ಕರ್ನಾಟಕ ಕಾರ್ಯನಿರತ ಪತ್ರಕರ್ತರ 38,ನೇಯ ರಾಜ್ಯ ಸಮ್ಮೇಳನವು ವಿಜಯಪರದಲ್ಲಿ ನಡೆದ 37,ನೇಯ ಸಮ್ಮೇಳನದಲ್ಲಿ ನಿರ್ಣಯಿಸಿದಂತೆ ಈ ಬಾರಿ ಕರ್ನಾಟಕದ ಹೈದಯ ಎಂದು ಕರೆಯಲ್ಪಡುವ ದಾವಣಗೆರೆಯಲ್ಲಿ ಡಿಸೆಂಬರ್ ಕೊನೆಯವಾರದಲ್ಲಿ ನಡೆಯಲಿದ್ದು ಈಗಾಗಲೇ ಜಿಲ್ಲೆಯಲ್ಲಿ ವಿವಿಧ ರೀತಿಯ ಪೂರ್ವ ಭಾವಿ ಸಭೆಗಳನ್ನು ನಡೆಸಿ ಕಾರ್ಯಕ್ರಮ ಮಾದರಿಯಾಗಿನಡೆಯಬೇಕೆಂಬ ಉದ್ದೇಶದಿಂದ ಎಲ್ಲರನ್ನೂ ಒಳಗೊಂಡಂತೆ ಸಭೆಗಳನ್ನು ವಿವಿಧ ರಂಗಗಳ ಮುಖಂಡರೊಂದಿಗೆ ಚರ್ಚೆಗಳು ಮುಂದುವರಿದಿವೆ.
ಈಗಾಗಲೇ 38,ನೇ ಪತ್ರಕರ್ತರ ಸಮ್ಮೇಳನದ ಸಿದ್ಧತಾ ಸಭೆಯನ್ನು ಕರೆದು ಸಮ್ಮೇಳನದ ಸಿದ್ದತೆಗಾಗಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಶ್ರೀ ಕೆ.ವಿ.ಪ್ರಭಾಕರ್ ರವರು ಚಾಲನೆ ನೀಡಿದ್ದಲ್ಲದೆ ಸರ್ಕಾರದಿಂದ ಸಹಕಾರವನ್ನೂ ನೀಡಲಾಗುವುದು ಎಂದು ಹೇಳಿದ್ದಾರೆ.ಮತ್ತು ಸಮ್ಮೇಳನದ ಉದ್ಘಾಟನೆಗೆ ಮಾನ್ಯ ಮುಖ್ಯಮಂತ್ರಿಗಳನ್ನು ಬರಮಾಡಿಕೊಳ್ಳುವ ಭರವಸೆಯನ್ನೂ ನೀಡಿರುತ್ತಾರೆ.
ಈ ಎಲ್ಲಾ ಸಿದ್ಧತೆಗಳಂತೆ ದಿನಾಂಕ:23-9-2023,ರಂದು ಬೆಳಿಗ್ಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಸಮಿತಿ ಸಭೆಯು ಬೆಳಿಗ್ಗೆ ಹನ್ನೊಂದರಿಂದ ನಡೆದು ಹಲವು ಸುತ್ತಿನ ವಿಚಾರ ವಿನಿಮಯ ಗಳನ್ನು ಮಾಡಲಾಯಿತು.
ನಂತರ ಸಂಜೆ 5,ಗಂಟೆಗೆ ಹೊಟೆಲ್ ಅಪೂರ್ವ ದ ಸಭಾಂಗಣದಲ್ಲಿ ಹಿರಿಯ ಪತ್ರಕರ್ತರು ಮತ್ತು ಎಲ್ಲಾಪತ್ರಿಕೆಗಳ ಮುಖ್ಯ ವರದಿಗಾರು,ಹಿರಿಯ ಸಾಹಿತಿಗಳು,ಕಲಾವಿಧರು,ಸಂಘಸಂಸ್ಥೆಗಳ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿ ಕಾರ್ಯಕ್ರಮ ಯಶಸ್ವಿ ಗೊಳಿಸಲು ಅತ್ಯುತ್ತಮ ಸಲಹೆ ಸಹಕಾರಗಳನ್ನು ಪಡೆಯಲಾಯಿತು.ಕಳೆದ ಮೂವತ್ತು ವರ್ಷಗಳ ಹಿಂದೆ ದಾವಣಗೆರೆ ಚಿತ್ರದುರ್ಗ ಜಿಲ್ಲೆಯ ತಾಲೂಕ ಕೇಂದ್ರವಿದ್ದಾಗ ನಡೆದಿತ್ತು.ಈಗ ದಾವಣಗೆರೆ ಜಿಲ್ಲೆಯಾದನಂತರ ಪ್ರಥಮ ಬಾರಿಗೆ ದಾವಣಗೆರೆಯಲ್ಲಿ ಪತ್ರಕರ್ತರ ಸಮ್ಮೇಳನ ನಡೆಯುತ್ತಿರುವುದು ಅತ್ಯಂತ ಸಂತಸ ಮತ್ತು ಹೆಮ್ಮೆಯ ವಿಷಯ ಆದ್ದರಿಂದ ದಾವಣಗೆರೆಯ ಹಿರಿಯ ಜೀವಿಗಳು ಅತ್ಯುತ್ಸಹದಿಂದ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿ ಸಮ್ಮೇಳನ ಯಶಸ್ವಿಗೊಳಿಸುವ ಭರವಸೆಯನ್ನು ನೀಡಿದರು.
ಇದರ ಮುಂದುವರಿದ ಭಾಗವಾಗಿ ದಿನಾಂಕ:24-9-2023,ರಂದು ಜಿಲ್ಲೆಯ ಜಗಳೂರು ತಾಲೂಕು,ಚನ್ನಗಿರಿತಾಲೂಕು,ಹೊನ್ನಾಳಿ-ನ್ಯಾಮತಿ ತಾಲೂಕು,ಮತ್ತು ಹರಿಹರ ತಾಲೂಕುಗಳಿಗೆ ಭೇಟಿನೀಡಿ ಎಲ್ಲಾ ಘಟಕಗಳ ಪದಾಧಿಕಾರಿಗಳು ಹಾಗೂ ಸದಸ್ಯರುಗಳೊಂದಿಗೆ ಸಭೆಗಳನ್ನು ನಡೆಸಿ ಚರ್ಚೆ ನಡೆಸಲಾಯಿತು ಎಲ್ಲತಾಲೂಕು ಪತ್ರಕರ್ತ ಮಿತ್ರರು ಸಮ್ಮೇಳನ ಯಶಸ್ವಿಗೊಳಿಸಲು ತನು,ಮನ,ಶ್ರಮದಿಂದ ಪಾಲ್ಗೊಳ್ಳುವ ಉತ್ಸುಕತೆ ತೋರಿದರು.ಜಿಲ್ಲಾ ಅಧ್ಯಕ್ಷರಾದ ಇ.ಎಮ್.ಮಂಜುನಾಥ್ ಮತ್ತು ರಾಜ್ಯಪ್ರಧಾನ ಕಾರ್ಯದರ್ಶಿ ಯವರಾದ ಜಿ.ಸಿ.ಲೋಕೇಶ್ ರವರ ಮುಂದಾಳತ್ವದಲ್ಲಿ ಎರಡುದಿನ ನಡೆದ ಸಭೆಯಲ್ಲಿ ಸಮ್ಮೇಳನ ಯಶಸ್ವಿಗೊಳ್ಳುವ ಎಲ್ಲ ಸೂಚನೆಗಳು ಕಂಡುಬಂದದ್ದು ಸಮ್ಮೇಳನ ನಡೆಸಲು ಬಲ ಹೆಚ್ಚಿಸಿದಂತಾಗಿದೆ.