ಮೂಡಲಗಿ:ನ,28-ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಐ ಕ್ಸೋ ಎ ಸಿ ಎನ್ ಎಸ್ಎಸ್ ಸ್ಕೌಟ್ಸ್ ಮತ್ತು ಗೈಡ್ಸ್ ಯುಥ್ ರೆಡ್ ಕ್ರಾಸ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ “ಭಾರತದ ಸಂವಿಧಾನ” ದಿನಾಚರಣೆಯ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಡಾllಬಿ
ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ನೆರವರಿಸಿದರು. ದೇಶದ ಅಥವಾ ರಾಜ್ಯದ ಕಾನೂನುಗಳನ್ನು ಒಳಗೊಂಡ ಗ್ರಂಥವೇ ಸಂವಿಧಾನ ಅಂತಹ ಸಂವಿಧಾನಕ್ಕೆ ನಾವು ಬದ್ದರಾಗಿರೋಣ ಎಂದು ರಾಜ್ಯಶಾಸ್ತ್ರ ಪ್ರಾಧ್ಯಾಪಕ ವಿಷ್ಣು ಬಾಗಡಿ ಹೇಳಿದರು.
470ವಿಧಿಗಳು,25 ಭಾಗಗಳು, 8 ಅನುಸೂಚಿಗಳು ಒಳಗೊಂಡು ಜಗತ್ತಿನ ಅತೀ ದೊಡ್ಡ ಸಂವಿಧಾನವಾಗಿದೆ.64 ಲಕ್ಷಗಳು ರೂಪಾಯಿಗಳನ್ನು ಖರ್ಚಿನಲ್ಲಿ 289 ಪುಟಗಳ ದುರ್ಗದಾಸ ಬಸು ಅವರ ಕೈ ಬರಹಗಳನ್ನು ಒಳಗೊಂಡು ನಿರ್ಮಾಣವಾದ ಸಂವಿಧಾನ ನಮದು.
ಭಾರತ ಪ್ರಜಾಪ್ರಭುತ್ವದ ಯಶಸ್ಸಿಗೆ “ಭಾರತದ ಸಂವಿಧಾನ “ಕಾರಣ,ಶಾಸಕಾಂಗ,ಕಾರ್ಯಾಂಗಳು ಕಾನೂನಾತ್ಮಕ ಪ್ರಶ್ನೆಗಳಿಗೆ ಸಂವಿಧಾನದಲ್ಲಿ ವಿದ್ಯಾರ್ಥಿಗಳಿಗೆ ಭಾರತದ ಸಂವಿಧಾನದ ಪ್ರತಿಜ್ಞಾ ವಿಧಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರೊ,ಸಂಗಮೇಶ ಗುಜಗೋಂಡ ಬೋಧಿಸಿದರು. ಕಾರ್ಯಕ್ರಮದಲ್ಲಿ ಗ್ರಂಥ ಪಾಲಕರಾದ ಬಸವಂತ ಬರಗಾಲಿ,ಭಾರತಿ ತಳವಾರ,ಪ್ರೊ-ಎಲ್.ಪಿ.ಹಿಡಜಲ್,ಪ್ರೊ-ಪ್ರೀತಿ ಬೆಳಗಲಿ,ಅರ್ಜುನ ಗಸ್ತಿ,ವೆಂಕಟೇಶ ಪಾಟೀಲ,ರಮೇಶ ಖಾನಪ್ಪಗೋಳ ಉಪಸ್ಥಿತರಿದ್ದರು. ಪ್ರೊ- ಸುರೇಶ ಚಿತ್ರಗಾರ ಸ್ವಾಗತಿಸಿದರು ಮತ್ತು ಪ್ರೊ-ಸಂಗಮೇಶ ಮಂಟೂರ ವಂದಿಸಿದರು.