ಚಳ್ಳಕೆರೆ: ಅಂತಿಮ ಪದವಿಯ ವಾಣಿಜ್ಯಶಾಸ್ತ್ರ ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಪಠ್ಯಕ್ರಮದಂತೆ ಒಂದು ಪ್ರಾಜೆಕ್ಟ್ ವರದಿ ತಯಾರಿಕೆಯೂ ಒಂದು ವಿಷಯವಾಗಿದೆ. ವಿದ್ಯಾರ್ಥಿಗಳು ಪ್ರಾಜೆಕ್ಟ್ ತಯಾರಿಸುವಾಗ ಸ್ವಂತಿಕೆ ಇರಬೇಕು ಆಗ ನಿಜವಾದ ಜ್ಞಾನ ದೊರೆಯುತ್ತದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ವೆಂಕಟೇಶ್ ಬಾಬು ಹೇಳಿದರು. ಅವರು
ಇಂದು ಹೆಚ್.ಪಿ.ಪಿ.ಸಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಅಂತಿಮ ಬಿ.ಕಾಂ. ವಿದ್ಯಾರ್ಥಿಗಳಿಗೆ ಕಂಪನಿ ವಿಶ್ಲೇಷಣೆಯ ಕುರಿತು ಯೋಜನೆ ತಯಾರಿಸುವ ಬಗ್ಗೆ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ತಮ್ಮ ಸುತ್ತಮುತ್ತಲಿನ ವ್ಯವಹಾರಗಳ ವಿಶ್ಲೇಷಣೆ ಕೂಡ ಅಗತ್ಯವಾಗಿರುತ್ತದೆ ಯೋಜನಾ ವರದಿ ತಯಾರಿಸುವಾಗ ವಿಶ್ವ ವಿದ್ಯಾನಿಲಯ ನಿಗದಿಪಡಿಸಿರುವ ಕ್ರಮಗಳನ್ನು ಪಾಲಿಸಿ ತಮ್ಮ ಅಧ್ಯಾಪಕರ ಸಹಾಯದಿಂದ ಉತ್ತಮ ವರದಿಯನ್ನು ತಯಾರಿಸಿ ಎಂದು ಹೇಳಿದರು
ಕಾರ್ಯಕ್ರಮದಲ್ಲಿ.
ಪ್ರಾಂಶುಪಾಲ ಡಿ.ರಂಗಪ್ಪ, ವಾಣಿಜ್ಯಶಾಸ್ತ್ರ ಮುಖ್ಯಸ್ಥ ರಂಗಸ್ವಾಮಿ, ಯಾರ್ರೀಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಬಸವರಾಜ ಕೋಲ್ಕರ್ ಸ್ವಾಗತಿಸಿದರು, ಉಪನ್ಯಾಸಕರಾದ ತಿಮ್ಮಣ್ಣ, ವಲಿಉಲ್ಲಾ, ತಿಪ್ಪೇಸ್ವಾಮಿ, ಮಧುಸೂಧನ್, ಮಾರುತಿ, ಅಶ್ವಿನಿ ವಿ ದೇಸಾಯಿ, ಪ್ರೇಮ, ತಿಪ್ಪೇಸ್ವಾಮಿ ಸಿ.ಎನ್. ಸಂತೋಷ್ ಕುಮಾರ್ ಪಿ.ಕೆ., ಐ.ಕ್ಯು. ಎ. ಸಿ. ಸಂಯೋಜಕ ತಿಪ್ಪೇಸ್ವಾಮಿ ಮುಂತಾದವರು ಇದ್ದರು.