ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ ನಾರಾಯಣ ಗೌಡ ಬಣ ) ದ ಹುಣಸಗಿ ತಾಲೂಕು ಘಟಕದ ವತಿಯಿಂದ ಹುಣಸಗಿ ತಾಲೂಕಿನ ಕನಗಂಡನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಶಾಲೆಯ ಮುಂದೆ ಪ್ರತಿಭಟನೆ ಮಾಡಲಾಯಿತು.
ಹುಣಸಗಿ: ಕ.ರ.ವೇ ತಾಲೂಕಿನ ಯುವ ಘಟಕದ ಅಧ್ಯಕ್ಷ ರಾಜು ಅವರಾದಿ ಮಾತನಾಡಿ ತಾಲೂಕಿನ ಸಮೀಪದ ಕನಗಂಡನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಧಾನ ಗುರುಗಳಾದ ಶ್ರೀಶೈಲ್ ವದರಿ ಅವರು ಸುಮಾರು 8 ದಿನಗಳಿಂದ ಶಾಲೆಗೆ ಬರುವ ಮಕ್ಕಳಿಗೆ ಬಿಸಿ ಊಟ ಹಾಕಿರುವದಿಲ್ಲ, ಮತ್ತು 6ತಿಂಗಳಿಂದ ಮೊಟ್ಟೆ ಮತ್ತು ಬಾಳೆಹಣ್ಣು ನೀಡಿರುವುದಿಲ್ಲ. ಶಾಲೆಯ ಮಕ್ಕಳಿಗೆ ಸರಿಯಾದ ಶೌಚಾಲಯ ಇರುವದಿಲ್ಲ, ಒಂದು ವೇಳೆ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ವಿಳಂಬವಾದರೆ ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಯಿತು.
ನಂತರ ಶಿಕ್ಷಣ ಇಲಾಖೆಯ ಕ್ಷೇತ್ರಣಾಧಿಕಾರಿಗಳಿಗೆ ಬರೆದ ಮನವಿ ಪತ್ರವನ್ನು ಅಕ್ಷರ ದಾಸೋಹ ಅಧಿಕಾರಿಗಳಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಕರವೇ ತಾಲೂಕು ಅಧ್ಯಕ್ಷರಾದ ಶ್ರೀ ಶಿವಲಿಂಗ ಸಾಹುಕಾರ್ ಪಟ್ಟಣಶೆಟ್ಟಿ, ಪ್ರದಾನ ಕಾರ್ಯದರ್ಶಿಯಾದ ಬಸವರಾಜ ಚನ್ನೂರು, ಮೌನೇಶ್ ಸಾಹುಕಾರ್ ಚಿಂಚೋಳಿ, ರಾಜು ಅವರಾಧಿ, ನಿಂಗಣ್ಣ ಗುತ್ತೇದಾರ, ಸಿದ್ದನಗೌಡ ಹಳ್ಳಿ, ಇಮ್ರಾನ್ ಚೌದ್ರಿ, ಬಸವರಾಜ ಎಚ್ ಎಚ್, ಶರಣು ಅಂಗಡಿ, ನಿಂಗಣ್ಣ ಕನಗಂಡನಹಳ್ಳಿ, ಶಿವಕಮಾರ್ ಯಾದಗಿರಿ ಅನೇಕರು ಭಾಗವಹಿಸಿದ್ದರು.