ಬೆಂಗಳೂರು:ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) 2022ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳಿಗೆ ಪತ್ರಕರ್ತರಿಂದ ವರದಿ/ಲೇಖನ/ಸುದ್ದಿಛಾಯಾಚಿತ್ರ/ವಿಡಿಯೊ ಕ್ಲಿಪ್ಪಿಂಗ್ ಆಹ್ವಾನಿಸಲಾಗಿದೆ.
ಮಾಧ್ಯಮದಲ್ಲಿ ಪ್ರಕಟವಾದ/ಪ್ರಸಾರವಾದ ವರದಿ ಸಹಿತ ಅರ್ಜಿಗಳನ್ನು
ಅಧ್ಯಕ್ಷರು/ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ, ಕಂದಾಯ ಭವನ, 3ನೇ ಮಹಡಿ, ಕೆ.ಜಿ.ರೋಡ್, ಬೆಂಗಳೂರು-560009 ಇಲ್ಲಿಗೆ ದಿನಾಂಕ 30.10.2023 ರೊಳಗಾಗಿ ತಲಪುವಂತೆ ಕಳುಹಿಸಲು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಶಸ್ತಿಗಳ ವಿವರ:
- ಜಿ. ನಾರಾಯಣಸ್ವಾಮಿ ಪ್ರಶಸ್ತಿ (ಅತ್ಯುತ್ತಮ ಗ್ರಾಮಾಂತರ ವರದಿಗೆ)
- ಪಟೇಲ್ ಭೈರಹನುಮಯ್ಯ ಪ್ರಶಸ್ತಿ (ಅತ್ಯುತ್ತಮ ಮಾನವೀಯ ವರದಿಗೆ)
- ಗಿರಿಧರ್ ಪ್ರಶಸ್ತಿ
(ಅತ್ಯುತ್ತಮ ಅಪರಾಧ ವರದಿಗೆ) - ಬಿ. ಎಸ್. ವೆಂಕಟರಾಂ ಪ್ರಶಸ್ತಿ
(ಅತ್ಯುತ್ತಮ ಸ್ಕೂಪ್ ವರದಿಗೆ) - ಕೆ. ಎ. ನೆಟ್ಟಕಲಪ್ಪ ಪ್ರಶಸ್ತಿ
(ಅತ್ಯುತ್ತಮ ಕ್ರೀಡಾ ವರದಿಗೆ) - ಖಾದ್ರಿ ಶಾಮಣ್ಣ ಪ್ರಶಸ್ತಿ (ಅತ್ಯುತ್ತಮ ರಾಜಕೀಯ ವಿಮರ್ಶಾತ್ಮಕ ವರದಿ)
- ಮಂಗಳ ಎಂ. ಸಿ. ವರ್ಗಿಸ್ ಪ್ರಶಸ್ತಿ (ವಾರ ಪತ್ರಿಕೆಯಲ್ಲಿ ಪ್ರಕಟವಾದ ಚಿತ್ರ ಲೇಖನಕ್ಕೆ)
😎 ಬಂಡಾಪುರ ಮುನಿರಾಜು ಸ್ಮಾರಕ ಪ್ರಶಸ್ತಿ (ಅತ್ಯುತ್ತಮ ಸುದ್ದಿ ಛಾಯಾಚಿತ್ರಕ್ಕೆ)
9) ಆರ್.ಎಲ್.ವಾಸುದೇವರಾವ್ ಪ್ರಶಸ್ತಿ (ಅರಣ್ಯ ಕುರಿತ ಅತ್ಯುತ್ತಮ ವರದಿ)
- ಆರ್.ಎಲ್. ವಾಸುದೇವರಾವ್ ಪ್ರಶಸ್ತಿ (ವನ್ಯ ಪ್ರಾಣಿಗಳ ಕುರಿತ ಅತ್ಯುತ್ತಮ ವರದಿ)
- ಬಿ.ಜಿ.ತಿಮ್ಮಪ್ಪಯ್ಯ ಪ್ರಶಸ್ತಿ (ಆರ್ಥಿಕ ದುರ್ಬಲ ವರ್ಗದವರ ಕುರಿತ ಅತ್ಯುತ್ತಮ ವರದಿಗೆ)
- ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ (ಗ್ರಾಮೀಣ ಜನ-ಜೀವನದ ಅತ್ಯುತ್ತಮ ವರದಿಗೆ)
- ನಾಡಪ್ರಭು ಕೆಂಪೇಗೌಡ ಸ್ಮಾರಕ ಪ್ರಶಸ್ತಿ (ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ ಅಭಿವೃದ್ಧಿ ಕುರಿತ ಅತ್ಯುತ್ತಮ ವರದಿಗೆ )
14, ಯಜಮಾನ್ ಟಿ. ನಾರಾಯಣಪ್ಪ ಸ್ಮಾರಕ ಪ್ರಶಸ್ತಿ (ಜಿಲ್ಲಾ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಅತ್ಯುತ್ತಮ ಕೃಷಿ ವರದಿ)
- ನಾಡಿಗೇರ ಕೃಷ್ಣರಾಯರ ಪ್ರಶಸ್ತಿ (ಅತ್ಯುತ್ತಮ ವಿಡಂಬನಾತ್ಮಕ ಲೇಖನಕ್ಕೆ)
- ಅತ್ಯುತ್ತಮ ಪುಟ ವಿನ್ಯಾಸಗಾರರಿಗೆ (ಡೆಸ್ಕ್‌ನಲ್ಲಿ ಕೆಲಸ ಮಾಡುವವರು)
- ನ್ಯಾಯಾಲಯದ (ಕೋರ್ಟ್ ಬೀಟ್) ಅತ್ಯುತ್ತಮ ವರದಿಗಾಗಿ.
