Saturday, December 21, 2024
Homeಜನವರಿ 12 ರ ವರೆಗೆ ಮತದಾರರ ಪಟ್ಟಿ ಪರಿಷ್ಕರಣೆಗೆ ಅವಕಾಶ

ಜನವರಿ 12 ರ ವರೆಗೆ ಮತದಾರರ ಪಟ್ಟಿ ಪರಿಷ್ಕರಣೆಗೆ ಅವಕಾಶ


ದಾವಣಗೆರೆ,ಜನವರಿ.05: ಚುನಾವಣಾ ಆಯೋಗವು ಮತದಾರರ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆಗೆ ಜನವರಿ 12 ರ ವರೆಗೆ ಅವಕಾಶ ಕಲ್ಪಿಸಿದ್ದು ತಿದ್ದುಪಡಿ, ಸೇರ್ಪಡೆ, ಮರಣ ಹೊಂದಿದ ಮತದಾರರನ್ನು ಕೈಬಿಡಬಹುದಾಗಿದ್ದು ಪರಿಷ್ಕರಣೆಯ ವೇಳೆ ದಾಖಲೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆÉ ದಾವಣಗೆರೆ ಜಿಲ್ಲಾ ಮತದಾರರ ಪಟ್ಟಿ ವೀಕ್ಷಕರಾದ ಶ್ರೀಮತಿ ಗುಂಜನ್ ಕೃಷ್ಣ ಅವರು ಸೂಚನೆ ನೀಡಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರರು, ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ನಡೆಸಿದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚುನಾವಣಾ ಆಯೋಗ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆಗೆ ಅವಕಾಶ ಕಲ್ಪಿಸಿದ್ದು ಈ ಅವಧಿಯಲ್ಲಿ ಹೆಚ್ಚು ಹೆಚ್ಚು ಯುವ ಮತದಾರರನ್ನು ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಮುಂದಾಗಬೇಕು. ಮತದಾರರ ಪಟ್ಟಿಯಲ್ಲಿ ಪರಿಷ್ಕರಣೆ ಮಾಡುವಾಗ ಸ್ವಯಂಪ್ರೇರಿತವಾಗಿ ಯಾವುದೇ ದಾಖಲೀಕರಣ ಮಾಡದೇ ದಾಖಲೆಗಳನ್ನಿಟ್ಟುಕೊಂಡು ಸೇರ್ಪಡೆ, ತಿದ್ದುಪಡಿ ಮತ್ತು ಮರಣ ಹೊಂದಿದ ಮತದಾರರನ್ನು ಕೈಬಿಡುವ ಕೆಲಸ ಮಾಡಬೇಕೆಂದರು.
ಮತದಾರರ ಪಟ್ಟಿ ವೀಕ್ಷಕರ ಲಾಗಿನ್‍ಗೆ ಸಲ್ಲಿಕೆಯಾದ ನಮೂನೆ 6,7,8 ರಡಿ ಸಲ್ಲಿಸಿದ ಅರ್ಜಿಗಳಲ್ಲಿ 208 ಅರ್ಜಿಗಳನ್ನು ಅಧಿಕಾರಿಗಳ ಹಾಗೂ ರಾಜಕೀಯ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ಪರಿಶೀಲನೆ ನಡೆಸಿದರು.
ಒಟ್ಟು ಜಿಲ್ಲೆಯಲ್ಲಿ ಜನವರಿ 4 ರ ವರೆಗೆ 727204 ಪುರುಷ, 731251 ಮಹಿಳೆಯರು, 120 ಇತರೆ, 454 ಸೇವಾ ಮತದಾರರು ಸೇರಿ 1459029 ಮತದಾರರಿದ್ದಾರೆ. ಕ್ಷೇತ್ರವಾರು ಮತದಾರರಲ್ಲಿ ಜಗಳೂರು 195558, ಹರಿಹರ 209919, ದಾವಣಗೆರೆ ಉತ್ತರ 246105, ದಕ್ಷಿಣ 215230, ಮಾಯಕೊಂಡ 193070, ಚನ್ನಗಿರಿ 200750, ಹೊನ್ನಾಳಿ 198397 ಮತದಾರರಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments