ಮೂಡಲಗಿ:ಅ, 14-ತಾಲೂಕಿನ ವಿದ್ಯಾರ್ಥಿ ಕುಮಾರಿ ಕಾವೇರಿ ಮುತ್ತಪ್ಪ ಬಿ ಪಾಟೀಲ. ನಡೆದ ಸೌತ್ ಜೂನ್ ಅಂತರ್ ರಾಜ್ಯಮಟ್ಟದ ಕೆಲೋ ಇಂಡಿಯಾ ಫೈನಲ್ ಪಂದ್ಯಾಟದಲ್ಲಿ ನಮ್ಮ ಕರ್ನಾಟಕ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದು. ಕರ್ನಾಟಕ ತಂಡದಲ್ಲಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಶಿವಾಪೂರ (ಹ) ತೋಟ,ನಂ-01 ವಿದ್ಯಾರ್ಥಿನಿಯಾದ ಕುಮಾರಿ ಕಾವೇರಿ ಮುತ್ತಪ್ಪ ಬಿ ಪಾಟೀಲ ಭಾಗವಹಿಸಿದ್ದು ನಮಗೆಲ್ಲ ಹೆಮ್ಮೆಯಾಗಿದೆ.ನಮ್ಮ ತಾಲೂಕಿಗೆ ಹೆಮ್ಮ ತಂದಿದ್ದಾಳೆ.ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳು ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆಂದು ವಿದ್ಯಾರ್ಥಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಜಿತ್ ಮನ್ನಿಕೇರಿ ಹೇಳಿ ಹಾರೈಸಿದರು.
ನಮ್ಮ ಶಾಲೆಯ ವಿದ್ಯಾರ್ಥಿ ಎಂದು ಹೇಳಿಕೊಳ್ಳಲು ಅತೀ ಸಂತೋಷವಾಗುತ್ತದೆ.ಹಿಂಥ ವಿದ್ಯಾರ್ಥಿಗಳಿಗೆ ನಮ್ಮೇಲ್ಲರ ಪ್ರೊತ್ಸಾಹ ಇದ್ದೇ ಇರತ್ತದೆ ಎಂದು ಪ್ರಧಾನ ಗುರುಗಳಾದ ಗಜಾನನ ಪತ್ತಾರ ಸಂತೋಷ ವ್ಯಕ್ತಪಡಿಸಿದರು. ಅವರು ತೋಟ ನಂಬರ (01) ಒಂದು ಶಾಲೆಯ ಶಿಕ್ಷಕ ಸಿಬ್ಬಂದಿ ಎಸ್ ಡಿ ಎಮ್ ಸಿ ಅಧ್ಯಕ್ಷರು, ಸದಸ್ಯರು ಮತ್ತು ಶಾಲೆಯ ಸುತ್ತಲಿನ ಶಿಕ್ಷಣ ಪ್ರೇಮಿಗಳು ಹಾಗೂ ಕ್ರೀಡಾ ಪ್ರೇಮಿಗಳು, ವಿದ್ಯಾರ್ಥಿ ಕುಮಾರಿ ಕಾವೇರಿಗೆ ಶುಭ ಹಾರೈಸಿದರು.