ದಾವಣಗೆರೆ: ಕಳೆದ ವರ್ಷ ೩೭ಪತ್ರಕರ್ತರ ರಾಜ್ಯ ಸಮ್ಮೇಳನ ವು ವಿಜಯಪುರದಲ್ಲಿ ಯಶಶ್ವಿಯಾಗಿ ನಡೆದಿತ್ತು ಆ ಸಮ್ಮೇಳನದಲ್ಲಿ ಘೋಷಿಸಿದಂತೆ ಪತ್ರಕರ್ತರ ೩೮ನೇ ರಾಜ್ಯಸಮ್ಮೇಳನವು ದಾವಣಗೆರೆಯಲ್ಲಿ ನಡೆಸುವ ಕುರಿತು ತೀರ್ಮಾನಿಸಿ ಘೋಷಿಸಲಾಗಿತ್ತು.ಅದರಂತೆ ೩೮ನೇ ಪತ್ರಕರ್ತರ ರಾಜ್ಯಸಮ್ಮೇಳನವು ಡಿಸೆಂಬರ್ ಕೊನೆಯವಾರ ಅಥವಾ ಜನೇವರಿ ಮೊದಲವಾರದಲ್ಲಿ ದಾವಣಗೆರೆಯಲ್ಲಿ ನಡೆಯಲಿದ್ದು ಮುಖ್ಯಮಂತ್ರಿ ಯವರು ಉದ್ಘಾಟಿಸಲಿದ್ದಾರೆ. ಈ ಗಾಗಲೇ ಸಮ್ಮೇ ಳನದ ಪೂರ್ವ ಸಿದ್ದತೆಯ ಕಾರ್ಯಚಟುವಟಿಕೆಗಳಿಗೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ರವರು ಚಾಲನೆ ನೀಡಿದ್ದಾರೆ.ಅದರಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದಾವಣಗೆರೆ ಜಿಲ್ಲಾ ಘಟಕವು ಈಗಾಗಲೇ ಹಲವು ಸುತ್ತಿನ ಸಭೆಗಳನ್ನು ನಡೆಸಿ ಜಿಲ್ಲೆಯ ಎಲ್ಲಾ ತಾಲೂಕು ಘಟಕಗಳಿಗೆ ರಾಜ್ಯಪ್ರಧಾನ ಕಾರ್ಯದರ್ಶಿ ಶ್ರೀ ಜಿ.ಸಿ.ಲೋಕೇಶ್ ರವರೊಟ್ಟಿಗೆ ಭೇಟಿನೀಡಿ ಎಲ್ಲಾತಾಲೂಕು ಸಮಿತಿಗಳ ವಿಶ್ವಾಸ ಪಡೆಯಲಾಗಿದೆ ಮತ್ತು ಜಿಲ್ಲೆಯ ಎಲ್ಲಾ ಪ್ರತಿಕೆಗಳ ಚೀಫ್ ಬ್ಯೂರೋದ ಮುಖ್ಯಸ್ತರೊಂದಿಗೆ,ಸಂಪಾದಕರೊಂದಿಗೆ ಮತ್ತು ಹಿರಿಯ ಪತ್ರಕರ್ತರೊಂದಿಗೆ ಸಭೆಗಳನ್ನು ನಡೆಸಿ ಸಮ್ಮೇಳನಕ್ಕೆ ಅವರ ಸಲಹೆ ಸಹಕಾರಗಳ ಸಂಪೂರ್ಣ ಸಹಕಾರದ ಭರವಸೆಯನ್ನು ಪಡೆಯಲಾಗಿದೆ.