ಗೋಲ್ಡನ್ ಕರಾಟೆ ಸ್ಪೋರ್ಟ್ಸ್ ಅಸೋಸಿಯೇಷನ್ ದಾರವಾಡ ಇವರ ಆಶ್ರಯದಲ್ಲಿ ಗದಗ ನಗರದಲ್ಲಿ ನಡೆದ ವಿಭಾಗ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ (ಕಾಟ ಮತ್ತು ಕಮಿಟ್ ವಿಭಾಗ) ದಾವಣಗೆರೆ ಹಳೇಪೇಟೆಯ ಉನ್ನತಿಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಏಳನೆಯ ತರಗತಿಯ ವಿದ್ಯಾರ್ಥಿ ಪೃಥ್ವಿ, ಆರ್, ಪ್ರಥಮ ಬಹುಮಾನ ಪಡೆದು ಶತಮಾನದ ಶಾಲೆಗೆ ಕೀರ್ತಿ ತಂದಿದ್ದಾರೆ, ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ವಿಜಯಶಾಲಿಯಾಗಿರುವ ವಿದ್ಯಾರ್ಥಿ ಪೃಥ್ವಿ, ಆರ್,ಗೆ ಶಾಲೆಯ ಮುಖ್ಯೋಪಾಧ್ಯಾಯರಾದ ಲೋಕಣ್ಣ ಮಾಗೋಡ್, ಇಂಗ್ಲಿಷ್ ಶಿಕ್ಷಕಿ ನಮಿತಾ ಎಂ, ಎನ್, ದಾವಣಗೆರೆ ಜಿಲ್ಲಾ ಶಾಲಾಭಿವೃದ್ದಿ ಮತ್ತು ಉಸ್ತುವಾರಿ ಸಮಿತಿಗಳ ಒಕ್ಕೂಟದ ಜಿಲ್ಲಾ ಪತ್ರಿಕಾ ಕಾರ್ಯದರ್ಶಿ ರಮೇಶ್ ಸಿ ದಾಸರ್ ಅವರು ಪಾರಿತೋಷಕ, ಪದಕ, ಪ್ರಶಸ್ತಿ ಪತ್ರ ನೀಡಿ ಅಭಿನಂದನೆಗಳನ್ನು ಸಲ್ಲಿಸಿದರು ಮತ್ತು ವಿಜೇತ ವಿದ್ಯಾರ್ಥಿಗೆ ಶಾಲೆಯ ಶಿಕ್ಷಕರು, ಶಾಲೆಯ ಎಸ್.ಡಿ, ಎಂ,ಸಿ ಸದಸ್ಯರು, ವಿದ್ಯಾರ್ಥಿಗಳು ಅಭಿನಂದನೆಗಳನ್ನು ಸಲ್ಲಿಸಿ ಹಾರೈಸಿದರು, ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಲೋಕಣ್ಣ ಮಾಗೋಡ್, ದಾವಣಗೆರೆ ಜಿಲ್ಲಾ ಶಾಲಾಭಿವೃದ್ದಿ ಮತ್ತು ಉಸ್ತುವಾರಿ (ಎಸ್.ಡಿ.ಎಂ.ಸಿ) ಸಮಿತಿಗಳ ಒಕ್ಕೂಟದ ಜಿಲ್ಲಾ ಪತ್ರಿಕಾ ಕಾರ್ಯದರ್ಶಿ ರಮೇಶ್ ಸಿ ದಾಸರ್, ಇಂಗ್ಲೀಷ್ ಶಿಕ್ಷಕಿ ನಮಿತಾ ಎಂ, ಎನ್, ದೈಹಿಕ ಶಿಕ್ಷಕಿ ಸುಜಾತ, ಶಿಕ್ಷಕಿಯರಾದ ಕಲ್ಪನ, ಸಂಪತ್ ಕುಮಾರಿ, ವಿಜಯಕುಮಾರಿ, ಜಯಶ್ರೀ, ಎಸ್.ಡಿ.ಎಂ.ಸಿ.ಸದಸ್ಯರಾದ ರಂಗನಾಥ ಸಿ, ಪೋಷಕರು, ವಿದ್ಯಾರ್ಥಿಗಳು, ಅಡುಗೆ ಸಿಬ್ಬಂದಿಗಳು ಇತರರು ಉಪಸ್ಥಿತರಿದ್ದರು.ಎಂದು ದಾವಣಗೆರೆ ಜಿಲ್ಲಾ ಶಾಲಾಭಿವೃದ್ದಿ ಮತ್ತು ಉಸ್ತುವಾರಿ ಸಮಿತಿಗಳ(ಎಸ್.ಡಿ.ಎಂ.ಸಿ) ಒಕ್ಕೂಟದ ಪತ್ರಿಕಾ ಕಾರ್ಯದರ್ಶಿ ರಮೇಶ್ ಸಿ ದಾಸರ್ ತಿಳಿಸಿದ್ದಾರೆ.