಡಿ,ರಾಜ್ಯ ಸಭಾ ಸದಸ್ಯರಾದ ಈರಣ್ಣ ಕಡಾಡಿ,ಬಿಡಿಸಿ ಬ್ಯಾಂಕಿನ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಬೆಳಗಾವಿ ಜಿಲ್ಲೆಯ ಸಹಕಾರ ಸಂಘಗಳ  ಸುರೇಶ ಗೌಡ, ಎಮ್.ಎಸ್.ಮನಿ ಮತ್ತು ಶ್ಯಾಯಿನ್ ಆಖ್ತರ ಪಾಲ್ಗೊಳ್ಳುವವರು ಎಂದು ಸೊಸಾಯಿಟಿಯ ಅಧ್ಯಕ್ಷರಾದ ಬಸವರಾಜ ತೇಲಿ.

ಪ್ರಧಾನ ಕಛೇರಿಯ ಪ್ರಧಾನ ವ್ಯವಸ್ಥಾಪಕ ಬಸವರಾಜ ಬಡಿಗೇರ ಹೇಳಿದರು.

ಮುಂಜಾನೆ  10 ಗಂಟೆಗೆ ಸೊಸಾಯಿಟಿಯ ಸಭಾ ಭವನದಲ್ಲಿ ವಾರ್ಷಿಕ ಸರ್ವ ಸಾದಾರಣ ಸಭೆ ನಡೆಯುವುದು.ಬಸವ ರಂಗ ಮಂಟಪದಲ್ಲಿ 11ಗಂಟೆಗೆ ಜಾನಪದ  ಕಲಾ ತಂಡದಿಂದ ಕಾರ್ಯಕ್ರಮ,3 ಗಂಟೆಯಿಂದ ಬೆಳ್ಳಿ ಹಬ್ಬದ ಸಂಭ್ರಮ, ಸಂಜೆ 6-30 ಕ್ಕೆ ಖ್ಯಾತ ಹಿನ್ನೆಲೆ ಗಾಯಕರಾದ ಡಾllಶಮಿತಾ ಮಲ್ನಾಡ ತಂಡದಿಂದ ಸಂ ರಸ ಮಂಜರಿ ಇದೆ.ಸೊಸಾಯಿಟಿಯ ನಿರ್ದೇಶಕರುಗಳಾದ ಚ್ನಬಸು ಬಡ್ಡಿ,ಶ್ರೀಕಾಂತ ಹಿರೇಮಠ, ರವೀಂದ್ರ ಬಾಗೋಜಿ,ಶ್ರೀ ಶೈಲ ಮದಗನ್ನವರ,ಮಲ್ಲಿಕಾರ್ಜುನ ಢವಳೇಶ್ವರ, ದೇವಪ್ಪ ಕೌಜಲಗಿ ಮತ್ತು ಲಕ್ಷ್ಮಣ ತೆಳಗಡೆ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments