ದಾವಣಗೆರೆ: ೨೦೨೪ರ ಲೋಕಸಭೆ ಚುನಾವಣೆಯ ಸ್ಪರ್ಧಾ ಆಕಾಂಕ್ಷಿಗಳು ಸಹಜವಾಗಿಯೇ ಕಾಂಗ್ರೆಸ್ ಪಕ್ಷದಲ್ಲೇ ಹೆಚ್ಚಾಗಿದ್ದಾರೆ.ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಆಡಳಿದಲ್ಲಿರುವುದರಿಂದ ಶತಾಯಗತಾಯವಾಗಿ ಈ ಬಾರಿಯ ಲೋಕಸಭೆಗೆ ರಾಜ್ಯದಿಂದ ಟ್ವೆಂಟಿ ಪ್ಲಸ್ ಗುರಿಯೊಂದಿಗೆ ಚುನಾವಣಾ ರಣತಂತ್ರವನ್ನು ಕಾಂಗ್ರೇಸ್ ಪಕ್ಷ ಹೆಣೆಯುತ್ತಿದೆ.ಇವರ ನಿರೀಕ್ಷೆಯಂತೆ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಟಿಕೇಟ್ ಆಕಾಂಕ್ಷಿಗಳ ಸಂಖ್ಯೆಯೂ ಗಣನೀಯ ವಾಗಿದೆ.ಈ ಬಾರಿ ರಾಜ್ಯದಲ್ಲಿ ಹಿರಿಯ ತಲೆಗಳು,ಯುವಕರು,ಮಹಿಳೆಯರು ಸೇರಿ ಪ್ರತಿ ಲೋಕಸಭಾಕ್ಷೇತ್ರದಲ್ಲಿ ಐದರಿಂದ ಹತ್ತು ಜನ ಟಿಕೇಟ್ ಆಕಾಂಕ್ಷಿಗಳಿದ್ದಾರೆ.ಇದರಿಂದ ಗೆಲುವಿನ ಆಶಾಭಾವಹೊಂದಿರುವ ಕಾಂಗ್ರೆಸ್ ನಾಯಕರುಗಳು ಈಗಾಗಲೇ ಎಲ್ಲರನ್ನೂ ಕ್ಷೇತ್ರದ ಅಖಾಡಕ್ಕೆ ಇಳಿಸಿದೆ.ಈ ಟಿಕೇಟ್ ಆಕಾಂಕ್ಷಿಗಳಿಗೆ ಯಾರಿಗೆ ಟಿಕೇಟ್ ಸಿಗುತ್ತದೆಂದು ಯಾವ ಹೈಕಮಾಂಡೂ ಉಹೆಯನ್ನೂ ಮಾಡಿಲ್ಲಾ.ಕಾರಣವಿಷ್ಟೆ ಎಲ್ಲರೂ ಕ್ಷೇತ್ರದಲ್ಲಿ ತಿರುಗಾಡಿ ಜನಾಭಿಪ್ರಾಯ ಪಡೆದು ಯಾರಪರ ಜನರ ಒಲವು ಹೆಚ್ಚುತ್ತದೆಯೋ ಅಂಥಾ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲುವು ತಮ್ಮದಾಗಿಸಿಕೊಳ್ಳುವ ಗುರಿಯನ್ನು ಮಾತ್ರ ಹೈಕಮಾಂಡ್ ಹೊಂದಿದೆ.ಈ ಬಾರಿಯ ಚುನಾವಣೆಯಲ್ಲಿ ಯಾವುದೇ ಪ್ರಭಾವ,ಹಣ,ಜಾತಿ ಇತರೆ ಯಾವುದಕ್ಕೂ ಮಣೆ ಹಾಕದೇ ಕೇವಲ ಕ್ಷೇತ್ರದ ಜನಾಭಿಪ್ರಾಯವನ್ನಷ್ಟೇ ಮಾನದಂಡವಾಗಿಟ್ಟುಕೊಂಡು ಆ ವರದಿಯ ಆಧಾರದ ಮೇಲೆ ಟಿಕೇಟ್ ನೀಡುವ ಅಛಲ ನಿರ್ಧಾರ ಕೈಗೊಂಡಂತಿದೆ.ಹೈಕಮಾಂಡಿನ ಈ ನಿಲುವನ್ನು ಅರಿತ ಸ್ಪರ್ಧಾ ಆಕಾಂಕ್ಷಿಗಳು ತಮ್ಮ ತಮ್ಮ ಶಕ್ತಿ,ಸೇವೆ,ಜನಪರ ಕಾಳಜಿ ಮುಂತಾದ ಯೋಜನೆಗಳನ್ನು ರೂಪಿಸಿ ಜನರ ಬಳಿ ಹೋಗಿ ತಮ್ಮ ಸೇವೆಯ ಕುರಿತು ಜನರ ಮನ ಒಲಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಇಡೀ ರಾಜ್ಯದಲ್ಲಿ ಅತಿಹೆಚ್ಚು ಪ್ರಚಾರದಲ್ಲಿರುವ ಲೋಕಸಭೆ ಕ್ಷೇತ್ರ ದಾವಣಗೆರೆ.ಈ ಕ್ಷೇತ್ರದಲ್ಲಿ ಈಗಾಗಲೇ ಎಲ್ಲಾ ಸ್ಪರ್ಧಾ ಆಕಾಂಕ್ಷಿಗಳು ನಾ ಮುಂದು ತಾ ಮುಂದು ಎಂದು ಜನರ ಬಳಿ ಹೋಗಿ ತಮ್ಮ ಇಂಗಿತವನ್ನು ಸ್ಪಷ್ಟಪಡಿಸುತ್ತಾ ಜನಮನಗೆಲ್ಲುವತ್ತ ಶತಪ್ರಯತ್ನ ನಡೆಸಿದ್ದಾರೆ.
ಇಂಥಾ ಸ್ಪರ್ಧಾ ಆಕಾಂಕ್ಷಿಗಳ ಪಟ್ಟಿಯಲ್ಲಿ ಹಾಲಮತ ಕುಲಗುರುಗಳಾದ ಕ್ಷೇತ್ರದಾದ್ಯಂತ ಪ್ರಾಮಾಣಿಕ ಮತ್ತು ಸದ್ಗುಣ ಸಂಪಣ್ಣ ಗೌರವಾನ್ವಿತರು ದಾವಣಗೆರೆ ಸಂಸದ ಸ್ಥಾನಕ್ಕೆ ಅತ್ಯಂತ ಗೌರವವನ್ನು ತಂದುಕೊಟ್ಟಂಥಾ ಹ್ಯಾಟ್ರಿಕ್ ಸಂಸದರಾದ ಸನ್ಮಾನ್ಯ ಶ್ರೀ ವೇದ ಮೂರ್ತಿ ದಿ,ಚನ್ನಯ್ಯ ಒಡೆಯರ್ ರವರು.ಇವರ ಪುತ್ರರಾದ ಶ್ರೀ ಶಿವಕುಮಾರ್ ಒಡೆಯರ್ ಕೂಡಾ ಪ್ರಮುಖರು.
ಈ ದಾವಣಗೆರೆ ಲೋಕಸಭೆ ಕ್ಷೇತ್ರದಲ್ಲಿ ಸರಳ,ಸಂಭಾವಿತ,ವಿಚಾರವಂತವಿದ್ಯಾವಂತ,ಸಜ್ಜನ ವ್ಯಕ್ತಿತ್ವಕ್ಕೆ ತನ್ನದೇ ಆದ ಶಾಸ್ವತ ಹೆಸರು ಮಾಡಿರುವ ಚನ್ನಯ್ಯ ಒಡೆಯರ್ ಎಂಬ ನಾಮದೊಂದಿಗೆ ಕಾಂಗ್ರೆಸ್ ಪಕ್ಷದ ಒಡನಾಟದ ಮತ್ತು ಎಲ್ಲ ಜಾತಿ ಧರ್ಮಗಳ ಜನರ ಪ್ರೀತಿ ವಿಶ್ವಾಸ ಹೊಂದಿರುವ ಚನ್ನಯ್ಯ ಒಡೆಯರ್ ರವರ ಆದರ್ಶ ಪಾಲನೆಯಲ್ಲೇ ಸಮಾಜಮುಖಿ ಕೆಲಸ ಮಾಡಬೇಕೆಂಬ ಹಂಬಲಹೊತ್ತುಕೊಂಡು ಇವತ್ತು ಪ್ರತಿ ಗ್ರಾಮ,ಪಟ್ಟಣ,ತಾಲೂಕು,ಹೋಬಳಿ,ಮಟ್ಟದಲ್ಲಿ ಎಡೆಬಿಡದೆ ಜನಪ್ರತಿನಿಧಿಗಳ ಬಳಿ,ಸಂಘಸಂಸ್ಥೆಗಳ ಮುಖಂಡರುಗಳ ಬಳಿ ಹಿರಿಯ ಕಿರಿಯ ಜನಸಮುದಾಯದ ಮನೆ ಮನ ತಲುಪುವ ನಿತ್ಯದ ಕೆಲಸದಲ್ಲಿ ಮಗ್ನರಾಗಿರುವ
ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಚನ್ನಯ್ಯ ಒಡೆಯರ್ ರವರ ಸುಪುತ್ರರು ಹಾಗೂ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿಗಳಾದ ಶ್ರೀ ಶಿವಕುಮಾರ್ ಒಡೆಯರ್ ಅವರು ಇಂದು ತ್ಯಾವಣಗಿ, ಬೆಳಲ್ಗೆರೆ, ಚಿಕ್ಕಕುರುಬರ ಹಳ್ಳಿ, ಭೇಟಿ ನೀಡಿ ಗ್ರಾಮದ ಮುಖಂಡರ ಜೊತೆಗೆ ಮುಂಬರುವ ಲೋಕಸಭಾ ಚುನಾವಣೆಯ ಬಗ್ಗೆ ಸಭೆ ನಡೆಸಿದರು.ಈ ಸಂದರ್ಭದಲ್ಲಿ ತ್ಯಾವಣಗಿ ಹಾಲಪ್ಪ, ಶಿವಮೂರ್ತಪ್ಪ, ಬೆಳಲ್ಗೆರೆ ದೇವೇಂದ್ರಪ್ಪ, ಹನುಮಂತಪ್ಪ, ಶಿವಣ್ಣ, ಮಾದಪ್ಪ, ಸಂಗಾಹಳ್ಳಿ ಶಿವಮೂರ್ತಪ್ಪ, ರಾಮಚಂದ್ರಪ್ಪ, ಬಸರಾಜಪ್ಪ, ಕುರುಬರಹಳ್ಳಿ ಗಿರೀಶ್, ಕರಿಯಪ್ಪ, ಮತ್ತು ಅನೇಕ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು. ಪ್ರತಿ ಗ್ರಾಮದಲ್ಲಿ ಹಿರಿಯ ಕಿರಿಯರ ಜೊತೆಗೆ ಸಮಾಲೋಚನೆ ಮಾಡುತ್ತಾ ತಮ್ಮ ತಂದೆಯವರು ಗಳಿಸಿದ ಒಂದೇ ಆಸ್ತಿಅಂದರೆ ಅದೇ ಅಚ್ಚಳಿಯದೇ ಉಳಿದಿರು ಪ್ರಾಮಾಣಿಕ ಸರಳಸಜ್ಜನ ಜನಾನುರಾಗಿ ಜನಪರಕಾಳಜಿಯುಳ್ಳ ಶುದ್ಧ ಹಸ್ತದ ರಾಜಕಾರಣಿ.ಆ ಅಜರಾಮರವಾಗಿರುವ ಆಸ್ತಿಯಮುಂದೆ ಎಂಥದೇ ಐಶ್ವರ್ಯವೂ ಶೂನ್ಯ. ಅವರ ಹೆಸರಿಗೆ ಕಳಂಕ ಬರದಂತೆ ಸದಾ ಸಮಾಜಮುಖಿಯಾಗಿ ನಿಮ್ಮೊಂದಿಗೆ ಬೆರೆತು ಜಾತಿ,ಧರ್ಮ,ಮೇಲು,ಕೀಳೆಂಬ ಕಲ್ಪನೆಯೂ ಸುಳಿಯದಂತೆ ಸಮಾಜಸೇವೆಮಾಡಲುಬದ್ಧನಿದ್ದೇನೆ ತಾವು ಬೆಂಬಲಿಸಬೇಕೆಂದು ತಮ್ಮ ಮನದಾಳದ ಸಮಾಜಸೇವೆಯ ಇಂಗಿತ ವ್ಯಕ್ತಪಡಿಸುತ್ತಾ ಜನರ ಮನ ಗೆಲ್ಸಲಲು ದ್ದುಗದ್ದಲವಿಲ್ಲದೆ ಪ್ರಚಾರಕಾರ್ಯದಲ್ಲಿ ತೊಡಗಿದ್ದಾರೆ.
ಇಡೀ ದಾವಣಗೆರೆ ಕ್ಷೇತ್ರದಲ್ಲಿ ದಿ,ಶ್ರೀ ಚನ್ನಯ್ಯ ಒಡೆಯರ್ ರವರ ಹೆಸರು ಕೇಳದವರು ಇಲ್ಲವೆನ್ನಲಾಗದು ಪ್ರತಿ ಗ್ರಾಮದಲ್ಲೂ ಒಡೆಯರ್ ಹೆಸರು ಚಿರಸ್ಮರಣೀಯ ವಾಗಿರುವುದಕ್ಕೆ ಮೂಲಕಾರಣ ಅವರ ಜನಪರ ಕಾಳಜಿ,ಸಮಾಜಮುಖಿ ಕೆಲಸ,ಭ್ರಷ್ಟಾಚಾರ ರಹಿತ ರಾಜಕಾರಣವೇ ಅವರ ಪ್ರಮುಖ ಆಸ್ತಿ ಅದು ಬಿಟ್ಟರೆ ಮೂರು ಬಾರಿ ಲೋಕಸಭೆಗೆ ಆಯ್ಕೆಯಾದವರು ನಗರದಲ್ಲಿ ಒಂದು ಸ್ವಂತ ಮನೆ ಹೊಂದಿಲ್ಲದಿರುವುದೇ ನೈತಿಕತೆಗೆ ಹಿಡಿದ ಕನ್ನಡಿ.ಎಂದು ಜನಸಾಮಾನ್ಯರ ಜನಜನಿತ ಮಾತುಗಳಾಗಿವೆ.