Saturday, December 21, 2024
Homeಸಾಧನೆಕರ್ನಾಟಕ ರಾಜ್ಯೋತ್ಸವ :11 ಸಾಧಕರಿಗೆ ಹಾಗೂ 50 ಜನ ಚಾಲಕರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಕರ್ನಾಟಕ ರಾಜ್ಯೋತ್ಸವ :11 ಸಾಧಕರಿಗೆ ಹಾಗೂ 50 ಜನ ಚಾಲಕರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ


ಹಾವೇರಿ:ನ.01: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹಾವೇರಿ ವಿಭಾಗದಲ್ಲಿ ಅಪಘಾತ ರಹಿತವಾಗಿ ಚಾಲನೆ ಮಾಡಿದ 55 ಚಾಲಕ ಮತ್ತು ಚಾಲಕ ಕಂ ನಿರ್ವಾಹಕರನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಮಾಡಿದ ಜಿಲ್ಲೆಯ 11 ಮಹನೀಯರನ್ನು ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು.
11 ಸಾಧಕರು: ಸಾಹಿತ್ಯ ಕ್ಷೇತ್ರದಿಂದ ರಾಣೇಬೆನ್ನೂರಿನ ಪ್ರೊ.ಎನ್.ಕೆ.ರಾಮಚಂದ್ರಪ್ಪ, ಸಮಾಜ ಸೇವಾ ಕ್ಷೇತ್ರದಲ್ಲಿ ಬ್ಯಾಡಗಿ ಜೈತುನಬಿ ಮ .ಸೌದಾಗರ ಹಾಗೂ ಹಾವೇರಿಯ ಅಬ್ದುಲ್‍ಖಾದರ ಹ.ಧಾರವಾಡ, ಜಾನಪದ ಕಲಾ ವಿಭಾಗದಲ್ಲಿ ಹಾವೇರಿ ತಾಲೂಕು ನಾಗನೂರಿನ ಪುರವಂತಿಕೆ ಸಂಗಮೇಶ ಬ.ಪರಿಶೆಟ್ಟಿ, ಸಂಗೀತ ಕ್ಷೇತ್ರದಲ್ಲಿ ಶಿಗ್ಗಾಂವ ತಾಲೂಕು ತಡಸದ ಶ್ರೀಮತಿ ಗಾಯತ್ರಿ ಪತ್ತಾರ, ವಾದ್ಯ ವಿಭಾಗದಲ್ಲಿ ಹಾನಗಲ್ ತಾಲೂಕು ಬಾಳಂಬೀಡ ಗ್ರಾಮದ ಬಸವರಾಜ ದು.ಕೋಳೂರ, ರಂಗಭೂಮಿ ಕ್ಷೇತ್ರದಿಂದ ರಾಣೇಬೆನ್ನೂರು ತಾಲೈಕು ಬೆನಕೊಂಡದ ರೇವಣಪ್ಪ ಕ.ಮೆಗಳಮನಿ, ನೃತ್ಯ ವಿಭಾಗದಲ್ಲಿ ಶಿಗ್ಗಾಂವ ತಾಲೂಕು ಮಲ್ಲಿಕಾರ್ಜುನ ನಗರದ ಶರಣು ಬಡ್ಡಿ, ಚಿತ್ರಕಲಾ ವಿಭಾಗದಲ್ಲಿ ಗುಡಿಸಲಕೊಪ್ಪದ ಪರಮೇಶ ಬಂಡಿ, ಕರಕುಶಲ ಕ್ಷೇತ್ರದಲ್ಲಿ ಹಾವೇರಿಯ ಅಲ್‍ಹಾಜ್ ಉಸ್ಮಾನ್‍ಸಾಹೇಬ ಪಠವೇಗಾರ ಹಾಗೂ ಸಂಘ-ಸಂಸ್ಥೆ ವಿಭಾಗದಲ್ಲಿ ರಾಣೇಬೆನ್ನೂರಿನ ಅಂಧರ ಜೀವ ಬೆಳಕು ಸಂಸ್ಥೆಗೆ 2023ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಯಿತು.

ಬೆಳ್ಳಿ ಪದಕ ವಿಜೇತರು: ಹಾವೇರಿ ಘಟಕದಿಂದ 2018ನೇ ಸಾಲಿಗೆ ಎನ್. ಕೆ. ಯೋಗೇಶ, ಎಸ್. ಬಿ. ಸಂಗಮ್ಮಣ್ಣವರ, ಹೆಚ್. ಎಸ್. ಗೊಣ್ಣೆಮ್ಮನವರ, ಶರಣಬಸವ ಎನ್ ಅಂಗಡಿ, ಎನ್.ಎಂ.ನವಲೆ, ವಿ. ಬಿ.ಕುಬಿಹಾಳ, ಎಸ್.ಎಂ. ಕೋಳಿ, ಡಿ.ಕೆ ಕಟ್ಟಿಮನಿ, ಎಂ.ಟಿ ಬೆನಕನಹಳ್ಳಿ, ಶ್ರೀಕಂಠಮೂರ್ತಿ ಹೆಚ್.ಪಿ ಹಾಗೂ 2019ನೇ ಸಾಲಿಗೆ ಎನ್.ಪಿ.ಪಡಗೋ, ರಾಣೇಬೆನ್ನೂರು ಘಟಕದಿಂದ 2018ನೇ ಸಾಲಿಗೆ ಹೆಚ್.ಜೆ ಕಂಠೀರವ, ಡಿ. ಹೆಚ್.ಚಲವಾದಿ, ಆರ್. ಎಂ.ಬಡಿಗೇರ್, ಜಿ.ಎಸ್.ಜಕರೆಡ್ಡಿ, ವೈ.ಎಸ್.ಜ್ಯೋತಿ, ಎನ್.ಬಿ.ಬದಾಮಿ, ವಿ.ಸಿ.ಬಡಗೇರ್, ಪಿ.ಹೆಚ್ ಶೇತಸನದಿ, ಟಿ.ಪಿ.ದೊಡ್ಡಲಿಂಗಣ್ಣವರ, ಎಂ.ಇಸ್ಮಾಯಿಲ್, ಎಸ್.ಕೆ.ಪಾಟೀಲ್, ಕರಿಬಸಪ್ಪ.ಎಸ್, ಎಸ್.ಡಿ. ವಾಲಗದ, ಈ. ಹೆಚ್.ಎರೇಸಿಮೆ, ಎಂ.ಬಿ.ಮಳ್ಳೇಣ್ಣನವರ ಹಾಗೂ 2019ನೇ ಸಾಲಿಗೆ ಬಿ.ಬಿ.ಜಡಗಣ್ಣವರ, ಎನ್.ರಮೇಶ, ಯು. ಆರ್. ಅನ್ವೇರಿ, ಆರ್. ಪಿ ಬಡಗೇರ್ ಅವರನ್ನು ಸನ್ಮಾನಿಸಲಾಯಿತು.
ಹಿರೇಕೆರೂರು ಘಟಕದಿಂದ 2018ನೇ ಸಾಲಿಗೆ ಎಸ್.ಬಿ ಕೊಲ್ಲಾಪೂರ, ಹೆಚ್.ಎಫ್.ನಾಸೂರು, ಕೆ.ಬಿ ಗುತ್ತಲ, ಆಯೂಬ ಅಲಿ, ಸಿ.ಆರ್.ಇಳಗೇರ, ಕೆ.ಬಿ.ನಂದಿಗಾವಿ, ಐ.ಹೆಚ್.ಮುತ್ತಗೇರ, ಬಸವರಾಜ ಗುಬ್ಬಿ, ಎಸ್.ಐ.ಹಿರೇಮೊರಬ, ಎಸ್.ಜಿ.ಹಿರೇಳ್ಳೇರ ಹಾಗೂ 2019ನೇ ಸಾಲಿಗೆ ಬಿ.ಬಿ.ಚಂದಶೇಖರ್ ಹಾಗೂ ಹಾನಗಲ್ ಘಟಕದಿಂದ 2019ನೇ ಸಾಲಿಗೆ ಎಸ್.ಎಂ.ಗುಮ್ಮ ಹಾಗೂ ಹೆಚ್.ಜಿ.ಪಾಟೀಲ್, 2018ನೇ ಸಾಲಿಗೆ ಸಿ.ಎಂ.ಚಕ್ರಸಾಲಿ, ಪಿ.ಎಂ. ವಾಲಿಕಾರ, ಪಿ. ಹೆಚ್ ಹಿರೇಮನಿ ಅವರನ್ನು ಸನ್ಮಾನಿಸಲಾಯಿತು.
ಬ್ಯಾಡಗಿ ಘಟಕದಿಂದ 2019ನೇ ಸಾಲಿಗೆ ಕೆ.ಎಂ.ಪ್ರಕಾಶ, ಕೆ.ಪಿ.ಕೆಂಡಮಠ, ಸಿ.ಎಸ್. ಓಡಿಸೋಮಠ, ಎನ್.ಎಸ್ ಹುಬ್ಬಳ್ಳಿ, ಎಂ.ಬಿ.ರಾಮಣ್ಣ ಹಾಗೂ ಸವಣೂರು ಘಟಕದಿಂದ 2018ನೇ ಸಾಲಿಗೆ ಸಿ.ಎಂ.ರುದ್ರಪ್ಪ ಹಾಗೂ ವಿಭಾಗೀಯ ಕಚೇರಿ ಹಾಗೂ ತನಿಖಾ ದಳದಿಂದ 2019ನೇ ಸಾಲಿಗೆ ಎ.ಎಸ್. ಹಿರೇಮಠ, ಬಿ.ಜೆ.ಕನ್ನಾನಾಯ್ಕನವರ, ಎಸ್.ಟಿ. ಅಣ್ಣಿಗೇರಿ ಅವರನ್ನು ಸನ್ಮಾನಿಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments