ಜಗಳೂರು:ಸರ್ಕಾರದಿಂದ ಖರೀದಿಸಲಾದ ಬೆಂಬಲ ಬೆಲೆ ಯೋಜನೆ ಅಡಿ ರಾಗಿ ಹಣ ಪಾವತಿಸುವಂತೆ ಆಗ್ರಹಿಸಿ ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದ ಎಪಿಎಂಸಿ ಆವರಣದಲ್ಲಿ ರೈತರಿಂದ ಪಡಿತರ ಸಾಗಾಣಿಕೆ ವಾಹನಗಳ ನಿಲ್ಲಿಸಿ ಅಹೋರಾತ್ರಿ ಅಲ್ಲೇ ಅಡುಗೆ ತಯಾರಿಸಿ ಧರಣಿ ಮುಷ್ಕರಕ್ಕೆ 6 ದಿನಕ್ಕೆ ಕಲಿಟ್ಟಿದೆ.
ಇನ್ನೂ ಪ್ರತಿಭಟನ ಸ್ಥಳಕ್ಕೆ ತಹಶಿಲ್ದಾರ ಸೈಯದ್ ಕಲೀಂ ಉಲ್ಲಾ ಅವರು ಭೇಟಿ ನೀಡಿ ನಾನು ರೈತರ ಹಣ ಪಾವತಿಸುವಂತೆ ಹಿರಿಯ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ರೈತರಿಗೆ ಅನ್ಯಯವಾಗದ ರೀತಿಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಡಿ.ಡಿ ಶಿದ್ರಾಮ್ ಮಾರಿಯಾಳ್ ದೂರವಾಣಿ ಕರೆ ಮೂಲಕ ಅಧಷ್ಟೂ ಬೇಗ ರೈತರ ಖಾತೆಗೆ ಹಣ ಜಮಾ ಮಾಡುವ ಬಗ್ಗೆ ಸೂಚಿಸಿ ನೀವು ಮುಷ್ಕರ ಹಿಂಪಡೆಯಿರಿ ಮನವೊಲಿಸಿದರು. ಆದರೆ ಪ್ರತಿಭಟನಾಕಾರರು ರೈತರ ಖಾತೆಗೆ ಹಣ ಪಾವತಿಸುಲಾಗುವವರೆಗೂ ಮುಷ್ಕರ ಹಿಂಪಡೆಯುವುದಿಲ್ಲಾ ಎಂದು ಪಟ್ಟು ಹಿಡಿದು ಮುಷ್ಕರ ಮುಂದು ವರಿಸಿದ್ದರೆ.
ಈ ಸಂದರ್ಭದಲ್ಲಿ ಆಹಾರ ನಿರೀಕ್ಷಕ ವಸಂತ್ ಕುಮಾರ್ , ಎ.ಪಿ.ಎಂ.ಸಿ. ಕಾರ್ಯದರ್ಶಿ ಶಿವಕುಮಾರ್ ಸೇರಿದಂತೆ ರೈತ ಮುಖಂಡರು ರೈತರು ಮತ್ತಿತರರಿದ್ದರು.(ರಿಪೋರ್ಟ್ : – ಎಂ.ಡಿ. ಅಬ್ದುಲ್ ರಖೀಬ್.)