ದಾವಣಗೆರೆ – ಟೈಲರ್ ಕಲ್ಯಾಣ ಮಂಡಳಿ ಜಾರಿಗೆ ತರಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿ ಜನವರಿ 29 ಸೋಮವಾರ ಪ್ರತಿಭಟನೆ ನಡೆಸಲಾಗುವುದು ಎಂದು ಟೈಲರ್ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಆವರಗೆರೆ ಚಂದ್ರು ತಿಳಿಸಿದ್ದಾರೆ.
ಎಐಟಿಯುಸಿ ಸಂಯೋಜಿತ ಟೈಲರ್ ಮತ್ತು ಸಹಾಯಕರ ಫೆಡರೇಷನ್ ರಾಜ್ಯ ಸಮಿತಿ ಕರೆ ಮೇರೆಗೆ, ಅಂದು ಸೋಮವಾರ ಬೆಳಗ್ಗೆ 11-30 ಗಂಟೆಗೆ ಟೈಲರ್ ಗಳು ದಾವಣಗೆರೆ ಜಯದೇವ ಸರ್ಕಲ್ ಬಳಿ ಸೇರಿ ಟೈಲರ್ ಗಳಿಗೆ, ಟೈಲರ್ ಕಲ್ಯಾಣ ಮಂಡಳಿ ಜಾರಿಗೆ ತಂದು ಆ ಮೂಲಕ ಟೈಲರ್ ಗಳಿಗೆ ಮತ್ತು ಅವರ ಕುಟುಂಬದವರಿಗೆ ವಿವಿಧ ಸೌಲತ್ತುಗಳನ್ನು ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುವುದು.
ಆದ್ದರಿಂದ ದಾವಣಗೆರೆ ಜಿಲ್ಲೆಯ ಎಲ್ಲಾ ಟೈಲರ್ ಗಳು 29ರ ಸೋಮವಾರ ಬೆಳಗ್ಗೆ 11-30 ಗಂಟೆಗೆ ದಾವಣಗೆರೆ ಜಯದೇವ ಸರ್ಕಲ್ ಹತ್ತಿರ ಬರಬೇಕೆಂದು ಟೈಲರ್ ಸಂಘಟನೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಟೈಲರ್ ಕಲ್ಯಾಣ ಮಂಡಳಿ ಜಾರಿಗಾಗಿ ಸರ್ಕಾರಕ್ಕೆ ಒತ್ತಾಯಿಸಿ ಜನವರಿ 29 ಸೋಮವಾರ ಟೈಲರ್ ಸಂಘಟನೆ ಹೋರಾಟ.
RELATED ARTICLES