ದಾವಣಗೆರೆ-೨೦೨೪ಕ್ಕೆ ನಡೆಯಲಿರುವ ಲೋಕಸಭೆ ಚುನಾವಣೆಯ ಕಾವು ಏರುತ್ತಲೇ ಇದೆ. ದಾವಣಗೆರೆ ಲೋಕಸಭೆ ಕ್ಷೇತ್ರದ ಟಿಕೇಟ್ ಆಕಾಂಕ್ಷಿ ಶ್ರೀ ಶಿವಕುಮಾರ್ ಒಡೆಯರ್ ರವರು(ಲೋಕಸಭೆಯ ಮಾಜಿ ಸದಸ್ಯರಾದ ಹ್ಯಾಟ್ರಿಕ್ ಸಂಸದರೆAದೇ ಹೆಸರಾಗಿರುವ ದಿ, ಶ್ರೀ ಚನ್ನಯ್ಯ ಒಡೆಯರ್ ಪುತ್ರ) ಎಡೆಬಿಡದೇ ಕ್ಷೇತ್ರಸಂಚಾರ ವಿವಿಧ ಸ್ಥಳೀಯ ಮುಖಂಡರ ಭೇಟಿ,ಮಠಮಾನ್ಯರ ಆಶಿರ್ವಾದ ಜೊತೆಗೆ ಮತದಾರರ ಒಲವಿಗಾಗಿ ವಿವಿಧ ಕಾರ್ಯಕ್ರಮಗಳ ಚಟುವಟಿಕೆಗಲ್ಲಿ ತೊಡಗಿಸಿಕೊಂಡಿರುವ ಶ್ರೀ ಶಿವಕುಮಾರ್ ಒಡೆಯರ್ ರವರು ಎರಡು ಮೂರುದಿನಗಳಿಂದ ದೇಹಲಿಯಲ್ಲಿ ಬೀಡುಬಿಟ್ಟು ಅಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನವರೊಡನೆ ಸವಿಸ್ತಾರವಾದ ಮಾತುಕಥೆ ನಡೆಸಿ ತಮ್ಮ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದ್ದಾರೆ.ತದನಂತರ ಕಾಂಗ್ರೆಸ್ ಪಕ್ಷದ ದೇಹಲಿಮಟ್ಟದ ಹೈಕಮಾಂಡ್ ನ ಆಪ್ತ ವಲಯದಲ್ಲಿಯೂ ತಮ್ಮ ತಂದೆ ಸನ್ಮಾನ್ಯ ಚನ್ನಯ್ಯ ಒಡೆಯರ್ ರವರಕುರಿತು ಮತ್ತು ತಾವು ಕ್ಷೇತ್ರದಲ್ಲಿ ನಡೆಸಿರುವ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದ್ದಾರೆ.ಎಲ್ಲಕಿಂತ ಹೆಚ್ಚಾಗಿ ಸನ್ಮಾನ್ಯ ಚನ್ನಯ್ಯ ಒಡೆಯರ್ ರವರ ಸ್ವಭಾವ,ಕಾರ್ಯಚಟುವಟಿಕೆಗಳ ಕುರಿತು ಸ್ವತಃ ತಿಳುವಳಿಕೆಹೊಂದಿರುವ ಕರ್ನಾಟಕದ ಹೆಮ್ಮೆಯ ಹಿರಿಯ ರಾಜಕಾರಣಿಯೂ ಕಾಂಗ್ರೇಸ್ ಪಕ್ಷದ ರಾಷ್ಟಿçÃಯ ಅಧ್ಯಕ್ಷರೂ ಆಗಿರುವಂಥಃ ಸನ್ಮಾನ್ಯ ಮಲ್ಲಿಕಾರ್ಜುನ ಖರ್ಗೆ ಯವರನ್ನು ಇಂದು ದೇಹಲಿಯ ಅವರ ನಿವಾಸದಲ್ಲಿ ಭೇಟಿಮಾಡಿ ಸುಧೀರ್ಘ ಮಾತುಕಥೆ ನಡೆಸಿದ್ದಾರೆಂದು ತಿಳಿದುಬಂದಿದೆ.ಈ ವೇಳೆ ಮಲ್ಲಿಕಾರ್ಜುನ ಖರ್ಗೆ ಯವರು ಸಕಾರಾತ್ಮಕವಾಗಿ ಸ್ಪಂದಿದ್ದು ಕ್ಷೇತ್ರದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಎಲ್ಲರೊಂದಿಗೆ ಬೆರೆತು ಜನಮನ ಗೆಲ್ಲುವತ್ತ ಕಾರ್ಯ ಚಟುವಟಿಕೆ ಕೈಗೊಳ್ಳುವಂತೆ ಕಿವಿಮಾತು ಹೇಳಿದರೆನ್ನಲಾಗಿದೆ.

