ಮೂಡಲಗಿ:ಅ,24-ಪಟ್ಟಣದ ಪತ್ರಿಕಾ ಕಾರ್ಯಾಲಯದಲ್ಲಿ ಭೈರನಟ್ಟಿ ಗ್ರಾಮ ಪಂಚಾಯತಿಗೆ ಬರದ ಅನುದಾನದ ಬಗ್ಗೆ ಸುದ್ದಿ ಗೋಷ್ಠಿ ನಡೆಸಿದರು. ತಾಲೂಕಿನ ಹುಣಶ್ಯಾಳ (ಪಿ ವಾಯ್) ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಭೈರನಟ್ಟಿ ಗ್ರಾಮ ಅಭಿವೃದ್ಧಿಯಿಂದ ವಂಚಿತವಾಗೆದೆ. ಗ್ರಾಮ ಕಾರ್ಯಲಯದ ಪಿಡಿಒ ಮತ್ತು ಕಂಪ್ಯೂಟರ್ ಆಪರೇಟರ್ ಸಾರ್ವಜನಿಕರ ಕೆಲಸಗಳ ಮಾಹಿತಿ ನೀಡದೆ ತಮಗೆ ಬೇಕಾದವರಿಗೆ ಮಾತ್ರ ಶೀಘ್ರವಾಗಿ ಕೆಲಸಗಳನ್ನು ಮಾಡಿಕೊಡುತ್ತಿದ್ದಾರೆ ಎಂದು ಹುಣಶ್ಯಾಳ (ಪಿ ವಾಯ್) ಗ್ರಾಮ ಪಂಚಾಯತಿ ಸದಸ್ಯರಾದ ಹಣಮಂತ ಜೋಗನ್ನವರ ಗಂಭೀರವಾಗಿ ಆರೋಪಿಸಿದ್ದಾರೆ.
ಗ್ರಾಮ ಪಂಚಾಯತಿಗೆ ಸಾಕಷ್ಟು ಅನುದಾನ ಬಂದರು ಸಹ ಭೈರನಟ್ಟಿ ಗ್ರಾಮಕ್ಕೆ ಯಾವುದೇ ಕೆಲಸವು ಮಾಡದೆ ಜನರಿಂದ ಮಾತ್ರ ತೆರೆಗೆ ವಸೂಲಿ ಮಾಡುತ್ತಿದ್ದಾರೆ.ಗ್ರಾಮದ ಜನರು ಸದಸ್ಯರ ವಿರುದ್ಧ ಅಸಮಾಧಾನ ಆಗಿದ್ದಾರೆ.ಈ ಬಗ್ಗೆ ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಮತ್ತು ಜಿಲ್ಲಾ ಪಂಚಾಯತ ಅಧಿಕಾರಿಗಳಿಗೆ ದೂರವಾಣಿ ಮೂಲಕ ಹಲವಾರು ಬಾರಿ ಹೇಳಿದರು ಅವರಿಂದ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲೆಂದು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.
ಭೈರನಟ್ಟಿ ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗದೇ ಕೊಳಚೆ ಪ್ರದೇಶದಂತೆ ಆಗಿದೆ.ರುದ್ರ ಭೂಮಿಯಲ್ಲಿ ರಾತ್ರಿಯ ವೇಳೆಗೆ ಬೆಳಕಿ ವ್ಯವಸ್ಥೆ ,ಸರಿಯಾಗಿ ಚರಂಡಿ ವ್ಯವಸ್ಥೆ ಇಲ್ಲ,ರಸ್ತೆ ಮೇಲೆ ನೀರು ಹರಿಯುತ್ತದೆ. ನಿಂತ ನೀರು ಎರಡ್ಮರೂ ದಿನದ ನಂತರ ಮಲಿನ/ಗಲಿಜು ಇದರಿಂದ ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ಸಮಸ್ಯೆಯಾಗಿದೆ ಎಂದು ಸಾಕಷ್ಟು ಸಲ ಅಧಿಕಾರಿಗಳಿಗೆ ಹೇಳಿದರು ನಮ್ಮ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಕೋಡುತ್ತಿಲ್ಲವೆಂದು ಸದಸ್ಯರಾದ ಹಣಮಂತ ಜೋಗನ್ನವರ ಕಿಡಿಕಾರಿದರು.
ನಮ್ಮ ಗ್ರಾಮದಿಂದ ಸದಸ್ಯರನ್ನು ಆಯ್ಕೆ ಮಾಡಿ ಹುಣಶ್ಯಾಳ (ಪಿ ವಾಯ್) ಗ್ರಾಮ ಪಂಚಾಯತಿಗೆ ಕಳಿಸಿದರು ಏನೂ ಪ್ರಯೋಜನ ಇಲ್ಲದಂತಾಗಿದೆ.ಗ್ರಾಮಸ್ಥರ ಸಮಸ್ಯೆಗಳಿಗೆ ಗ್ರಾಮ ಪಂಚಾಯತಿ ಸದಸ್ಯರು ಗಮನ ಹರಿಸಬೇಕು, ಆದರೆ ಗ್ರಾಮಸ್ಥರೇ ಗ್ರಾಮಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.ಅಧಿಕಾರಿಗಳು ಶೀಘ್ರವಾಗಿ ಎಚ್ಚೆತ್ತುಕೊಂಡು ಗ್ರಾಮದ ಅಭಿವೃದ್ಧಿಗೆ ಸಹಕಾರ ನೀಡದಿದ್ದರೆ ಭೈರನಟ್ಟಿ ಗ್ರಾಮಸ್ಥರು ಗ್ರಾಮ ಪಂಚಾಯತಿ ಕಾರ್ಯಾಲಯದ ಎದುರು ಉಗ್ರ ಹೋರಾಟ ಮಾಡುವ ಮೂಲಕ ಅಧಿಕಾರಿಗಳಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಭೈರನಟ್ಟಿ ಗ್ರಾಮದ ನಿವಾಸಿ ರವೀಂದ್ರ ಡೋಳ್ಳಿ ಎಚ್ಚರಿಸಿದರು.
ಭೈರನಟ್ಟಿ ಗ್ರಾಮದ ನಿವಾಸಿಗಳಾದ ಶೇಖರ ದೊಡ್ಡಮನಿ,ಲಕ್ಕಪ್ಪ ಪೂಜೇರಿ, ಮುತ್ತು ರಡ್ಡಿ ಮತ್ತು ರವಿ ಉಂದ್ರಿ
ಪಾಲ್ಗೊಂಡು ತಮ್ಮ ಗ್ರಾಮಕ್ಕೆ ಬರಬೇಕಾದ ಅನುಧಾನದ ಬಗ್ಗೆ ಸುದ್ದಿ ಗೋಷ್ಠಿ ನಡೆಸಿದರು.
ಅನುಧಾನದಿಂದ ವಂಚಿತವಾಗಿರುವ ಗ್ರಾಮ, ಭೈರನಟ್ಟಿ
RELATED ARTICLES