Saturday, December 21, 2024
Homeಆರೋಗ್ಯನಿಸರ್ಗ ಸಿರಿ ಪ್ರಶಸ್ತಿ ಹಾಗೂ ಉತ್ತಮ ಸಿಬ್ಬಂದಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ

ನಿಸರ್ಗ ಸಿರಿ ಪ್ರಶಸ್ತಿ ಹಾಗೂ ಉತ್ತಮ ಸಿಬ್ಬಂದಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ

ಸಿರಸಿ ಅಕ್ಟೋಬರ್ : ಇಲ್ಲಿಯ ಶ್ರೀ ಅನಂತ ರಾವ್ ಬಿಳಗಿ ಸ್ಮಾರಕ ನಿಸರ್ಗ ಆಸ್ಪತ್ರೆ ಹಾಗೂ ಹಲೋ ಕನ್ನಡಿಗ ವಾರ ಪತ್ರಿಕೆ ದಾವಣಗೆರೆ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಗಾಂಧಿ ಜಯಂತಿ ಆಚರಣೆ ಹಾಗೂ ನಿಸರ್ಗ ಆಸ್ಪತ್ರೆಯ ನೂತನ ಕಟ್ಟಡದ 11ನೇ ವಾರ್ಷಿಕೋತ್ಸವದ ನೆನಪಿಗೆ ನಿಸರ್ಗ ಸಿರಿ ಪ್ರಶಸ್ತಿ ಹಾಗೂ ಉತ್ತಮ ಸಿಬ್ಬಂದಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಿಸರ್ಗ ಆಸ್ಪತ್ರೆಯ ಶ್ರೀ ವಿ ಆರ್ ದೇಶ್ಪಾಂಡೆ ಯೋಗಭವನದಲ್ಲಿ ನಡೆಯಿತು. .

ಕಾರ್ಯಕ್ರಮದಲ್ಲಿ ನಿಸರ್ಗ ಸಿರಿ ಪ್ರಶಸ್ತಿಯನ್ನು ಶೋಭಾ ವಿ ಲಮಾಣಿ ಹಾಗೂ ವಿನಯ್ ಪರಮೇಶ್ವರ ನಾಯಕ್ ಇವರಿಗೆ ನೀಡಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಆಸ್ಪತ್ರೆಯ ಉತ್ತಮ ಸಿಬ್ಬಂದಿ ಪ್ರಶಸ್ತಿಗಳನ್ನು ವಿತರಣೆ ಮಾಡಲಾಯಿತು. ಪ್ರಾಸ್ತಾವಿಕವಾಗಿ ಡಾಕ್ಟರ್ ಜಿತೇಶ್ ಪಿ ಅಧ್ಯಕ್ಷರು ನಿಸರ್ಗ ಟ್ರಸ್ಟ್ ಸಿರಸಿ ಮಾತನಾಡಿ ಆಸ್ಪತ್ರೆಯ ಸಿಬ್ಬಂದಿಗಳ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಿಸರ್ಗ ಸಿರಿ ಪ್ರಶಸ್ತಿಯ ಸಂಸ್ಥಾಪಕರಾದ ಹಲೋ ಕನ್ನಡಿಗ ಪತ್ರಿಕೆಯ ಸಂಪಾದಕರಾದ ಸಿ ವೇದಮೂರ್ತಿ ದಾವಣಗೆರೆ ಇವರು ಮಾತನಾಡಿ ನಿಸರ್ಗ ಆಸ್ಪತ್ರೆ ಸಿರಸಿಯಲ್ಲಿ ಅತ್ಯುತ್ತಮವಾಗಿ ಸೇವೆ ಸಲ್ಲಿಸುತ್ತಿರುವ ಇಬ್ಬರಿಗೆ ಪ್ರತಿವರ್ಷ ನಿಸರ್ಗ ಸಿರಿ ಪ್ರಶಸ್ತಿಯನ್ನು ನೀಡಲಾಗುವುದು.

