ದಾವಣಗೆರೆ:2023-24ನೇ ಸಾಲಿನ ದಾವಣಗೆರೆ ವಿಶ್ವವಿದ್ಯಾಲಯ ಕಬಡ್ಡಿ ಅಂತರ ಕಾಲೇಜು ಕ್ರೀಡಾಕೂಟ ಹಾಗೂ ವಿಶ್ವವಿದ್ಯಾಲಯ ತಂಡ ಆಯ್ಕೆ ಸರ್ಕಾರಿ ಕಲಾ ಕಾಲೇಜ್ ಚಿತ್ರದುರ್ಗದಲ್ಲಿ ದಿನಾಂಕ 26 27 ಅಕ್ಟೋಬರ್ 2023 ನಡೆಯಿತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದಾವಣಗೆರೆ ಪುರುಷ ತಂಡ ಭಾಗವಹಿಸಿ ತೃತೀಯ ಸ್ಥಾನವನ್ನು ಪಡೆದಿರುತ್ತದೆ ತಂಡದಲ್ಲಿ ಸೂರಜ್ ಎಸ್ ಇರಾನಿ ತಂಡದ ನಾಯಕ ಮನೋಜ್ ಕುಮಾರ ಬೆಸ್ಟ್ ರೈಡರ ಪ್ರಶಸ್ತಿ, ಸಂತೋಷ ಎಚ್, ಗೋಪಿ ಆರ್ ಮಜಮುಲ್ಲಾ, ಚಂದ್ರನಾಯಕ್, ದರ್ಶನ್, ಗೋಣಿಬಸಪ್ಪ ,ನಾಗರಾಜ್ ,ಮಾರುತಿ, ನಂದೀಶ ,ಸಲ್ಮಾನ್ ಖಾನ್ ,ಭಾಗವಹಿಸಿ ಕಾಲೇಜಿಗೆ ದೈಹಿಕ ಶಿಕ್ಷಣ ವಿಭಾಗಕ್ಕೆ ಕೀರ್ತಿಯನ್ನು ತಂದಿರುತ್ತಾರೆ
ವಿಜೇತ ತಂಡಕ್ಕೆ ಪ್ರಾಂಶುಪಾಲರಾದ ಡಾ. ದಾದಾಪೀರ್, ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ರೇಖಾ ಎಂ ಆರ್, ಪತ್ರಾಂತಿಕತ ವ್ಯವಸ್ಥಾಪಕರಾದ ಗೀತಾದೇವಿ ಹಾಗೂ ಕಾಲೇಜಿನ ಕ್ರೀಡಾ ವಿಭಾಗದ ಸದಸ್ಯರಾದ ವೆಂಕಟೇಶ್ ಬಾಬು ಮಂಜುನಾಥ ಜೇ ಎಂ ಹಾಗೂ ಎಲ್ಲಾ ಸದಸ್ಯರು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