ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭಾದ, ಬೆಂಗಳೂರು ಇದರ ರಾಜ್ಯಾಧ್ಯಕ್ಷರಾಗಿ ನಗರದ ಎಸ್.ಕೆ.ಪಿ.ರಸ್ತೆಯ ವಾಸವಿ ಯುವಜನ ಸಂಘದ ಅಧ್ಯಕ್ಷ ಎಸ್. ಸುನಿಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಕ್ಟೋಬರ್ 8 ರಂದು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತೆ ಆರು ವಿಭಾಗಗಳಲ್ಲಿ ಚುನಾವಣೆ ನಡೆಸಲು ನಿಗಧಿಯಾಗಿತ್ತು. ನಾಮಪತ್ರ ಸಲ್ಲಿಸಲು ಸೆಪ್ಟೆಂಬರ್ 27 ಕೊನೆಯ ದಿನವಾಗಿತ್ತು. ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಗರದ ಎಸ್.ಸುನೀಲ್ ಹೊರತುಪಡಿಸಿ ರಾಜ್ಯಾದ್ಯಂತ ಯಾರೂ ನಾಮಪತ್ರ ಸಲ್ಲಿಸದ ಕಾರಣ ಸುನಿಲ್ ಅವರನ್ನು ಅವಿರೋಧವಾಗಿ ಘೋಷಿಸಲಾಯಿತು.
ಅವಿರೋಧವಾಗಿ ಆಯ್ಕೆಯಾಗಿರುವ ಸುನಿಲ್ ದಾವಣಗೆರೆ ಲಯನ್ಸ್ ಕ್ಲಬ್ ನ ಮಾಜಿ ಅಧ್ಯಕ್ಷ ವೈ.ಬಿ.ಸತೀಶ್ ಅವರ ಪುತ್ರ.ಸುನಿಲ್ ಗೆ ವಾಸವಿ ಯುವಜನ ಸಂಘದ ಮಾಜಿ ಸಂಚಾಲಕ ಬಿ.ಎಸ್.ಶಿವಾನಂದ, ಗೌರವಾಧ್ಯಕ್ಷರಾದ ಸಾಯಿಪ್ರಸಾದ್ ಬಿ.ಎನ್., ಬದರಿನಾಥ್ ಎನ್.ವಿ., ನಿಕಟಪೂರ್ವ ಅಧ್ಯಕ್ಷ ಅಮರಾವತಿ ಡಿ.ರಾಘವೇಂದ್ರ, ಕಾರ್ಯದರ್ಶಿ ಆರ್.ಎನ್.ಅಜಿತ್, ಖಜಾಂಚಿ ಬಿ.ಎಸ್.ರಾಘವೇಂದ್ರ ಹಾಗೂ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.
ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭಾದ ರಾಜ್ಯ ಅಧ್ಯಕ್ಷರಾಗಿ ನಗರದ ಎಸ್. ಸುನಿಲ್ ಅವಿರೋಧ ಆಯ್ಕೆ
RELATED ARTICLES