ಈ ಪ್ರಶಸ್ತಿಯು ಪ್ರತಿವರ್ಷವೂ ನಡೆಯುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಪತ್ರಕರ್ತರಾದ ಶ್ರೀ ಜಯರಾಮ್ ಹೆಗಡೆ ಅವರು ಮಾತನಾಡಿ ನಾವು ಪ್ರಕೃತಿಯೊಂದಿಗೆ ಹೊಂದಿಕೊಂಡು ಪ್ರಕೃತಿದತ್ತವಾದ ಜೀವನವನ್ನು ನಡೆಸಿದರೆ ನಮಗೆ ಯಾವುದೇ ರೋಗಗಳ ಭಯವಿರುವುದಿಲ್ಲ ನಾವು ಪ್ರಕೃತಿಗೆ ವಿರುದ್ಧವಾಗಿ ಜೀವನ ಮಾಡಿದಾಗ ನಮಗೆ ರೋಗಗಳು ಬರುತ್ತವೆ ಎಂಬುದನ್ನು ಪ್ರತಿಯೊಬ್ಬರು ಅರ್ಥಮಾಡಿಕೊಳ್ಳಬೇಕು ಹಸಿರೇ ಉಸಿರು ಉಸಿರೇ ಹಸಿರು ಎನ್ನುವಂತೆ ಹಸಿರಿನ ಜೊತೆಗೆ ಅಂದರೆ ಪ್ರಕೃತಿಯ ಜೊತೆಗೆ ನಾವು ಸದಾಕಾಲವೂ ಇದ್ದಷ್ಟು ಆರೋಗ್ಯವಂತರಾಗಿರುತ್ತೇವೆ ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಪತ್ರಕರ್ತರು ಸಾಹಿತಿಗಳು ನಿವೃತ್ತ ಶಿಕ್ಷಕರು ಆದ ಶ್ರೀ ರಾಜೀವ್ ಅಜ್ಜಿಬಾಳ ಇವರು ಮಾತನಾಡುತ್ತಾ ನಮ್ಮ ಸುತ್ತಮುತ್ತ ಇರುವ ಗಿಡ ಮರಬಳ್ಳಿ, ಮಣ್ಣು ಪ್ರಕೃತಿ ಎಲ್ಲವೂ ಕೂಡ ಸಮತೋಲನದಲ್ಲಿ ಕಾಯ್ದುಕೊಂಡು ಪರಿಸರವನ್ನ ರಕ್ಷಿಸಿ, ಪರಿಸರವನ್ನ ಸಮತೋಲನದಲ್ಲಿ ನಾವು ನೋಡಿಕೊಂಡು ಪ್ರಕೃತಿಯೊಂದಿಗೆ ಜೀವನ ನಡೆಸಿದಾಗ ನಮಗೆ ತುಂಬಾ ಸಹಕಾರಿಯಾಗಲಿದೆ ಹಾಗೂ ಪರಿಸರವನ್ನು ನಾವು ರಕ್ಷಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಬಹಳ ಆರೋಗ್ಯದ ಸಮಸ್ಯೆನಾ ಎದುರಿಸಬೇಕಾಗುತ್ತದೆ ಎಲ್ಲರೂ ಕೂಡ ಪ್ರಕೃತಿಯನ್ನು ಸಂರಕ್ಷಿಸಬೇಕು ಎಂದು ಕಿವಿಮಾತು ಹೇಳಿದರು.

ಅತಿಥಿಗಳಾಗಿ ಆಗಮಿಸಿದ್ದ ಶ್ರೀ ರಾ ಮಾ ಜೋಶಿ ವಕೀಲರು ಹಾಗೂ ಸೆಕ್ರೆಟರಿ ಅನಂತರಾ ವ ಬಿಳಗಿ ಮೆಮೋರಿಯಲ್ ಟ್ರಸ್ಟ್ ಇವರು ಆಸ್ಪತ್ರೆಯ ಕಾರ್ಯ ವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಡಿ ವಿಶ್ವಾಮಿತ್ರ ವಕೀಲರು ಮತ್ತು ಮ್ಯಾನೇಜಿಂಗ್ ಟ್ರಸ್ಟಿ ಅನಂತ ರಾವ್ ಬಿಳಗಿ ಮೆಮೋರಿಯಲ್ ಟ್ರಸ್ಟ್ ಸಿರಸಿ ಇವರು ಮಾತನಾಡಿ ನಮ್ಮ ಸನಾತನ ಧರ್ಮದಲ್ಲೇ ಎಲ್ಲವೂ ಅಡಗಿದೆ ಆ ಒಂದು ಧರ್ಮದ ಪ್ರಕಾರ ನಡೆದಲ್ಲಿ ನಮ್ಮ ಜೀವನ ಸುಖಮಯವಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು ನಿಸರ್ಗ ಆಸ್ಪತ್ರೆಯ ವ್ಯವಸ್ಥಾಪಕರಾದ ಪ್ರಕಾಶ್ ಭಟ್ ಇವರು ಕಾರ್ಯಕ್ರಮ ನಿರೂಪಿಸಿದರು ನಿಸರ್ಗ ಆಸ್ಪತ್ರೆಯ ಕಾರ್ಯದರ್ಶಿಯಾದ ಡಾ. ಲಕ್ಷ್ಮಿ ಪಿ ಎಸ್ ಇವರು ವಂದನಾರ್ಪಣೆ ಮಾಡಿದರು

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments