ದಾವಣಗೆರೆ:ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 38ನೇ ರಾಜ್ಯ ಸಮ್ಮೇಳನವು ಈ ವರ್ಷಾಂತ್ಯದಲ್ಲಿ ದಾವಣಗೆರೆಯಲ್ಲಿ ನಡೆಯಲಿದ್ದು ಇದರ ಪೂರ್ವಭಾವಿ ರೂಪರೇಶೆಗಳನ್ನು ಸಿದ್ದಪಡಿಸಲು ಹಾಗೂ ಅಭಿಪ್ರಾಯ – ಸಲಹೆ ಗಳನ್ನು ಸಂಗ್ರಹಿಸಲು ಮತ್ತು ವಿವಿಧ ಸಮಿತಿಗಳನ್ನು ರಚಿಸಲು ದಾವಣಗೆರೆಯ ಎಲ್ಲಾ ಪತ್ರಕರ್ತರುಗಳ ಸಭೆಯನ್ನು ದಿನಾಂಕ 23-9-2023ರ ಶನಿವಾರ ಸಂಜೆ 4 ಗಂಟೆಗೆ ದಾವಣಗೆರೆ ಪಿ. ಬಿ. ರಸ್ತೆ(ತ್ರಿಶೂಲ್ ಚಿತ್ರಮಂದಿರ ಹತ್ತಿರ) ಹೊಟೇಲ್ ಅಪೂರ್ವ ಸಭಾಂಗಣದಲ್ಲಿ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀ ಇ. ಎಂ. ಮಂಜುನಾಥ ಅವರ ಅಧ್ಯಕ್ಷತೆಯಲ್ಲಿ ಮತ್ತು ರಾಜ್ಯಾಧ್ಯಕ್ಷರಾದ ಶ್ರೀ ಶಿವಾನಂದ ತಗಡೂರು ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಜಿ.ಸಿ.ಲೋಕೇಶ್ ಅವರ ಸಮ್ಮುಖದಲ್ಲಿ ಕರೆಯಲಾಗಿದೆ. ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷರಾದ ಶ್ರೀ ಕೆ. ಏಕಾಂತಪ್ಪ, ರಾಜ್ಯ ಸಮಿತಿ ಸದಸ್ಯರಾದ ಶ್ರೀ ಕೆ. ಚಂದ್ರಣ್ಣ, ರಾಷ್ಟ್ರೀಯ ಸಮಿತಿ ಸದಸ್ಯರಾದ ಶ್ರೀ ಎಸ್.ಕೆ.ಒಡೆಯರ್ ಉಪಸ್ಥಿತರಿರುತ್ತಾರೆ.
ದಾವಣಗೆರೆಯ ಎಲ್ಲಾ ಹಿರಿಯ ಮತ್ತು ಕಿರಿಯ ಪತ್ರಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ತಮ್ಮ ಸಲಹೆ, ಸೂಚನೆ, ಅಭಿಪ್ರಾಯಗಳನ್ನು ನೀಡಿ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಪ್ರಧಾನ ಕಾರ್ಯದರ್ಶಿ ಯವರಾದ
ಎ.ಫಕೃದ್ದೀನ್ ರವರು ವಿನಂತಿಸಿದ್ದಾರೆ.