ಮೂಡಲಗಿ: ಅ,13-ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ 2 (ಎರಡು) ವಾರಗಳಿಂದ ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ವ್ಯತೆಯು ಉಂಟಾಗುತ್ತಿದ್ದು,ರೈತರ ನೀರಿಲ್ಲದೆ ಬೆಳೆಗಳು ಒಣಗುತ್ತಿರುವುದರಿಂದ ಆತಂಕದ ಸ್ಥಿತಿ ನಿರ್ಮಾಣವಾಗಿದೆ.ಆದರಿಂದ ಪ್ರತಿದಿನ 7 ಗಂಟೆ ಸಮರ್ಪಕವಾಗಿ ತ್ರಿಫೇಸ್ ಕರೆಂಟ್ ಕೊಡಬೇಕೆಂದು ಆಗ್ರಹಿಸಿ ಪಟ್ಟಣದ ಹೆಸ್ಕಾಂ ಕಛೇರಿಯ ಮುಂದೆ ಕರ್ನಾಟಕ ರೈತರ ಹಿತರಕ್ಷಣಾ ವೇದಿಕೆಯ ಕಾರ್ಯಕರ್ತರು, ಪಟಗುಂದಿ,ಮೂಡಲಗಿ ಮತ್ತು ಇನ್ನು ಅನೇಕ ಹಳ್ಳಿಯ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಈ ವರ್ಷ ಸರಿಯಾಗಿ ಮಳೆ ಇಲ್ಲದ ಕಾರಣ ರೈತರು ಮೊದಲೇ ಸಂಕಷ್ಟಕ್ಕೆ ಸಿಲುಕಿದ್ದಾರೆ.ನಮಗೆ ಸರಿಯಾಗಿ ವಿದ್ಯುತ್ ತ್ರಿಫೇಸ್ ಸಿಗದೆ ಇರುವುದರಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ.ಬಾವಿ,ಕೊಳವೆಬಾವಿ,ನದಿಯಲ್ಲಿ ನೀರಿದ್ದರು ಬೆಳೆ ಉಳಿಸಿಕೊಳ್ಳಲು ರೈತರು ಪರದಾಡುವಂತಾಗಿದೆ.ಇದಕ್ಕಿಂತ ಮೊದಲು ದಿನಕ್ಕೆ 7 ಗಂಟೆ ತ್ರಿಫೇಸ್ ಕರೆಂಟ್ ನೀಡುತ್ತಿದ್ದರು,ಈಗ ಒಂದೆರಡು ಗಂಟೆಗೆ ಬಂದು ನಿಂತಿದೆ.ಇಷ್ಟೊಂದು ವಿದ್ಯುತ್ ಸಮಸ್ಯೆಯಾದರು ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ.ಸಮಸ್ಯೆಯ ತ್ರೀವ್ರತೆ ಅರಿತು ತಕ್ಷಣ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಇದ್ದರೆ ರೈತರ ಸಹನೆಯ ಕಟ್ಟೆ ಒಡೆದು ಬೀದಿಗಿಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು
ಕರ್ನಾಟಕ ರೈತರ ಹಿತರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸುರೇಶ ನಾಯ್ಕಿ,ಜಿಲ್ಲಾ ಸಂಚಾಲಕ ಸಂಗಪ್ಪ ಹಡಪದ,ವೇದಿಕೆಯ ಜಿಲ್ಲಾ ಯುವ ಘಟಕದ ಅಧ್ಯಕ್ಷ ಪ್ರಕಾಶ ಕಾಳಶಟ್ಟಿ,ಮಹಾದೇವ ಬಂಗೆನ್ನವರ,ಮತ್ತು ಚನ್ನಗೌಡ ಪಾಟೀಲ ಎಚ್ಚರಿಸಿದರು.
ನಂತರ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕರಾದ ಅಭಿಯಂತರರು ಎಮ್.ಎಸ್.ನಾಗನ್ನವರಿಗೆ ರೈತರು ಮನವಿ ಕೊಟ್ಟರು ಮತ್ತು ಮೂಡಲಗಿ ಪಿ ಎಸ್ ಆಯ್ ಎಚ್.ವಾಯ್.ಬಾಲದಂಡಿ ಉಪಸ್ಥಿತರಿದ್ದರು.
ರಾಮಗೌಡ ಪಾಟೀಲ, ಚನ್ನಗೌಡ ಪಾಟೀಲ,ಪರಸ್ಪರ ಉಪ್ಪಾರ,ತವನಪ್ಪ ಹೊಸಮನಿ,ಬಾಬು ಮೂಡಲಗಿ, ಶಿವಾನಂದ ಪಾಟೀಲ, ಶಂಕರಗೌಡ ಪಾಟೀಲ, ಉದಯ ಪಾಟೀಲ, ವಿಠ್ಠಲ ತುಪ್ಪದ,ಬಸಗೌಡ ಪಾಟೀಲ, ಭೀಮಪ್ಪ ರೊಡ್ಡನ್ನವರ,ಮಲ್ಲಪ್ಪ ಕಬ್ಬೂರ,ಕಲ್ಲಪ್ಪ ರಂಗಾಪೂರ,ಅರ್ಜುನ ಮಾದಗೌಡ್ರ,ಸಿದ್ದಪ್ಪ ನಡಹಟ್ಟಿ,ಶ್ರೀ ಮಂತ ಗಾಣಿಗೇರ, ಬಸುರಾಜ ಮೂರಾಳಿ,ಶಂಕರ ನಿಲ್ಲಪ್ಪಗೋಳ,ಸದಾಶಿವ ನಾವಿ,ಬಿ.ಜಿ.ಹಿರೇಮಠ, ಪಾರೀಶ ಉಪ್ಪಿನ,ರಮೇಶ ಹುಡೇದ,ವಿಠ್ಠಲ ನಾಯ್ಕಿ,ಅಜಿತ ಪಾಟೀಲ, ಸದಾಶಿವ ನೇಮಗೌಡ್ರ,ಹಣಮಂತ ಮಾರಾಪೂರ,ಬಸು ಮಿರ್ಜಿ,ಪುಂಡಲೀಕ ಹುಚ್ಚನ್ನವರ,ತಮ್ಮಣ್ಣ ಪೂಜೇರಿ, ಮಲ್ಲಪ್ಪ ಪೂಜೇರಿ, ರೈತ ಸಂಘದ ಕಾರ್ಯಕರ್ತರು ಹಾಗೂ ಸುತ್ತಮುತ್ತಲಿನ ರೈರತು ಭಾಗಿಯಾಗಿದ್ದರು.