ಕೊಟ್ಟೂರು .ತಾಲೂಕಿನ ಕಂದಗಲ್ಲು ಗ್ರಾಮ ಪಂಚಾಯತಿಯ ಎರಡನೇ ಅವಧಿಯ ನೂತನ ಅಧ್ಯಕ್ಷರಾಗಿ ಕಸ್ತೂರಿ ಬಾಯಿ ಪಿರ್ಯಾ ನಾಯ್ಕ, ಉಪಾಧ್ಯಕ್ಷರಾಗಿ ಟಿ.ಮೂಗಪ್ಪ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಂದಗಲ್ಲು, ತಿಮಲಾಪುರ, ಗಜಾಪುರ, ಅಕ್ಕಪುರ, ಬತ್ತನಹಳ್ಳಿ ಗ್ರಾಮಗಳನ್ನು ಒಳಗೊಂಡು, ಒಟ್ಟಾರೆಯಾಗಿ 14 ಸದಸ್ಯರನ್ನು ಒಳಗೊಂಡಿದ್ದು,
ಇನ್ನೂ ಉಳಿದ ಸದಸ್ಯರು ಗೈರಾಗಿದ್ದರು, 9 ಸದಸ್ಯರು ಮಾತ್ರ ಹಾಜರಾಗಿ, ಈ ಚುನಾವಣೆ ಸಹಾಯಕ ನಿರ್ದೇಶಕರು.ಪಶು ಸಂಗೋಪನಾ ಇಲಾಖೆ ಕೂಡ್ಲಿಗಿ ಕುಮಾರ್ ನೇತೃತ್ವದಲ್ಲಿ ನಡೆಸಲಾಯಿತು.
ಕಂದಗಲ್ಲು ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಕಸ್ತೂರಿಬಾಯಿ ಪಿರ್ಯಾ ನಾಯ್ಕ ಉಪಾಧ್ಯಕ್ಷರಾಗಿ ಟಿ. ಮೂಗಪ್ಪ ಅವಿರೋಧವಾಗಿ ಅವರನ್ನು ಆಯ್ಕೆ ಮಾಡಲಾಯಿತು.
ನಂತರ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಕಂದಗಲ್ಲು ಅಭಿವೃದ್ಧಿ ಅಧಿಕಾರಿ ಮಾರುರ್ತೆಶ್, ಬಿಜೆಪಿ ಜಿಲ್ಲಾಧ್ಯಕ್ಷರಾದ ಚನ್ನಬಸನಗೌಡ್ರು, ಹರೀಶ್ ಗೌಡ್ರು, ವಿಶ್ವನಾಥ್, ಶಿವಕುಮಾರ್ ಗೌಡ, ಹನುಮಂತಪ್ಪ, ರಾಜಣ್ಣ ಹಾಗೂ ಸದಸ್ಯರು ಉಪಸ್ಥಿತರಿದ್ದರು(
ವರದಿ, ದಾದಾಪೀರ್
ಪವಿತ್ರ ಪ್ರಜಾ ವಾರ್ತಾ)