Thursday, August 21, 2025
Homeಸಾರ್ವಜನಿಕ ಧ್ವನಿಗ್ರಾಮ ಸಭೆಗೆ ಗೈರಾದ ಪಿಡಿಓ ರೇಣುಕಮ್ಮ ವಿರುದ್ಧ ಕ್ರಮಕ್ಕೆ ಗ್ರಾಮಸ್ಥರ ಒತ್ತಾಯ

ಗ್ರಾಮ ಸಭೆಗೆ ಗೈರಾದ ಪಿಡಿಓ ರೇಣುಕಮ್ಮ ವಿರುದ್ಧ ಕ್ರಮಕ್ಕೆ ಗ್ರಾಮಸ್ಥರ ಒತ್ತಾಯ

ದೇವದುರ್ಗ: ತಾಲ್ಲೂಕಿನ ಮಲದಕಲ್ ಗ್ರಾಮ ಪಂಚಾಯತಿಯಲ್ಲಿ ನಿನ್ನೆ ನಡೆಯಬೇಕಾಗಿದ್ದ ವಿವಿಧ ವಸತಿ ಯೋಜನೆಯಡಿಯಲ್ಲಿ ಫಲಾನುಭವಿಗಳ ಆಯ್ಕೆ ಕುರಿತು ಗ್ರಾಮ ಸಭೆ ಇದೆ ಎಂದು ಎಲ್ಲಾ ಗ್ರಾಮ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಸರ್ವ ಸದಸ್ಯರಿಗೆ ನೋಟಿಸ್ ನೀಡಿ ನೋಡಲ್ ಅಧಿಕಾರಿಗಳು ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಗ್ರಾಮ ಪಂಚಾಯತಿ ಆವರಣದಲ್ಲಿ ಹಾಜರಾಗಿದ್ದರು. ಆದರೆ ಪಿಡಿಓ ರೇಣುಕಮ್ಮ ಅವರು ಗ್ರಾಮ ಸಭೆ ನೋಟಿಸ್ ಜಾರಿ ಮಾಡಿ ಪಂಚಾಯತಿಗೆ ಉದ್ದೇಶ ಪೂರಕ ಬರದೆ ಉಳಿದಿದ್ದಾರೆ. ಪಿಡಿಓ ರಜೆ ಪತ್ರ ನೀಡದೆ ಬೇರೆ ಅವರಿಗೆ ಗ್ರಾಮ ಸಭೆ ಮಾಡುವಂತೆ ತಿಳಿಸದೆ ಪಂಚಾಯತಿಗೆ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು, ಪಂಚಾಯತಿ ವ್ಯಾಪ್ತಿಯ ಎಲ್ಲ ಗ್ರಾಮಗಳ ಜನರು ಗ್ರಾಮ ಸಭೆಗೆ ಬಂದು ಕುಳಿತಿದ್ದರೂ ಕೂಡ ಪಿಡಿಓ ಅವರು ಬಾರದೆ ಇರುವುದು ಪಿಡಿಓ ಅವರ ನಿರ್ಲಕ್ಷ್ಯವಾಗಿದೆ ಅವರ ಮೇಲೆ ಸಂಬಂಧಿಸಿದ ಮೇಲಾಧಿಕಾರಿಗಳು ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಎಂದು ಮರೆಪ್ಪ ಮಲದಕಲ್ ಅವರು ಆಕ್ರೋಶ ವ್ಯಕ್ತಪಡಿಸಿದರು.

ಈ ಗ್ರಾಮ ಸಭೆ ನಡೆಸದೆ ಮನೆಗಳು ವಾಪಸು ಹೋದರೆ ನೇರ ಹೊಣೆ ಪಿಡಿಒ ರೇಣುಕಮ್ಮ ಅವರು ಆಗಿರುತ್ತಾರೆ ಎಂದು ಗ್ರಾಮ ಪಂಚಾಯತಿ ಸದಸ್ಯ ಭೀಮರಡ್ಡಿ ನಾಯಕ ಆರೋಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments