ಜೆಡಿಎಸ್ ಪಕ್ಷದಿಂದ ಕುಮಾರ್ ಸ್ವಾಮಿ ಹಾಗೂ ನಿಖಿಲ್ ಕುಮಾರ್ ಸ್ವಾಮಿಯವರನ್ನು ಉಚ್ಛಾಟಿಸಿದ್ದಿರೋ ಅಥವಾ ಬರಿ ತೀರ್ಮಾನವಷ್ಟೆನಾ ಅಧ್ಯಕ್ಷರು ಸ್ಪಷ್ಟಪಡಿಸಬೇಕು
ಸಿ.ಎಂ.ಇಬ್ರಾಹಿಮ್ ರವರ ಇಬ್ಬಗೆ ನೀತಿಯು ಪಕ್ಷದ ಕಾರ್ಯಕರ್ತರನ್ನು ವಂಚಿಸುವುದಾಗಿದೆ.ಜೆಡಿಎಸ್ ಪಕ್ಷದ ಕುಮಾರ್ ಸ್ವಾಮಿ ಹಾಗೂ ನಿಖಿಲ್ ಕುಮಾರ್ ಸ್ವಾಮಿಯವರನ್ನು ಪಕ್ಷದಿಂದ ಉಚ್ಛಾಟಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿಕೆ ಕೊಟ್ಟಿದ್ದಾರೆ.

ಉಚ್ಛಾಟಿಸಲು ತೀರ್ಮಾನ ಅಷ್ಟೇ ನಾ ಅಥವಾ ಸಮಯ ನಿಗಧಿ ಮಾಡಲಾಗಿದೆಯೋ ವಿವರಿಸಿರಿ .ನಂತರ ಸಮಯಬಂದಾಗ ಅವರನ್ನು ಪಕ್ಷದದ ಉಚ್ಛಾಟಿಸಿಲ್ಲಾ ಅದು ಬರೀ ತೀರ್ಮಾನವಷ್ಟೇ ಎಂದು ತಿರುಚಿಕೊಳ್ಳಲೂ ಹಿಂಜರಿಯದವರು ನೀವು. ಆದ್ದರಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಸ್ಪಸ್ಟ ಸಂದೇಕೊಡ್ರಿ.ಪಕ್ಷದಿಂದ ಅವರನ್ನು ಉಚ್ಛಾಟಿಸಲಾಗಿದೆ ಎಂದು.ನಿಮಗೆ ಆ ಪವರ್ ಇರದಿದ್ದರೆ ನೀವೇ ರಾಜಿನಾಮೆಕೊಟ್ಟು ಹೋಗಿಬಿಡ್ರಿ ಜಾತ್ಯತೀತ ಹೆಸರು ನಂಬಿ ಬಂದ ಲಕ್ಷಾಂತರ ಕಾರ್ಯಕರ್ತರು ಹೇಗೋ ಅನಾಥರಂತಾಗಿ ಹೋಗಿದ್ದಾರೆ ಕಳ್ಳಕಾಕರನ್ನು ನಾಯಕರೆಂದು ನಂಬಿ ತಮ್ಮರಾಜಕೀಯ ಜೀವನವನ್ನ ಹಾಳುಮಾಡಿಕೊಂಡುಬಿಟ್ಟಿದ್ದಾರೆ.