Saturday, December 21, 2024
Homeಸಾರ್ವಜನಿಕ ಧ್ವನಿಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ಸಾವಿರಾರು ಅಮಾಯಕರನ್ನು ಕೊಲ್ಲುತ್ತಾ ಪ್ಯಾಲೆಸ್ತೀನ್ ಮೇಲೆ ನರಮೇಧದ ನಡೆಸುತ್ತಿರುವ ಇಸ್ರೇಲ್...

ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ಸಾವಿರಾರು ಅಮಾಯಕರನ್ನು ಕೊಲ್ಲುತ್ತಾ ಪ್ಯಾಲೆಸ್ತೀನ್ ಮೇಲೆ ನರಮೇಧದ ನಡೆಸುತ್ತಿರುವ ಇಸ್ರೇಲ್ ಗೆ ಯಾವುದೇ ಕಾರಣಕ್ಕೂ ನಮ್ಮ‌ದೇಶದ ಕಾರ್ಮಿಕರನ್ನು ಕಳಿಸಬಾರದೆಂದು ಸಿ.ಡಬ್ಲ್ಯೂ. ಎಫ್.ಐ. ಆಗ್ರಹಿಸುತ್ತದೆ.

ಭಾರತ ನಿರ್ಮಾಣ ಕಾರ್ಮಿಕರ ಒಕ್ಕೂಟ

‌‌‌‌ ‌‌‌

ಇಸ್ರೇಲ್ ಯುದ್ಧದ ನಂತರ ಕೆಲಸ ಮಾಡಲು ಸಾಧ್ಯವಾಗದ ಪ್ಯಾಲೆಸ್ತೀನ್ ಕಾರ್ಮಿಕರ ಬದಲಿಗೆ ಭಾರತದಿಂದ ನಿರ್ಮಾಣ ಕಾರ್ಮಿಕರನ್ನು ಇಸ್ರೇಲ್‌ಗೆ ಕೆಲಸ ಮಾಡಲು ಕಳುಹಿಸುವ ಕುರಿತು ಭಾರತ ಮತ್ತು ಇಸ್ರೇಲ್ ನಡುವೆ ಮಾತುಕತೆ ನಡೆಯುತ್ತಿದೆ ಎಂಬ ವರದಿಗಳ ಬಗ್ಗೆ ಭಾರತ ನಿರ್ಮಾಣ ಕಾರ್ಮಿಕರ ಫೆಡರೇಶನ್(CWFI) ತನ್ನ ಗಂಭೀರ ಕಳವಳ ವ್ಯಕ್ತಪಡಿಸಿದೆ

ಇಸ್ರೇಲಿ ಅಧಿಕಾರಿಗಳು ಪ್ಯಾಲೆಸ್ಟೀನಿಯನ್ನರ ಮೇಲಿನ ದಾಳಿಯ ಭಾಗವಾಗಿ ಕೆಲಸದ ಪರವಾನಿಗೆಯೊಂದಿಗೆ ಇಸ್ರೇಲ್‌ನಲ್ಲಿ ವಿವಿಧ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಪ್ಯಾಲೆಸ್ತೀನ್ ಕಾರ್ಮಿಕರನ್ನು ಹೊರಹೋಗುವಂತೆ ಆದೇಶಿಸಿದ್ದಾರೆ ಎಂದು ವರದಿಯಾಗಿದೆ.

ಇಸ್ರೇಲಿ ಬಿಲ್ಡರ್ಸ್, ಅಸೋಸಿಯೇಷನ್ ​​ಪ್ಯಾಲೆಸ್ತೀನ್ ಕಾರ್ಮಿಕರನ್ನು ಬದಲಿಸಲು 50000 ದಿಂದ 100000 ದವರೆಗೂ ಭಾರತೀಯ ನಿರ್ಮಾಣ ಕಾರ್ಮಿಕರನ್ನು ಕಳುಹಿಸಲು ಕೇಳಿದೆ ಮತ್ತು ಇಸ್ರೇಲ್ ಗೆ ಭಾರತವು 15000 ಕಾರ್ಮಿಕರನ್ನು ಕಳುಹಿಸುವ ಬಗ್ಗೆ ಮಾತುಕತೆ ನಡೆಸುತ್ತಿದೆ ಎಂದು ವರದಿಯಾಗಿದೆ.

ನಮ್ಮ ದೇಶದ ಬಡ ಕಟ್ಟಡ ಕಾರ್ಮಿಕರನ್ನು ಇಸ್ರೇಲ್ ಗೆ ಕಳುಹಿಸುವ ಯಾವುದೇ ಪ್ರಯತ್ನವನ್ನು ಭಾರತ ನಿರ್ಮಾಣ ಕಾರ್ಮಿಕರ ಫೆಡರೇಶನ್ (CWFI) ಬಲವಾಗಿ ವಿರೋಧಿಸುತ್ತದೆ. ಕಾರ್ಮಿಕರ ಕೊರತೆಯನ್ನು ನೀಗಿಸಲು ನಮ್ಮ ದೇಶದ ಬಡ ಕಟ್ಟಡ ಕಾರ್ಮಿಕರನ್ನು ಇಸ್ರೇಲ್‌ಗೆ ಕಳುಹಿಸುವ ಯಾವುದೇ ಪ್ರಯತ್ನವನ್ನು ಭಾರತದ ನಿರ್ಮಾಣ ಕಾರ್ಮಿಕರ ಒಕ್ಕೂಟವು ಬಲವಾಗಿ ಆಕ್ಷೇಪಿಸುತ್ತದೆ ಮತ್ತು ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ಸಾವಿರಾರು ಅಮಾಯಕರನ್ನು ಕೊಲ್ಲುತ್ತಾ ಪ್ಯಾಲೆಸ್ತೀನ್ ಮೇಲೆ ನರಮೇಧದ ನಡೆಸುತ್ತಿರುವ ಇಸ್ರೇಲ್ ಗೆ ಯಾವುದೇ ಕಾರಣಕ್ಕೂ ನಮ್ಮ‌ದೇಶದ ಕಾರ್ಮಿಕರನ್ನು ಕಳಿಸಬಾರದು ಎಂದು ಆಗ್ರಹಿಸುತ್ತದೆ.

ಇಸ್ರೇಲ್‌ನೊಂದಿಗಿನ ತನ್ನ ರಾಜತಾಂತ್ರಿಕ ಸಂಬಂಧಗಳನ್ನು ಆ ದೇಶಕ್ಕೆ ಕಟ್ಟಡ ಕಾರ್ಮಿಕರನ್ನು ಕಳುಹಿಸಲು ಮಾತುಕತೆ ನಡೆಸುವ ಬದಲು 1967 ರ ಗಡಿಗಳನ್ನು ಹೊಂದಿರುವ ಪ್ಯಾಲೇಸ್ಟಿನಿಯನ್ ಗಣರಾಜ್ಯ ಮತ್ತು ಅದರ ರಾಜಧಾನಿ ಪೂರ್ವ ಜೆರುಸಲೆಮ್ ಎಂದು ಒಪ್ಪಿತವಾದ ನಿರ್ಣಯವನ್ನು ಹಾಗೂ ತಕ್ಷಣದ ಕದನ ವಿರಾಮಕ್ಕೆ ಕರೆ ನೀಡುವ ವಿಶ್ವಸಂಸ್ಥೆಯ ನಿರ್ಣಯವನ್ನು ಭಾರತ ಸರ್ಕಾರವು ಬೆಂಬಲಿಸಬೇಕು ಎಂದು ಭಾರತ ನಿರ್ಮಾಣ ಕಾರ್ಮಿಕರ ಫೆಡರೇಶನ್ ಒತ್ತಾಯಿಸುತ್ತದೆ.

ಅಮೇರಿಕಾ ಮತ್ತು ಇತರ ಸಾಮ್ರಾಜ್ಯಶಾಹಿ ರಾಷ್ಟ್ರಗಳ ಸಂಪೂರ್ಣ ಬೆಂಬಲದೊಂದಿಗೆ ಇಸ್ರೇಲ್‌ನ ನರಮೇಧದ ನಡೆಸುತ್ತಿರುವ ಈ ಸನ್ನಿವೇಶದಲ್ಲಿ ಭಾರತದ ನಿರ್ಮಾಣ ಕಾರ್ಮಿಕರು ಕಾರ್ಮಿಕ ವರ್ಗ ಮತ್ತು ಪ್ಯಾಲೆಸ್ತೀನ್ ಜನರೊಂದಿಗೆ ಒಗ್ಗಟ್ಟಿನಿಂದ ನಿಂತಿದ್ದಾರೆ ಎಂಬುದನ್ನು ದೃಢಪಡಿಸಬೇಕಿದೆ

ಸಿಡಬ್ಲ್ಯುಎಫ್‌ಐ ತನ್ನ ಎಲ್ಲಾ ಸದಸ್ಯರಿಗೆ, ಭಾರತದ ಎಲ್ಲಾ ನಿರ್ಮಾಣ ಕಾರ್ಮಿಕರಿಗೆ ಮತ್ತು ನಮ್ಮ ದೇಶದ ಕಟ್ಟಡ ಕಾರ್ಮಿಕರ ಜೀವನವನ್ನು ಇಸ್ರೇಲ್‌ಗೆ ಕಳುಹಿಸುವ ಮತ್ತು ಪ್ಯಾಲೆಸ್ಟೀನಿಯನ್ನರ ಮೇಲಿನ ತನ್ನ ನರಮೇಧದ ದಾಳಿಯಲ್ಲಿ ಪರೋಕ್ಷ ಪಾಲುದಾರರನ್ನಾಗಿ ಮಾಡುವ ಕ್ರಮಗಳ ವಿರುದ್ಧ ಇದೇ ನವೆಂಬರ್ 15 ರಂದು ದೇಶಾದ್ಯಂತ ಪ್ರತಿಭಟಗಳನ್ನು ಸಂಘಟಿಸಬೇಕು ಎಂದು ಕನ್ಯಾಕುಮಾರಿ ಯಲ್ಲಿ ಎರಡು ದಿನಗಳ ಕಾಲ ನಡೆದ ಅಖಿಲ ಭಾರತ ಪದಾಧಿಕಾರಿಗಳ ಸಭೆಯು ತನ್ನ ಎಲ್ಲ ಘಟಕಗಳಿಗೂ ಕರೆ ನೀಡಿದೆ ಎಂದು

ಯುಪಿ ಜೋಸೆಫ್ ಪ್ರಧಾನ ಕಾರ್ಯದರ್ಶಿ

ಕೆ.ಮಹಾಂತೇಶ್ ರಾಷ್ಟ್ರೀಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ


RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments