ಬೆಂಗಳೂರು:ಹೆಸರಾಂತ ಹೃದ್ರೋಗ ತಜ್ಞರ ಡಾ ಎಚ್ ಸಿದ್ದಪ್ಪ ಅವರು ಹೃದ್ರೋಗಿಗಳಿಗೆ ಕಡಿಮೆ ವೆಚ್ಚದಲ್ಲಿ ಅತ್ಯಾಧುನಿಕ ಮಾದರಿಯ ” ಕಿಲೇಷನ್ ಥೆರಫಿ” ಚಿಕಿತ್ಸೆ ನೀಡುವ ಮೂಲಕ ಹೊಸ ಆಶಾ ಭಾವನೆ ಮೂಡಿಸಿದ್ದಾರೆ.
ಹೃದಯಾಘಾತದ ನಂತರ ಮಾಡುವ ದುಬಾರಿ ವೆಚ್ಚದ ಶಸ್ತ್ರ ಚಿಕಿತ್ಸೆ ಹಾಗೂ ಸ್ಟಂಟ್ ಅಳವಡಿಕೆ ಮಾಡದೆ ಕೇವಲ ಔಷದೋಪಾಚಾರದ ಮೂಲಕ ಅತ್ಯಾಧುನಿಕ ಮಾದರಿಯ ಅಡ್ಡ ಪರಿಣಾಮ ವಿಲ್ಲದ ” ಕಿಲೇಷನ್ ಥೆರಫಿ” ಚಿಕಿತ್ಸೆ ನೀಡಿ ಇವರೆಗೂ 20 ಸಾವಿರ ಮಂದಿ ಹೃದ್ರೋಗಿಗಳನ್ನು ಗುಣಪಡಿಸಿದ ಶ್ರೇಯಸ್ಸು ಡಾ ಎಚ್ ಸಿದ್ದಪ್ಪ ಅವರಿಗೆ ಸಲ್ಲುತ್ತದೆ ಈ ಚಿಕಿತ್ಸೆಯ ವೆಚ್ಚ ಕೇವಲ 45 ಸಾವಿರ ರೂಪಾಯಿ.
ಹೃದ್ರೋಗಕ್ಕೆ ಕಡಿಮೆ ದರದಲ್ಲಿ ಚಿಕಿತ್ಸೆ ನೀಡುವುದರ ಜೊತೆಗೆ ಡಾಕ್ಟರ್ ಎಚ್ ಸಿದ್ದಪ್ಪ ಅವರು ಸುಮಾರು 14 ವರ್ಷಗಳ ಕಾಲ ಗ್ರಾಮೀಣ ಪ್ರದೇಶಗಳಲ್ಲಿ ಉಚಿತ ಆರೋಗ್ಯ ಶಿಬಿರ ನಡೆಸಿ ಜನಸಾಮಾನ್ಯರಲ್ಲಿ ಆರೋಗ್ಯದ ಕುರಿತು ಜಾಗೃತಿ ಮೂಡಿಸಿದ್ದಾರೆ ಅಲ್ಲದೆ ಅಗತ್ಯ ಇದ್ದವರಿಗೆ ಉಚಿತ ಚಿಕಿತ್ಸೆ ವ್ಯವಸ್ಥೆಯನ್ನು ಮಾಡಿದ್ದಾರೆ. ಆದಿಚುಂಚನಗಿರಿ ಮಠದ ಮಠಾಧೀಶ ಡಾ. ಬಾಲ ಗಂಗಾಧರನಾಥ ಸ್ವಾಮೀಜಿಯವರ ಪ್ರೇರಣೆಯಿಂದ ಡಾ. ಎಚ್ ಸಿದ್ದಪ್ಪ ಅವರು ಗ್ರಾಮೀಣ ಪ್ರದೇಶದಲ್ಲಿ ಉಚಿತ ಆರೋಗ್ಯ ಶಿಬಿರ ನಡೆಸಿದ್ದಾರೆ.
ಎಂಬಿಬಿಎಸ್ ಎಂ ಡಿ ಪದವಿ ಪೂರೈಸಿದ ಡಾಕ್ಟರ್ ಸಿದ್ದಪ್ಪ ಅವರು ತಮ್ಮ ಪ್ರಾಥಮಿಕ ಸೇವೆಯನ್ನು ತುಮಕೂರು ಜಿಲ್ಲೆಯ ಕೊರಟೆಗೆರೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿ 1975 ರಲ್ಲಿ ಆರಂಭಿಸಿದರು. ನಂತರ ಡಾಕ್ಟರ್ ಸಿದ್ದಪ್ಪ ಅವರು ತಮ್ಮ ಬಹುತೇಕ ಸೇವೆಯನ್ನು ಬೆಂಗಳೂರಿನ ಇಎಸ್ಐ ಆಸ್ಪತ್ರೆಯಲ್ಲಿ ಮುಂದುವರಿಸುತ್ತಾರೆ.
ಇ ಎಸ್‌ಐ ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಅತ್ಯುತ್ತಮ ರೀತಿಯ ಚಿಕಿತ್ಸೆ ನೀಡುವ ಮೂಲಕ ಅವರ ಪ್ರಸಂಶೆಗೆ ಪಾತ್ರರಾಗುತ್ತಾರೆ.
ನಿವೃತ್ತಿತನಕ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ತಮ್ಮ ಜೀವನ ಸಾರ್ಥಕತೆಯನ್ನು ಪಡೆಯುತ್ತಾರೆ. ಇವತ್ತು ವೈದ್ಯಕೀಯ ವೃತ್ತಿ ಅಂದ್ರೆ ಕೇವಲ ಹಣ ಮಾಡುವ ವೃತ್ತಿಯಾಗಿ ಬದಲಾವಣೆಯಾಗಿದ್ದು ಅದಕ್ಕೆ ಅಪವಾದ ಎಂಬಂತೆ ಡಾ ಎಚ್ ಸಿದ್ದಪ್ಪ ಅವರು ತಮ್ಮ ಜೀವನದ ಬಹುತೇಕ ಸೇವೆಯನ್ನು ಇಎಸ್ಐ ಆಸ್ಪತ್ರೆಯಲ್ಲಿ ನೀಡುವ ಮೂಲಕ ಬಡ ರೋಗಿಗಳಿಗೆ ಆಶಾಕಿರಣವಾಗಿದ್ದಾರೆ.
ಇಎಸ್ಐ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವಾಗ ಬಡ ರೋಗಿಗಳು ಪಡುವ ಆರ್ಥಿಕ ಸಮಸ್ಯೆಯನ್ನು ಹತ್ತಿರದಿಂದ ನೋಡಿದ ಡಾ. ಸಿದ್ದಪ್ಪ ಅವರು ಹೃದ್ರೋಗಕ್ಕೆ ಸಂಬಂಧಿಸಿದ ಅತ್ಯಂತ ದುಬಾರಿ ವೆಚ್ಚದ ಚಿಕಿತ್ಸೆಗಳನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಮಾಡುವ ಹೊಸ ವಿಧಾನವನ್ನು ಜಾರಿಗೆ ತಂದಿದ್ದಾರೆ. ಆ ಮುಖಾಂತರ ಶಸ್ತ್ರ ಚಿಕಿತ್ಸೆ ಮಾಡದೆ ಹೃದ್ರೋಗವನ್ನು ಕೇವಲ ಔಷಧೋಪಚಾರಗಳಿಂದಲೇ ಗುಣಪಡಿಸುತ್ತಾರೆ ಈ ಚಿಕಿತ್ಸಾ ವಿಧಾನಕ್ಕೆ “ಕಿಲೇಷನ್ ಥೆರಪಿ” ಎಂದು ಹೆಸರು.
ಡಾ. ಎಚ್. ಸಿದ್ದಪ್ಪ ಅವರು ಈ ರೀತಿಯ ಕಿಲೇಷನ್ ಥೆರೆಪಿ ಚಿಕಿತ್ಸೆಯ ಮೂಲಕ ಈವರೆಗೆ 20 ಸಾವಿರ ರೋಗಿಗಳನ್ನ ಗುಣಪಡಿಸಿದ್ದಾರೆ.
ಅವರು ಹೃದ್ರೋಗದಿಂದ ನರಳುತ್ತಿರುವ ಬಡ ರೋಗಿಗಳಿಗೆ ಹೊಸ ಜೀವನ ವಿಧಾನ ರೂಪಿಸಿಕೊಳ್ಳೋಕೆ ನೆರವಾಗಿದ್ದಾರೆ.
“ಕಿಲೇಷನ್ ಥೆರಫಿ ಚಿಕಿತ್ಸೆ ಮೂಲಕ ಅತ್ಯಂತ ಕಡಿಮೆ ವೆಚ್ಚದಲ್ಲಿ ಹೃದಯ ಸಂಬಂಧಿ ಕಾಯಿಲೆಗಳನ್ನು ಗುಣ ಪಡಿಸಬಹುದು ಇದು ರೋಗಿಗಳಿಗೆ ತಮ್ಮ ಭವಿಷ್ಯದ ಜೀವನದ ಬಗ್ಗೆ ಅತ್ಮ ವಿಶ್ವಾಸ ಹೆಚ್ಚುವಂತೆ ಮಾಡುತ್ತದೆ ಎಂದು ಡಾ ಎಚ್ ಸಿದ್ದಪ್ಪ ಹೇಳುತ್ತಾರೆ.
ಆರ್ಥಿಕವಾಗಿ ದುರ್ಬಲರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಎಂದು ಅವರು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ದೊಡ್ಡ ಪ್ರಮಾಣದಲ್ಲಿ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದು ಇದನ್ನು ತಡೆಗಟ್ಟಲು ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆ ನೀಡುವುದು ಅಗತ್ಯ ಎಂದು ಡಾ ಎಚ್ ಸಿದ್ದಪ್ಪ ಸಲಹೆ ನೀಡಿದರು.
ಡಾ ಎಚ್ ಸಿದ್ದಪ್ಪ ಅವರ ಕಿಲೇಷನ್ ಥೆರಫಿ ಚಿಕಿತ್ಸೆ ಪಡೆದು ಗುಣ ಮುಖರಾದ ರೋಗಿ ಅನೆಕಲ್ ನ ಮುನಿರಾಜು ಮಾತನಾಡಿ ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೆ ಸ್ಟಂಟ್ ಅಳವಡಿಸದೆ ಹೃದಯ ಸಂಬಂಧದ ಕಾಯಿಲೆ ಗುಣ ಪಡಿಸಿರುವುದು ಭವಿಷ್ಯದ ಜೀವನವನ್ನು ಆತ್ಮ ವಿಶ್ವಾಸದಿಂದ ಬದುಕುವಂತೆ ಮಾಡಿದೆ ಅಲ್ಲದೆ ಕುಟುಂಬದ ಮೇಲಿನ ಆರ್ಥಿಕ ಹೊರೆ ಕಡಿಮೆ ಮಾಡಿದೆ ಎಂದರು.
ಡಾ.ಎಚ್. ಸಿದ್ದಪ್ಪ 9844141526
ಹಾರ್ಟ್ ಡಿಸೀಸ್ ಡಿಟೆಕ್ಷನ್ ಸೆಂಟರ್,
65 ಅಪ್ಪಾರೆಡ್ಡಿ ಪಾಳ್ಯ, ಇ ಎಸ್ ಐ ನರ್ಸ್ ಕ್ವಾಟ್ರಸ್ ಹಿಂಬಾಗ, ಡಬಲ್ ರೋಡ್, 6 ನೇ ಮುಖ್ಯ ರಸ್ತೆ, 2 ನೇ ಹಂತ, ಇಂದಿರಾನಗರ, ಬೆಂಗಳೂರು-38
080-25292452, 25292452