ಅದರ ಮುಂದುವರಿದ ಭಾಗವಾಗಿ ವಿವಿಧ ಉಪಸಮಿತಿಗಳನ್ನೂ ಕೂಡಾ ರಚಿಸಲು ಸಿದ್ಧತೆ ನಡೆದಿರುತ್ತದೆ ಅದರಂತೆ ಮೊದಲನೆಯದಾಗಿ ಪತ್ರಕರ್ತರ ೩೮ನೇ ರಾಜ್ಯ ಸಮ್ಮೇಳನಕ್ಕೆ ಮಹಾ ಪೋಷಕರನ್ನಾಗಿ ದಾವಣಗೆರೆಯ ಕೊಡುಗೈದಾನಿ,ಮಾಜಿ ಸಚಿವ ಸಂಸದ ಪ್ರಸ್ತುತ ದಾವಣಗೆರೆ ದಕ್ಷಿಣ ವಿಧಾನಸಭೆಯ ಶಾಸಕರು ಮತ್ತು ಅಖಿಲಭಾರತ ವೀರಶೈವಲಿಂಗಾಯತ ಮಹಾ ಸಭಾದ ಅಧ್ಯಕ್ಷರಾದ ಡಾ.ಶಾಮನೂರು ಶಿವಶಂಕರಪ್ಪ ನವರನ್ನು ಮತ್ತು ಪೋಷಕರನ್ನಾಗಿ ಸಂಸದರಾದ ಶ್ರೀ ಜಿ.ಎಂ.ಸಿದ್ದೇಶ್ವರ್ ರವರನ್ನು ಮತ್ತು ಅಧ್ಯಕ್ಷರನ್ನಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ ರವರ ಹೆಸರುಗಳು ಪ್ರಸ್ತಾಪವಾಗಿದ್ದವು ಅದರಂತೆ ದಿನಾಂಕ ೧೫-೧೦-೨೦೨೩ರಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಶಿವಾನಂದ ತಗಡೂರ್,ರಾಜ್ಯಪ್ರಧಾನ ಕಾರ್ಯದರ್ಶಿ ಶ್ರೀ ಜಿಸಿ ಲೋಕೇಶ್ ರಾಜ್ಯಕಾರ್ಯದರ್ಶಿ ಶ್ರೀ ನಿಂಗಪ್ಪಚಾವಡಿ,ರಾಜ್ಯಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಕೆ.ಚಂದ್ರಣ್ಣ,ದೇವರಾಜ್,ಮತ್ತು ರಾಷ್ಟ್ರೀಯ ಮಂಡಳಿಯ ಸದಸ್ಯರಾದ ಎಸ್.ಕೆ.ಒಡೆಯರ್,ಹಾಗೂ ದಾವಣಗೆರೆ ಜಿಲ್ಲಾ ಅಧ್ಯಕ್ಷರಾದ ಇ.ಎಂ.ಮಂಜುನಾಥ್,ಪ್ರಧಾನ ಕಾರ್ಯದರ್ಶಿ ಎ.ಫಕೃದ್ದೀನ್,ಖಜಾಂಚಿ ಎನ್.ವಿ.ಬದರಿನಾಥ್,ಉಪಾಧ್ಯಕ್ಷ ಹೆಚ್.ಎನ್.ಪ್ರಕಾಶ್,ಕಾರ್ಯದರ್ಶಿ ಜೆ.ಎಸ್.ವಿರೇಶ್,ನಿರ್ದೇಶಕರಾದ ಸಿ.ವೇದಮೂರ್ತಿ ಮತ್ತು ಹಿರಿಯ ಪತ್ರಕರ್ತ ಸಾಹಿತಿ ಗಳಾದ ಬಿ.ಎನ್.ಮಲ್ಲಾಶ್,ಬಾ.ಮ.ಬಸವರಾಜ್ ರವರು ಸೇರಿದಂತೆ ಇನ್ನು ಅನೇಕ ಪತ್ರಕರ್ತರು ಡಾ.ಶಾಮನೂರು ಶಿಶಂಕರಪ್ಪ ನವರನ್ನು ರವರನ್ನು ಅವರ ಮನೆಯಲ್ಲಿ ಭೇಟಿಮಾಡಿ ಸಮ್ಮೇಳನದ ಕುರಿತು ವಿವರಿಸಲಾಯಿತು.
