Saturday, December 21, 2024
Homeಸಾಧನೆಪೋಲೀಸ್ ಪೇದೆಯ ಏಳು-ಬೀಳುಗಳ ನಡುವೆ ಇಂದು ಸಬ್-ಇನ್ಸ್ ಪೆಕ್ಟರ್ ರವರೆಗೆ

ಪೋಲೀಸ್ ಪೇದೆಯ ಏಳು-ಬೀಳುಗಳ ನಡುವೆ ಇಂದು ಸಬ್-ಇನ್ಸ್ ಪೆಕ್ಟರ್ ರವರೆಗೆ

ಇಂದು ಸಾರ್ವಜನಿಕರು ನೆಮ್ಮದಿಯಿಂದಿರಲು ಪ್ರಮುಖ ರೂವಾರಿಗಳೇ ಪೋಲೀಸ್ ಎಂದರೆ ಅತಿಶಯೋಕ್ತಿ ಅಲ್ಕ. ತಮ್ಮ ಪ್ರಾಣದ ಹಂಗು ಹಾಗೂ ಸುಖಃ ದುಃಖಗಳನ್ನು ತೊರೆದು ಹಗಲು ರಾತ್ರಿಯೆನ್ನೆದೆ ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಇಂದು ಕಳ್ಳ ಕಾಕರ,ಸುಲಿಗೆಕೋರರ,ಅತ್ಯಾಚಾರಿಗಳ,ಕೊಲೆಗಡುಕರ ಹಾಗೂ ಸಮಾಜ ಘಾತುಕರ ಹೆಡೆಮುರಿಕಟ್ಟಿ ಜೈಲಿಗೆ ತಳ್ಳುತ್ತಿರುವುದರಿಂದ ಇಂದು ಹೊರಗಿನ ಪ್ರಪಂಚದ ಜನತೆ ಹಾಗೂ ಸಮಾಜ ನೆಮ್ಮದಿಯಿಂದ ಇದೆ ಎಂದರೆ ಅದಕ್ಕೆ ಪ್ರಮುಖ ಕಾರಣ ಪೋಲಿಸ್ ವ್ಯವಸ್ಥೆ.
ಇಂಥ ಪೋಲೀಸ್ ವ್ಯವಸ್ಥೆಯಲ್ಲಿ ಜನತೆಯ ರಕ್ಷಣೆಗೋಸ್ಕರ ಸೇವೆ ಸಲ್ಲಿಸಿದಂತಹ ತಮ್ಮ ತಾತನ ಪ್ರೇರಣೆಯೇ ನನ್ನನ್ನು ಇಂದು ಪೋಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವುದಕ್ಕೆ ಪ್ರಮುಖ ಕಾರಣ. ಚಿಕ್ಕಂದಿನಲ್ಲಿ ನನ್ನನ್ನು ಮುಂದೆ ನೀನೇನು ಆಗುತ್ತೀಯಾ ಅಂತಾ ಯಾರಾದರೂ ಕೇಳಿದರೇ ಮುಂದೆ ನಾನು ಸಬ್ ಇನ್ಸ್ ಪೆಕ್ಟರ್ ಆಗುತ್ತೇನೆ ಎಂದು ಬಹು ಸಂಭ್ರಮದಿಂದ ಹೇಳಿಕೊಳ್ಳುತ್ತಿದ್ದ ಕನಸೊಂದು ಇಂದು ನನಸಾಗಿ ನನ್ನ ಜೀವನದ ಅತ್ಯಮೂಲ್ಯ ಕ್ಷಣಗಳಲ್ಲಿ ಒಂದು ಎಂದು ವರದಿಗಾರ್ತಿಯಾದ ಪಿ.ವಿ.ಕಾವ್ಯರವರು ನಡೆಸಿದ ಪತ್ರಿಕಾ ಸಂದರ್ಶನಕ್ಕೆ ಸಬ್ ಇನ್ಸ್ ಪೆಕ್ಟರ್ ಸೂರ್ಯನಾರಾಯಣ ವಿವರಿಸಿದರು.