- ಸಣ್ಣುವಂಡ ಶ್ರೀನಿವಾಸ ಚಂಗಪ್ಪ ಪ್ರಶಸ್ತಿ. (ಅತ್ಯುತ್ತಮ ಸೇನಾ ವರದಿಗೆ)
- ಕೆ.ಎನ್.ಸುಬ್ರಮಣ್ಯ ಪ್ರಶಸ್ತಿ ( ಇಂಗ್ಲೀಷ್ ಪತ್ರಿಕೆಗೆ ಪ್ರಕಟವಾದ ವರದಿ)
- ಮಲಗೊಂಡ ಪ್ರಶಸ್ತಿ (ಅತ್ಯುತ್ತಮ ತನಿಖಾ ವರದಿ)
ವಿದ್ಯುನ್ಮಾನ (ಟಿವಿ)ವಿಭಾಗ:
- ಅತ್ಯುತ್ತಮ ರಾಜಕೀಯ ವಿಶ್ಲೇಷಣೆ
22 ಅತ್ಯುತ್ತಮ ತನಿಖಾ ವರದಿ - ಸಾಮಾಜಿಕ& ಮಾನವೀಯ ವರದಿ
- ಅತ್ಯುತ್ತಮ ಆ್ಯಂಕರ್ ಪ್ರಶಸ್ತಿ
ಷರತ್ತುಗಳು :
- ಪ್ರಶಸ್ತಿಗೆ 2022 ಜನವರಿ 1 ರಿಂದ 2022 ಡಿಸೆಂಬರ್ 31 ರೊಳಗೆ ದಿನಪತ್ರಿಕೆ ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟವಾದ ಲೇಖನ/ವರದಿ/ವಿಶೇಷ ವರದಿ ಸುದ್ದಿ ಛಾಯಾ ಚಿತ್ರಗಳನ್ನು ಕಳುಹಿಸಬೇಕು.
- ವರದಿ/ಲೇಖನ ಯಾವ ಪ್ರಶಸ್ತಿಗೆ ಎಂಬುದನ್ನು ಲೇಖನದ ಮುಖಪುಟದಲ್ಲಿ ಸ್ಪಷ್ಟವಾಗಿ ಬರೆದಿರಬೇಕು.
- ಅನುವಾದ ಮಾಡಿದ ವರದಿ/ಲೇಖನ ಪರಿಗಣಿಸುವುದಿಲ್ಲ.
- ರಾಜ್ಯ ಸಂಘ, ಜಿಲ್ಲಾ ಮತ್ತು ತಾಲ್ಲೂಕು ಸಂಘದ ಪದಾಧಿಕಾರಿಗಳು ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.
- ಲೇಖನ ವರದಿಗಳನ್ನು ಮೂರು ಪ್ರತಿಗಳಲ್ಲಿ (ಜೆರಾಕ್ಸ್ ಪ್ರತಿಗಳಾದರೆ ದೃಢೀಕೃತವಾದ ಪ್ರತಿ ಇರಬೇಕು.) ಕಳುಹಿಸಬೇಕು.
- ವಿದ್ಯುನ್ಮಾನ ಮಾಧ್ಯಮದ ಪ್ರಶಸ್ತಿಗಳ ಪ್ರವೇಶಕ್ಕೆ ವರದಿ ಪ್ರಸಾರವಾದ ಕ್ಲಿಪಿಂಗ್ (ಸಿಡಿ ಅಥವಾ ಪೆನ್‌ಡ್ರೈವ್) ಮತ್ತು ಅದರ ಸ್ಕ್ರಿಪ್‌ಗಳನ್ನು ಸಂಪಾದಕರ ದೃಢೀಕರಣ ಸಹಿತ ಕಳುಹಿಸಬೇಕು.
- ಪ್ರಶಸ್ತಿಗೆ ಅರ್ಜಿ ಸಲ್ಲಿಸುವವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯತ್ವದ ಗುರುತಿನ ಕಾರ್ಡ್ ಮತ್ತು ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯನ್ನು ಲಗತ್ತಿಸಬೇಕು.
- ಲೇಖನದ ಜೊತೆಯಲ್ಲಿ ಸ್ವ ಪರಿಚಯ, ಪೂರ್ಣ ವಿಳಾಸ, ಮೊಬೈಲ್ ನಂಬರ್ ಮತ್ತು ಪಾಸ್ ಪೋರ್ಟ್ ಸೈಜ್ ಭಾವಚಿತ್ರ ಕಳುಹಿಸಬೇಕು.
- ಈಗಾಗಲೇ ಒಂದು ಬಾರಿ ಪ್ರಶಸ್ತಿಯನ್ನು ಪಡೆದವರು, ಮತ್ತೆ ಅದೇ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷರಾದ ಶ್ರೀ ಶಿವಾನಂದ ತಗಡೂರ್ ರವರು ಹಾಗೂ ರಾಜ್ಯ ಪ್ರಧಾನಕಾರ್ಯದರ್ಶಿಯವರಾದ ಶ್ರೀ ಜಿ.ಸಿ.ಲೋಕೇಶ್ ರವರು ತಿಳಿಸಿದ್ದಾರೆ.