ಮತ್ತು ತಾವು ಸಮ್ಮೇಳನದ ಮಹಾಪೋಷಕರಾಗಿ ಒಪ್ಪಿಕೊಂಡು ಸಮ್ಮೇಳನದ ಯಶಸ್ವಿಗೆ ಸಹಾಯ ಕೋರಲಾಯಿತು.ಡಾ.ಶಿವಶಂಕರಪ್ಪ ನವರು ನಮ್ಮ ಮನವಿಗೆ ಸ್ಪಂದಿಸಿ ಸಹಾಯ ಸಹಕಾರ ನೀಡುವುದಾಗಿ ಹೇಳಿದರು ಇದೇ ಸಂದರ್ಭದಲ್ಲಿ ಸಚಿವ ಮಲ್ಲಿಕಾರ್ಜುನ್ ರವರನ್ನು ಭೇಟಿಮಾಡಿ ಸಮ್ಮೇಳನದ ಕುರಿತು ವಿವರಿಸಿ ಸಮ್ಮೇಳನದ ಅಧ್ಯಕ್ಷತೆ ತಾವು ವಹಿಸಬೇಕೆಂದು ಕೇಳಿಕೊಂಡಾಗ ಅವರೂ ಕೂಡಾ ಬಹಳ ಸಂತೋಷದಿಂದ ಒಪ್ಪಿಕೊಂಡರು.ರಾಜ್ಯಮಟ್ಟದ ಪತ್ರಕರ್ತ ಪ್ರತಿನಿಧಿಗಳು ನಮ್ಮದಾವಣಗೆರೆಯಲ್ಲಿ ಸಮ್ಮೇಳನನಡೆಸಲು ತೀರ್ಮಾನಿಸಿದ್ದು ಹೆಮ್ಮೆಯನಿಸುತ್ತದೆ ಸಮ್ಮೇಳನ ಯಶಸ್ವಿಯಾಗಿ ನಡೆಯಲು ತಮಗೆ ಅಗತ್ಯವಾದ ಸಹಾಯ ಸಹಕಾರ ನೀಡುವುದಾಗಿ ಭರವಸೆ ನೀಡಿ ಅಧ್ಯಕ್ಷತೆಯನ್ನು ಒಪ್ಪಿಕೊಂಡರು. ನಮ್ಮ ರಾಜ್ಯಾಧ್ಯಕ್ಷರು ತಮ್ಮ ಅನಾರೋಗ್ಯವನ್ನೂ ಲೆಕ್ಕಿಸದೆ ಬೆಂಗಳೂರಿನಿಂದ ಬಂದು ಮದ್ಯಾಹ್ನದ ಊಟವನ್ನೂ ಮಾಡದೆ ಸಮ್ಮೇಳನ ನಡೆಸಲು ಸೂಕ್ತಸ್ಥಳದ ಅನ್ವೇಷಣೆ ಮಾಡಿಕೊಂಡು ಸಂಸದ ಜಿಎಂ.ಸಿದ್ದೇಶ್ವರ್ ರವರನ್ನು ಭೇಟಿಮಾಡಬೇಕೆನ್ನುವಷ್ಟರಲ್ಲಿ ರಾಜ್ಯಾಧ್ಯಕ್ಷರ ಬಿಡುವಿಲ್ಲದೆ ದಿನವಿಡೀ ಹಲವು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಿಂದ ಮತ್ತೆ ಅವರಿಗೆ ಸ್ವಲ್ಪ ಆರೋಗ್ಯ ಸರಿ ಇಲ್ಲದ್ದರಿಂದ ತಾತ್ಕಾಲಿಕವಾಗಿ ವಿರಾಮ ಪಡೆಯಲಾಯಿತು ಸಂಸದರನ್ನು ಕಾಣಲು ಆಗಲಿಲ್ಲಾ ಮತ್ತೆ ನಮ್ಮ ರಾಜ್ಯಾಧ್ಯಕ್ಷರು ಬರುವವರಿದ್ದಾರೆ ಆ ಸಮಯದಲ್ಲಿ ಸಂಸದರನ್ನು ಶಾಸಕರುಗಳನ್ನು ಮಾಜಿ.ಹಾಲಿ ಎಲ್ಲಾ ಜನಪ್ರತಿನಿಧಿಗಳನ್ನು,ಸಂಘ,ಸಂಸ್ಥೆಗಳಮುಖಂಡರುಗಳನ್ನು ಮತ್ತು ಅಧಿಕಾರಿ ವರ್ಗದವರನ್ನು ಭೇಡಿಮಾಡಲು ತೀರ್ತಾನಿಸಿ ರಾತ್ರಿ ಹತ್ತು ಘಂಟೆಗೆ ರಾಜ್ಯ ಅಧ್ಯಕ್ರನ್ನ ಪ್ರಧಾನಕಾರ್ಯದರ್ಶಿಯವರನ್ನ ಕಾರ್ಯದರ್ಶಿ ಗಳನ್ನ ಬೆಂಗಳೂರಿಗೆ ಬೀಳ್ಕಡಲಾಯಿತು.ಎಂದಿನಂತೆ ಜಿಲ್ಲಾ ಸಮಿತಿಯು ಸಮ್ಮೇಳನದ ಸಿದ್ದತೆಯ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿದೆ.
(ಎಸ್.ಕೆ.ಒಡೆಯರ್.ರಾಷ್ಟ್ರೀಯ ಮಂಡಳಿ ಸದಸ್ಯ ಭಾರತೀಯ ಕಾರ್ಯನಿರತ ಪತ್ರಕರ್ತರ ಅಂಗಸಂಸ್ಥೆ ಕರ್ನಾಟಕ ಕಾರ್ತನಿರತ ಪತ್ರಕರ್ತರ ಸಂಘ ದಾವಣಗೆರೆ)