ಕನ್ನಡ ಭಾಷೆ ಕೇವಲ ಮಾತುಗಳಿಗೆ ಸೀಮಿತವಾಗದೇ ಕನ್ನಡಿಗರ ಅಂತರಾಳದಿ0ದ ಭಾವನಾತ್ಮಕವಾಗ
ಅಭಿಮಾನದೊಂದಿಗೆ ತೊಡಗಿಸಿಕೊಂಡಾಗ ಕನ್ನಡ ರಾಜ್ಯೋತ್ಸವಕ್ಕೆ ಅರ್ಥ ಬರುತ್ತದೆ. ಕನ್ನಡ ನಾಡು, ನುಡಿ
ಪರಂಪರೆಯನ್ನು ವಿಶ್ವವಿಖ್ಯಾತವಾಗಿ ವೈಭವೀಕರಿಸಿದ ಕರ್ನಾಟಕ ಕರಾವಳಿ ಜಿಲ್ಲೆಗಳ ಆರಾಧನಾ ಏಕೈಕ ಕಲೆ
ಯಕ್ಷಗಾನ ಎಂದು ದಾವಣಗೆರೆ ಜಿಲ್ಲಾ ಅಂಚೆ ಅಧೀಕ್ಷಕರಾದ ಚಂದ್ರಶೇಖರ್ ತಮ್ಮ ಅನಿಸಿಕೆ ಹಂಚಿಕೊoಡರು.
ದಾವಣಗೆರೆಯ ಭಾರತೀಯ ಅಂಚೆ ಇಲಾಖೆಯ ಅಂಚೆ ಮನರ0ಜನಾ ಕೂಟದಿಂದ ಕರ್ನಾಟಕ ಸುವರ್ಣ ಮಹೋತ್ಸವ
ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಪ್ರಧಾನ ಅಂಚೆ ಕಛೇರಿಯ ಸಭಾಂಗಣದಲ್ಲಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿ
ಅವರು ಮಾತನಾಡಿದರು.ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ
ಸಾಲಿಗ್ರಾಮ ಗಣೇಶ್ ಶೆಣೈಯವರು ಮಾತನಾಡಿ, ಕನ್ನಡ ನಾಡಿನ ಈ ಉತ್ಸವ ಕೇವಲ ನವೆಂಬರ್‌ಗೆ ಸೀಮಿತವಾಗದೇ ಹಿರಿಯ
ಮಹಾಕವಿ ನಿಸಾರ್ ಅಹ್ಮದ್ ತಿಳಿಸಿದಂತೆ ಇದು ನಿತ್ಯೋತ್ಸವ ಆಗಬೇಕಾಗಿದೆ. ಕನ್ನಡಕ್ಕಾಗಿ ಹೋರಾಟದ ಬದಲು
ಅಷ್ಟಾದರೂ ಕನ್ನಡದ ಕಾಳಜಿಯ ಕಾಯಕ ಮಾಡಿ ಈ ಕನ್ನಡದ ಪುಣ್ಯಭೂಮಿಯಲ್ಲಿ ಹುಟ್ಟಿದ ನಾವು ನೀವೆಲ್ಲಾ ಈ
ಮಣ್ಣಿನ ಋಣ ತೀರಿಸೋಣ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಧಾನ ಅಂಚೆ ಕಚೇರಿಯ ಅಂಚೆ ಪಾಲಕರಾದ ಶ್ರೀಮತಿ ಸರಸ್ವತಿ
ಡಿ.ಜೋಶಿಯವರು ಮಾತನಾಡಿ ಕೇಂದ್ರ ಸರ್ಕಾರದ ಈ ಇಲಾಖೆಯ ಅಧಿಕಾರಿಗಳು ವಿವಿಧ ರಾಜ್ಯಗಳಿಂದ ಬಂದರೂ
ಆಸಕ್ತಿಯಿ0ದ, ಅಭಿಮಾನದಿಂದ ಕನ್ನಡ ಭಾಷೆ ಕಲಿಯುತ್ತಿರುವುದು ಶ್ಲಾಘನೀಯ. ಕರ್ನಾಟಕದ
ಹೃದಯ ಭಾಗವಾದ ಈ ದಾವಣಗೆರೆಯ ಅಪ್ಪಟ ಕನ್ನಡಾಭಿಮಾನಿಗಳು ಹೆಚ್ಚುತ್ತಿರುವುದು ಸಂತಸದ
ಸ0ಗತಿ. ಆದರೆ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿಕನ್ನಡ ಹೊರತುಪಡಿಸಿ ಅನ್ಯ ಭಾಷೆಗಳಿಗೆ ಅಲ್ಲಿಯ ಜನ
ಮಾನ್ಯತೆ ಕೊಡುತ್ತಿರುವುದು ವಿಷಾದವೆನಿಸುತ್ತಿದೆ ಎಂದರು.
ಉಪ ಅಂಚೆ ಅಧೀಕ್ಷಕರಾದ ಜೆ.ಎಸ್.ಗುರುಪ್ರಸಾದ್, ಉಪ ಅಂಚೆ ಅಧೀಕ್ಷಕರಾದ ನರೇಂದ್ರನಾಯಕ್ ಕೆ.ಎಂ.,
ವೆ0ಕಟರಮಣ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಕನ್ನಡ ಗೀತಗಾಯನದೊಂದಿಗೆ ನೆರೆದ
ಪ್ರೇಕ್ಷಕರನ್ನು ಹೃನ್ಮನ ತಣಿಸಿ ರಂಜಿಸಿದರು. ಅ0ಚೆ ಇಲಾಖೆಯ ಸಿಬ್ಬಂದಿ ವರ್ಗದವರು ಸಾಮೂಹಿಕವಾಗಿ
ಕನ್ನಡ ನಾಡಗೀತೆಯ ಪ್ರಾರ್ಥನೆಯೊಂದಿಗೆ ಪ್ರಾರ0ಭವಾದ ಸಮಾರಂಭಕ್ಕೆ ಮಾರುತಿಯವರು
ಸ್ವಾಗತಿಸಿದರು, ದಿನೇಶ್ ಆಚಾರ್ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿದರು. ಅಂಚೆ ಇಲಾಖೆಯ ಹಲವಾರು
ಯುವ ಗಾಯಕ ಪ್ರತಿಭೆಗಳಿಂದ ಕನ್ನಡ ಗಾನಯಾನ ಅತ್ಯುದ್ಭುತವಾಗಿ ನಡೆಯಿತು ಕೊನೆಯಲ್ಲಿ ಶ್ರೀನಿವಾಸ್
ವಂದಿಸಿದರು.