ಬೆಂಗಳೂರು, ನವೆಂಬರ್ 05: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಉಂಟಾಗುವ ಪ್ರಯಾಣಿಕರ ದಟ್ಟಣೆ ತಪ್ಪಿಸಲು ಭಾರತೀಯ ರೈಲ್ವೆ ವಿವಿಧ ಮಾರ್ಗದಲ್ಲಿ ವಿಶೇಷ ರೈಲುಗಳನ್ನು ಓಡಿಸುತ್ತಿದೆ. ರೈಲುಗಳ ವೇಳಾಪಟ್ಟಿ, ನಿಲ್ದಾಣದ ವಿವರಗಳನ್ನು ಪ್ರಕಟಿಸುತ್ತಿದೆ.ಬೆಂಗಳೂರು-ವಿಜಯಪುರ ನಡುವೆ ಸಂಚಾರ ನಡೆಸುವ ಜನರ ಅನುಕೂಲಕ್ಕಾಗಿ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮತ್ತು ವಿಜಯಪುರ ನಡುವೆ ದೀಪಾವಳಿ ವಿಶೇಷ ರೈಲನ್ನು ನೈಋತ್ಯ ರೈಲ್ವೆ ಘೋಷಣೆ ಮಾಡಿದೆ.ರೈಲು ಸಂಖ್ಯೆ 06231/ 06232 ಬೆಂಗಳೂರು-ವಿಜಯಪುರ ನಡುವೆ ಒಂದು ಟ್ರಿಪ್ ಸಂಚಾರ ನಡೆಸಲಿದೆ. ಈ ವಿಶೇಷ ರೈಲು 16 ಬೋಗಿಯನ್ನು ಒಳಗೊಂಡಿದೆ. ವಿಶೇಷ ರೈಲಿನ ವೇಳಾಪಟ್ಟಿ, ನಿಲ್ದಾಣದ ಮಾಹಿತಿಯನ್ನು ನೈಋತ್ಯ ರೈಲ್ವೆ ಘೋಷಣೆ ಮಾಡಿದೆ.ವಿಶೇಷ ರೈಲು ವೇಳಾಪಟ್ಟಿ; ರೈಲು ಸಂಖ್ಯೆ 06231 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ವಿಜಯಪುರ ನಡುವಿನ ವಿಶೇಷ ರೈಲು ನವೆಂಬರ್ 10ರಂದು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಸಂಜೆ 7 ಗಂಟೆಗೆ ಹೊರಡಲಿದೆ. ಮರುದಿನ ಬೆಳಗ್ಗೆ 10.55ಕ್ಕೆ ವಿಜಯಪುರ ತಲುಪಲಿದೆ.ಈ ರೈಲು ತುಮಕೂರು (8.30/ 8.32), ಅರಸೀಕರೆ (10.20/ 10.25), ಬೀರೂರು (11.05/ 11.07), ಚಿಕ್ಕಜಾಜೂರು (11.55/ 11.57), ಚಿತ್ರದುರ್ಗ (12.35/ 12.37), ರಾಯದುರ್ಗ (2.20/ 2.22), ಬಳ್ಳಾರಿ (3.43/ 3.45), ತೋರಣಗಲ್ಲು (4.13/ 4.15) ಹೊಸಪೇಟೆ (4.45/ 4.50), ಮುನಿರಾಬಾದ್ ( 4.57/ 4.58), ಕೊಪ್ಪಳ (5.18/ 5.20), ಗದಗ (6.03/ 06.05), ಬಾದಾಮಿ (7.13/ 7.15), ಬಾಗಲಕೋಟೆ (7.43/ 7.45), ಆಲಮಟ್ಟಿ (8.18/ 8.20) ಆಗಮನ/ ನಿರ್ಗಮನವಾಗಲಿದೆ.ಒಂದು ಟ್ರಿಪ್ ವಿಶೇಷ ರೈಲು ವಾಪಸ್ ಆಗುವ ದಿಕ್ಕಿನಲ್ಲಿ ನವೆಂಬರ್ 14ರಂದು ಹೊರಡಲಿದೆ. ರೈಲು ಸಂಖ್ಯೆ 06232 ವಿಜಯಪುರ-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ರೈಲು ಸಂಜೆ 5 ಗಂಟೆಗೆ ವಿಜಪುರದಿಂದ ಹೊರಡಲಿದೆ. ಮರುದಿನ ಬೆಳಗ್ಗೆ 9.30ಕ್ಕೆ ಬೆಂಗಳೂರು ನಗರಕ್ಕೆ ಆಗಮಿಸಲಿದೆ.ವಿಜಯಪುರದಿಂದ ಹೊರಡು ರೈಲು ಆಲಮಟ್ಟಿ (6.03/ 06.05), ಬಾಗಲಕೋಟೆ (06.53/ 06.55), ಬಾದಾಮಿ (7.18/ 7.20), ಗದಗ (9.13/ 9.15), ಕೊಪ್ಪಳ (10.13/ 10.15), ಮುನಿರಾಬಾದ್ (10.33/ 10.35), ಹೊಸಪೇಟೆ (10.55/ 11), ತೋರಣಗಲ್ಲು (11.33/ 11.35), ಬಳ್ಳಾರಿ (12/ 12.02), ರಾಯದುರ್ಗ (3/ 03.02), ಚಿತ್ರದುರ್ಗ (4.30/ 4.32), ಚಿಕ್ಕಜಾಜೂರು (5.10/ 5.12), ಬೀರೂರು (6.08/ 6.10), ಅರಸೀಕೆರೆ (6.50/ 6.52) ಮತ್ತು ತುಮಕೂರು (8.30/ 8.32) ಆಗಮನ/ ನಿರ್ಗಮನವಾಗಲಿದೆ.ಎಂದು ರೈಲ್ವೆ ಇಲಾಖೆಯು ಪ್ರಕಟಿಸಿದೆ.