ದಾವಣಗೆರೆ ಅ. ೩೧:ಹಲವಾರು ವರ್ಷಗಳ ಕಾಲ
ಸಾಮಾಜಿಕ, ಸಾಂಸ್ಕೃತಿಕ, ರಂಗದಲ್ಲಿ ಹಲವು ಪ್ರಮುಖ ವಿಷಯಗಳ ಕುರಿತು ರಾಜ್ಯ ಮಟ್ಟದ ಬೀದಿ ನಾಟಕ ಜಾಗೃತಿ ಮೂಡಿಸುವ ಸಮಸಮಾಜದ
ಕನಸುಗಳ ಬಿತ್ತುವ ಸಾಂಸ್ಕೃತಿಕ ರಂಗದಲ್ಲಿ ತನ್ನದೇ ಸೇವೆಗೈದ
ದಾವಣಗೆರೆ ಅವರಗೆರೆ ಬಾನಪ್ಪನವರಿಗೇ ಈ ಬಾರಿಯ
ಜಿಲ್ಲಾಡಳಿತ ಕೊಡಿ ಮಾಡುವ
ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಸಾಕ್ಷರತಾ ಅರಿವು ಜಾಗೃತಿ ಮೂಡಿಸುವ ಜಾಥಾ ಗಳು ಇಪ್ಟಾ ಕಲಾ ತಂಡದ ಮೂಲಕ
ಸ್ವಚ್ಛತೆ, ನೈರ್ಮಲ್ಯ ವ್ಯವಸ್ಥೆ, ಅಸ್ಪೃಶ್ಯತೆ ನಿವಾರಣೆ,ಪರಿಸರ ಸಂರಕ್ಷಣೆ,ಬಾಲ ಕಾರ್ಮಿಕ ಪದ್ಧತಿ, ಆರೋಗ್ಯ, ಮಹಿಳಾ ಸ್ವಾವಲಂಬನೆ ಸಬಲೀಕರಣ,
ಭಾರತ ಜ್ಞಾನ ವಿಜ್ಞಾನ ಸಮಿತಿ
ಸ್ಥಳೀಯ ಸಂಸ್ಥೆಗಳಲ್ಲಿ ಹತ್ತು ಹಲವು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ರಂಗ ನಾಟಕಗಳಾದಮಲ ಮಗ, ಧನಿಕರ ದೌರ್ಜನ್ಯ, ಧರ್ಮ ದೇವತೆ, ಸೇರಿದಂತೆ ಹಲವು ನಾಟಕಗಳಲ್ಲಿ ಅಭಿನಯ, ಸತೀಶ್ ಜಾರಕಿಹೊಳಿ ಫೌಂಡೇಶನ್ ಮಾನವ ಬಂಧುತ್ವ ವೇದಿಕೆ ವಾರ್ತಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯ ಹಲವಾರು ವರ್ಷಗಳಿಂದ ನಾಟಕ ಜಾಗೃತಿ ಮೂಡಿಸುವ ಗೀತೆಗಳ ಗಾಯನ
ಹಲವು ಜನಪರ ಹೋರಾಟಗಳಲ್ಲಿ ತೊಡಗಿದ್ದ
ಬಾನಪ್ಪನವರಿಗೇ ಈ ಬಾರಿಯ
ರಾಜ್ಯೋತ್ಸವ ಪ್ರಶಸ್ತಿ ಸಂದಿರುವುದು ಹೆಮ್ಮೆಯ ಸಂಗತಿ ಇನ್ನೂ ಹೆಚ್ಚಿನ ಸಾಮಾಜಿಕ ಬದ್ಧತೆಯ
ಜವಾಬ್ದಾರಿ ಸೇವೆ ಮಾಡಲೆಂದು ದಲಿತ ಮುಖಂಡ ಹೆಗ್ಗರೆ ರಂಗಪ್ಪ, ಭಾರತೀಯ ಜನ ಕಲಾ ಸಮಿತಿ ಇಪ್ಟಾ ಸಮಿತಿ
ರಾಷ್ಟ್ರ ಪ್ರಶಸ್ತಿ ವಿಜೇತ ಮಾಗಾನಹಳ್ಳಿ ಮಂಜುನಾಥ್
ಇನ್ ಸೈಟ್ಸ್ ಐಎಎಸ್ ಕೋಚಿಂಗ್ ವಿನಯ್ ಕುಮಾರ್ ರವರು, ಹಿರಿಯ ಮಾಧ್ಯಮ ವರದಿಗಾರ ಪುರಂದರ್ ಲೋಕಿಕೆರೆ ,ಅವರಗೆರೆ ರುದ್ರಮುನಿ, ಗುರುಸಿದ್ಧ ಸ್ವಾಮಿ,
ಕಟ್ಟಡ ಕಾರ್ಮಿಕರ ಅಧ್ಯಕ್ಷ ಅವರಗೆರೆ ಉಮೇಶ್, ಕಾರ್ಮಿಕ ನಾಯಕ ಪಿ ಬಿ ಚಂದ್ರು, ಮಾಜಿ ಇಪ್ಟಾ ಜಿಲ್ಲಾಧ್ಯಕ್ಷ ಪತ್ರಕರ್ತ ಒ ಎನ್ ಸಿದ್ದಯ್ಯ ಒಡೆಯರ್, ಹೊನ್ನಾಳಿ ರೂಪಧರ್ಶಿ ಕಲಾ ತಂಡದ ಮಲ್ಲಿಕಾರ್ಜುನ ಸ್ವಾಮಿ ಸೇರಿದಂತೆ ಹಲವು ಸಂಸ್ಥೆಗಳು ಪ್ರಗತಿ ಪರ ಸಂಘಟನೆಗಳ ಮುಖಂಡರ ಹಾರೈಸಿದ್ದಾರೆ.