ಬಳ್ಳಾರಿ ನಗರದವರಾದ ಸೂರ್ಯನಾರಾಯಣ ಎನ್.ಹೊನ್ನೂರಪ್ಪ ಚೂಡಾಮಣಿ ದಂಪತಿಯ ಮಗನಾಗಿ ಅನೇಕ ಒಳ್ಳೊಳ್ಳೆಯ ಕಾರ್ಯಗಳನ್ನು ಇಲಾಖೆಯಲ್ಲಿ ನಿರ್ವಹಿಸಿ ಹಿರಿಯ ಅಧಿಕಾರಿಗಳಿಂದ ಶಹಬ್ಬಸ್ ಗಿರಿ ಪಡೆದಿರುವ ಇವರು ಓದಿದ್ದು ಬಿ.ಎ. 1992 ರಲ್ಲಿ ಪೋಲಿಸ್ ಕಾನ್ಸ್ ಟೇಬಲ್ ಆಗಿ ಇಲಾಖೆಗೆ ಸೇರಿ ಇಂದಿಗೆ 32 ವರ್ಷ ಕಳೆಯುತ್ತಾ ಬಂದಿದ್ದು, ಇನ್ನುಳಿದಿರುವ ಎರಡು ವರ್ಷದ ಸೇವಾವಧಿಯನ್ನು ಹೊಸಪೇಟೆಯ ಜನತೆಗೋಸ್ಕರ ಮೀಸಲಿಡುವುದರ ಜೊತೆಗೆ. ಸಾರ್ವಜನಿಕರ ನೆಮ್ಮದಿಗೋಸ್ಕರ ಶ್ರಮಿಸಲಿದ್ದೇನೆ ಎಂದಿದ್ದಾರೆ.
ಈ ಹಿಂದೆ ಕಮಲಾಪುರ,ಕಂಪ್ಲಿ,ಸಿರುಗುಪ್ಪ,ಚಿತ್ತವಾಡಗಿ,ಹರಪನಹಳ್ಳಿ, ಸಿರಿಗೇರೆ,ತೆಕ್ಕಲಕೋಟೆ ಹಾಗೂ ಬಳ್ಳಾರಿ ಲೋಕಾಯುಕ್ತದಲ್ಲೂ ಸೇವೆ ಸಲ್ಲಿಸಿ ಎಲ್ಲೂ ಕಪ್ಪು ಚುಕ್ಕೆ ಅಂಟಿಸಿಕೊಳ್ಳದೇ ಇಂದಿಗೂ ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ.
ಎಂಥಾ ಕಷ್ಟದ ಸಮಯದಲ್ಲೂ ಜೀವನ ಪರ್ಯಂತ ಜೊತೆಯಾಗಿ ನಿಂತಿರುವ ಮುದ್ದಾದ ಮಡದಿ ನಾಗಮಣಿ, ಎಂದೂ ಕಷ್ಟಕೊಡದೇ ಇಂದು ಎಂ.ಟೆಕ್., ಮುಗಿಸಿರುವ ಮಗಳು ಸಾಯಿಸುಷ್ಮ ಹಾಗೂ ಮಗನಾದ ಸಾಯಿಗಣೇಶ್ ಇಂದು ಸಾಪ್ಟ್ ವೇರ್ ಕಂಪನಿಗಳಲ್ಲಿ ಸೇವೆ ಸಲ್ಲಿಸುತ್ತಿದ್ದು ಜೀವನಕ್ಕೆ ಆಸ್ತಿ ಮಾಡದೇ ಮಕ್ಕಳನ್ನು ಆಸ್ತಿಯಾಗಿ ಮಾಡಿರುವ ತೃಪ್ತಿ ನನಗಿದೆ ಎಂದಿದ್ದಾರೆ. ಈ ಹಿಂದೆ ಮನೆ ಪರಿಸ್ಥಿತಿ ಸರಿ ಇಲ್ಲದ ಕಾರಣ ಮಿಲ್ಟ್ರಗೆ ಸೇರಬೇಕೆಂದು ಕೂಡ್ಲಿಗಿಯಲ್ಲಿ ನಡೆದ ಸಂದರ್ಶನಕ್ಕೆ ಹೋದಂತ ಸಮಯದಲ್ಲಿ ನೂರಾರು ಅಭ್ಯರ್ಥಿಗಳಲ್ಲಿ ಇಬ್ಬರೇ ಸೆಲೆಕ್ಟ್ ಆದ ಪೈಕಿ ನಾನು ಒಬ್ಬ. ಆದರೆ ಮಿಲ್ಟ್ರಿಗೆ ಹೋಗಬೇಕೆಂಬ ಮಹದಾಸೆಗೆ ಮನೆಯವರ ಕಣ್ಣೀರಿನಿಂದಾಗಿ ಕೈಬಿಟ್ಟಿದ್ದು ಈಗ ಇತಿಹಾಸ.
ಇಲಾಖೆಗೆ ಸೇರಿದ ಹೊಸತರದಲ್ಲಿ ಹೆಂಡತಿ ಮಕ್ಕಳೊಂದಿಗೆ ಹಬ್ಬ ಹರಿದಿನ ಕಳೆಯಬೇಕೆಂದಿದ್ದು ನಿಜ, ಮುಂದೆ ಬರಬರುತ್ತಾ ಇಲಾಖೆಯ ಮೇಲೆ ಪ್ರೀತಿ ಜಾಸ್ತಿಯಾಗಿ ನಮ್ಮ ಮನೆಯಲ್ಲಿ ಹಬ್ಬ ಆಚರಿಸಿದರೆ ನಮ್ಮ ಕುಟುಂಬದ ಜೊತೆ ಆನಂದವಾಗಿರಬಹುದು ಆದರೆ ನಾವು ನಿರ್ವಹಿಸುವ ಕಾಯಕದಿಂದಾಗಿ ಇಡೀ ನಗರದ ಜನತೆ ನೆಮ್ಮದಿಯಿಂದ ಹಬ್ಬದ ಜೊತೆಗೆ ನಿದ್ದೆ ಮಾಡುತ್ತೇ ಎಂಬ ನೆಮ್ಮದಿಯಲ್ಲಿ. ಚಿಕ್ಕ ವಯಸ್ಸಿನಲ್ಲಿ ಎನ್.ಸಿ.ಸಿ. ಸೌಕ್ಸ್ ಹಾಗೂ ಕ್ರೀಡೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳತ್ತಿದ್ದದ್ದನ್ನು ಸ್ಮರಿಸಿಕೊಂಡರಲ್ಲದೇ ಬಳ್ಳಾರಿ ಲೋಕಾಯುಕ್ತದಲ್ಲಿ ಮೂರುವರೆ ವರ್ಷಗಳ ಕಾಲ ಮಾಡಿದಂತ ಸೇವಾ ಸಂದರ್ಭದಲ್ಲಿ ಹೆಚ್ಚಿನ ರೇಡ್,ಟ್ರ್ಯಾಪ್ ಹಾಗೂ ಇನ್ನೀತರ ಪ್ರಗತಿ ಪರ ವಿಚಾರದಲ್ಲಿ ರಾಜ್ಯಕ್ಕೆ ನಂಬರ್ ಒನ್ ಸ್ಥಾನದಲ್ಲಿ ಬಳ್ಳಾರಿಯಾಗಿತ್ತು. 2019 ರಲ್ಲಿ ಸಿರುಗುಪ್ಪ ಠಾಣೆಗೆ ಎ.ಎಸ್.ಐ. ಆಗಿ ಬಡ್ತಿ, ಮುಂದೆ 2023 ಅಂದರೆ ಕಳೆದ ಮೂರು ತಿಂಗಳ ಹಿಂದೆ ಸಬ್ ಇನ್ಸ್ ಪೆಕ್ಟ ರ್ ರಾಗಿ ಬಡ್ತಿ ಹೊಂದಿ ಹೊಸಪೇಟೆಯ ಗ್ರಾಮಾಂತರ ಠಾಣೆಯಲ್ಲಿ ಪ್ರಸ್ತುತ ನೆಮ್ಮದಿಯಿಂದ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸೇವೆ ಮಾಡುತ್ತಾ ಸಾಗಿದ್ದು, ನನಗೂ ಸಮಾಜ ಮುಖಿಯಾಗಿ ಸಮಾಜ ಸೇವೆ ಮಾಡಬೇಕೆಂಬ ಮಹತ್ವಾಕಾಂಕ್ಷೆ ಇದೆ. ಅದನ್ನು ನಾನು ನಿವೃತ್ತಿಯ ನಂತರ ಮಾಡುತ್ತೇನೆ ಎಂದು ತಮ್ಮ ಮನದಾಳ ಬಿಚ್ಚಿಟ್ಟಿದ್ದಾರೆ. ಹೆಚ್ಚಿನ ಅವಧಿ ಕ್ರೈಂ ಸೆಕ್ಷನ್ ನಲ್ಲೇ ಕಳೆದಿರುವುದರಿಂದ ಅದರಲ್ಲಿ ಆಸಕ್ತಿ ಹೆಚ್ಚಿನ ಮಟ್ಡದಲ್ಲಿ ಇರುವುದು ನಿಜ.ಈ ಹಿಂದೆ ಸಬ್ ಇನ್ಸ್ ಪೆಕ್ಟರ್ ಗಳಾದ ಅರಿಯಪ್ಪ,ಯಲ್ಲಪ್ಪ,ವೆಂಕಟೇಶ್, ರವರ ಮಾರ್ಗದರ್ಶನದಲ್ಲಿ ಹೆಚ್ಚಿನ ಅನಯಭವದ ಜೊತೆಗೆ ಕೆಲಸವನ್ನು ಈ ಅಧಿಕಾರಿಗಳಿಂದ ಕಲಿತಿದ್ದೇನೆ. ಇನ್ನು ರಜಾ ವಿಚಾರಕ್ಕೆ ಬರುವುದಾದರೆ ನಮ್ಮ ಇಲಾಖೆಯಲ್ಲಿ ರಜಾ ದೊರೆಯುವುದು ಬಹಳ ಕಠಿಣ. ಮನೆಯಲ್ಲಿ ಯಾರಿಗಾದರೂ ಅನಾರೋಗ್ಯ ಹಾಗೂ ಮಕ್ಕಳ ವಿಧ್ಯಾಭ್ಯಾಸ,ನೌಕರಿಗೆ ಸಂಬಂಧಿಸಿದಂತ ಸಂದರ್ಭದಲ್ಲಿ ಯಾಕಾದರೂ ಈ ಇಲಾಖೆಗೆ ಬಂದೆನಪ್ಪ ಅಂತ ಖಂಡಿತ ಪ್ರತಿಯೊಬ್ಬ ಪೋಲಿಸರಲ್ಲಿ ಬರುವುದು ಸಹಜ. ಆದರೆ ಇಂಥಾ ಘಟನಾವಳಿ ಸಂದರ್ಭಗಳೂ ನನ್ನ ಜೀವನದಲ್ಲಿ ಬರಲಾರದ್ದಕ್ಕೆ ಆ ತಿರುಪತಿ ವೆಂಕಟರಮಣ ದೇವರಿಗೆ ಕೋಟಿ ನಮನಗಳನ್ನು ಈ ಸಂದರ್ಭದಲ್ಲಿ ಅರ್ಪಿಸುತ್ತಾ ಇದ್ದೇನೆ.
ನಿಮ್ಮ ಜೀವನದ ಇಲಾಖೆಯಲ್ಲಿನ ಪ್ರಮುಖ ಘಟ್ಟದ ಅನುಭವದ ಕುರಿತು ಕೇಳಿದಾಗ ಅವರು ಈ ಹಿಂದೆ ಹಂಪಿಯ ಔಟ್ ಪೋಸ್ಟ್ ನಲ್ಲಿ ಪೇದೆಯಾಗಿ ಕಾರ್ಯನಿರ್ವಹಿಸಬೇಕಾದಂತ ಸಂದರ್ಭದಲ್ಲಿ ಕುಖ್ಯಾತ ದರೋಡೆಕೋರ ಮಡ್ಡಿ ನಾಗೇಂದ್ರನ ಉಪಟಳ ವಿದೇಶಿಯರಿಗೆ ಮಿತಿಮೀರಿ ಹೋಗಿತ್ತು. ಅಂಥಾ ಸಂದರ್ಭದಲ್ಲಿ ಇಡೀ ಇಲಾಖೆಗೆ ಮಡ್ಡಿ ನಾಗೇಂದ್ರ ನ ಚಹರೆ ಹೇಗೆ ಇರುತ್ತಾನೆ ಎಂಬದೇ ಗೊತ್ತಿಲ್ಲದಂತ ಸಮಯದಲ್ಲಿ ಹಿರಿಯ ಅಧಿಕಾರಿಗಳು ಸೂರ್ಯನಾರಾಯಣ ರವರಿಗೆ ಪ್ರತಿನಿತ್ಯ ಮಾತಂಗ ಪರ್ವತಕ್ಕೆ ಸೂರ್ಯ ಉದಯ ಹಾಗೂ ಸೂರ್ಯ ಮುಳುಗುವ ಸನ್ ಬಾತ್ ತೆಗೆದುಕೊಳ್ಳುತ್ತಿದ್ದ ವಿದೇಶಿಯರ ಬಂದೋಬಸ್ತಿಗಾಗಿ ನೇಮಕ ವಾಗಿದ್ದ ಸೂರ್ಯನಾರಾಯಣ ಅವರು ಮಾತಂಗ ಪರ್ವತ ಕ್ಕೆ ಹತ್ತಿ ಪ್ರತಿಯೊಬ್ಬರೂ ಇಳಿಯುವವರೆಗೂ ಅವರಿಗೆ ಸೂಕ್ತ ರಕ್ಷಣೆಗೆ ನೇಮಕವಾಗಿದ್ದ ಈ ಸಂದರ್ಭದಲ್ಲಿ ಮಡ್ಡಿ ನಾಗೇಂದ್ರ ತನ್ನ ಕೈಚಳಕ ದಿಂದ ಜರ್ಮನ್ ನ ವಿದೇಶಿ ಮಹಿಳೆಯ ಮೇಲೆ ಹಲ್ಲೆ ಹಾಗೂ ಕ್ಯಾಮರಾ ಇನ್ನೀತರ ವಸ್ತುಗಳನ್ನು ದೋಚಿದ್ದ. ದೋಚಿದ ವ್ಯಕ್ತಿಯ‌ನ್ನು ಗುರುತಿಸಿದ್ದ ವಿದೇಶಿ ಜರ್ಮನ್ ಮಹಿಳೆ ತನ್ನ ಕ್ಯಾಮರಾದ ಹಿಂದಿನ ರೀಲ್ ನಲ್ಲಿ ಇವನ ಪೋಟೋ ಸೆರೆಯಾಗಿದ್ದನ್ನು ಆ ಮಹಿಳೆ ರೀಲ್ ತೊಳಸಿ ಪ್ರಿಂಟ್ ಹಾಕಿಸಿದಾಗ ದೋಚಿದಂತ ಕುಖ್ಯಾತ ದರೋಡೆಕೋರ ಮಡ್ಡಿ ನಾಗೇಂದ್ರನ ಪೋಟೂ ಸೆರೆಯಾಗಿದ್ದನ್ನು ಪೋಲಿಸರಿಗೆ ಒಪ್ಪಿಸಿದಾಗ ಇದೇ ಸೂರ್ಯ‌ನಾರಾಯಣ ನ ತಂಡ ಅವನ್ನನ್ನು ಗಲ್ಲಿಗಲ್ಲಿಯಲ್ಲಿ ಹುಡುಕಾಡಿ ಎಡೆಮುರಿ ಕಟ್ಟಿ ಸೆಂಟ್ರಲ್ ಜೈಲಿಗೆ ಕಳುಹಿಸುವಂತ ವಿಚಾರಣಾ ಸಂದರ್ಭದಲ್ಲಿ ಈ ಹಿಂದೆ ನಡೆದಿದ್ದ ಹದಿಮೂರರಿಂದ ಹದಿನಾಲ್ಕು ಪ್ರಕರಣಗಳು ಬೆಳಕಿಗೆ ಬಂದು ಅಂದಿನಿಂದ ಹಂಪೆಯು ನೆಮ್ಮದಿಯ ನಿಟ್ಟುಸಿರು ಬಿಟ್ಟಿತ್ತು.
ಇದೇ ರೀತಿಯ ಮತ್ತೊಂದು ಪ್ರಕರಣ ಹಂಪಿಯ ನಿರ್ಜನ ಪ್ರದೇಶದಲ್ಲಿ ಐದು ಜನ ಮಲಗಿದಂತವರನ್ನು ವಿಚಾರಿಸಿದಾಗ ಅವರಲ್ಲಿ ಕತ್ತಿ ಹಾಗೂ ಇನ್ನೀತರ ಮಾರಕ ಆಯುಧಗಳು ದೊರೆತನಂತರ ಅವರನ್ನು ಠಾಣೆಯಲ್ಲಿ ಸುದೀರ್ಘ ವಿಚಾಣೆಗೊಳಪಡಿಸಿದಾಗ ಇವರು ಕುಖ್ಯಾತ ಕಳ್ಳರಾಗಿದ್ದು ಅನೇಕ ಮುಚ್ಚಿಹೋಗಿದ್ದ ಕೇಸ್ ಗಳು ಇವರುಗಳು ನೀಡಿದ ಮಾಹಿತಿಯಿಂದ ಹೊರ ಬಂದಿದ್ದನ್ನು ಗುರುತಿಸಿದ ಅಂದಿನ Dysp ಯವರಾಗಿದ್ದ ಶಿವಣ್ಣ ನವರಿಂದ ಪಡೆದಂತ 25 ರೂ ಗಳ ಅವಾರ್ಡ್ ಹಾಗೂ ರಿವಾರ್ಡ್ ನ್ನು ಮಂದಹಾಸದೊಂದಿಗೆ ಸ್ವೀಕರಿಸಿದ್ದ‌್ನನ್ನು ಇಂದಿಗೂ ಸ್ಮರಿಸುತ್ತಾರೆ.
ವರದಿ ಪಿ.ವಿ.ಕಾವ್ಯ, ಹೊಸಪೇಟೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments