ವಿಜಯಪುರ:ಕೆಲವು ತಿಂಗಳ ಹಿಂದೆ ನಾವು ಕುಟುಂಬ ಸಹಿತವಾಗಿ ನಮ್ಮ ಸಂಭಂದಿಗಳ ಮನೆ ವಾಸ್ತು ಶಾಂತಿಗೆ ಹೋಗಿದ್ದೆವು, ಅಲಿ ಮನೆಗೆ ದೇವರ ಕರೆದುಕೊಳ್ಳುವ ಸಮಯದಲ್ಲಿ ಯಾರೂ ಒಬ್ಬರು ನೀರಿನ ಕೊಡ ಎಲ್ಲಿದೆ ಎಂದು ಕೇಳಿದಾಗ ನಮ್ಮ ತಾಯಿ ಇಲ್ಲಿದೆ ನೋಡಿ ಎಂದು ನೀರು ತುಂಬಿದ ಕೊಡವನ್ನು ಮುಟ್ಟಿದಾರೆ, ಅಲ್ಲಿ ಒಬ್ಬ ಮಹಿಳೆ ಬಂದು ಇದು ಅಪಶಕುನ ಎಂದು ಕೊಡದಲ್ಲಿ ಇರುವ ನೀರನ್ನು ಚೆಲ್ಲಿ ಬೇರೆ ನೀರನ್ನು ತುಂಬಿ ದೇವರ ಕಾಲಿಗೆ ಹಾಕುಲು ನೀಡಿದ್ದಾಳೆ…. ಇದಕ್ಕೆ ಕಾರಣ ನಮ್ಮ ತಾಯಿ ವಿಧವೆ ಎಂದು….(ಎಲ್ಲವು ಮುಗಿಸಿ ಬಂದ ಕೆಲವು ದಿನಗಳ ಮೇಲೆ ಈ ವಿಷಯ ನಮ್ಮ ತಾಯಿ ನನಗೆ ಹೇಳಿದರು, ಇದನ್ನು ಕೇಳಿದಾಗ ನನ್ನ ಮನಸ್ಸು ಗಲಿಬಿಲಿ ಆಗಿ, ಕಣ್ಣಿನ ರೆಪ್ಪೆ ಗಳಲ್ಲಿ ನೀರು ತುಂಬಿತು) ಈಗ ನಾನು ಮನೆ ಕಟ್ಟಲು ನಮ್ಮ ತಾಯಿಯವರ ಕೈಯಿಂದಲೇ ಭೂಮಿಪೂಜೆ ನೆರವೇರಿಸುವ ಮೂಲಕ ಪ್ರಾರಂಭಿಸಿರುವೆ…… ಮಲ್ಲು ಬಿದರಿ ಅಹಿಂದ ಹೋರಾಟಗಾರರು
ವಿಧವೆ ಮುಟ್ಟಿದ್ದು ಅಪಶಕುನವೆಂದ ಮೂಢರೇ ಮನೆ ಕಟ್ಟಲು ನಮ್ಮ ತಾಯಿವಿಧವೆಯ ಕೈಯಿಂದಲೇ ಭೂಮಿಪೂಜೆ
RELATED ARTICLES