ದಾವಣಗೆರೆ – ದಿನಾಂಕ 12 ರಂದು ಸೋಮವಾರ ದಾವಣಗೆರೆ ಸಂಸದರ ಕಚೇರಿ ಎದುರು ಸಿಪಿಐ ಜಿಲ್ಲಾ ಮಂಡಳಿ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಕಾಮ್ರೆಡ್ ಆವರಗೆರೆ ಚಂದ್ರು ತಿಳಿಸಿದ್ದಾರೆ.
ಸೋಮವಾರ ಬೆಳಿಗ್ಗೆ 11:30 ಗಂಟೆಗೆ ದಾವಣಗೆರೆ ಪಿಬಿ ರಸ್ತೆ ಆರ್ ಹೆಚ್ ಛತ್ರದ ಎದುರಿಗಿರುವ ಸಂಸದರ ಕಚೇರಿ ಬಳಿ ಸಿಪಿಐ ಕಾರ್ಯಕರ್ತರು ಸೇರಿ, ಕರ್ನಾಟಕದ ಜನರ ತೆರಿಗೆ ಹಣದಲ್ಲಿ ರಾಜ್ಯಕ್ಕೆ ಕೊಡಬೇಕಾದ ತೆರಿಗೆ ಹಣದಲ್ಲಿ ತಾರತಮ್ಯ ಎಸೆಗುತ್ತಿರುವ ಕೇಂದ್ರ ಸರ್ಕಾರದ ನಡೆಯನ್ನು ವಿರೋಧಿಸಿ ಮತ್ತು ರಾಜ್ಯದ ತೆರಿಗೆ ಹಣದ ಪಾಲನ್ನು ನ್ಯಾಯ ಸಮ್ಮತವಾಗಿ ರಾಜ್ಯಕ್ಕೆ ಕೊಡಬೇಕೆಂದು ಒತ್ತಾಯಿಸಿ ಬಿಜೆಪಿ ಸಂಸದರಾದ ಶ್ರೀ ಜಿ ಎಂ ಸಿದ್ದೇಶ್ವರ ರವರ ಕಚೇರಿ ಎದುರು ಸಿಪಿಐ ಜಿಲ್ಲಾ ಮಂಡಳಿ ವತಿಯಿಂದ ಪ್ರತಿಭಟನೆ ನಡೆಸಲಾಗುವುದು.
ಈ ಪ್ರತಿಭಟನೆಯಲ್ಲಿ ಪಕ್ಷದ ಪದಾಧಿಕಾರಿಗಳು ಸೇರಿದಂತೆ ಕಾರ್ಯಕರ್ತರು ಭಾಗವಹಿಸುವರು ಎಂದು ಪಕ್ಷದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದ ತೆರಿಗೆ ಹಣದ ಪಾಲನ್ನು ರಾಜ್ಯಕ್ಕೆ ಕೊಡಲು ಒತ್ತಾಯಿಸಿ ಸಂಸದರಾದ ಶ್ರೀ ಜಿ ಎಂ ಸಿದ್ದೇಶ್ವರರ ಕಚೇರಿ ಎದುರು ಸಿಪಿಐ ಜಿಲ್ಲಾ ಮಂಡಳಿ ಪ್ರತಿಭಟನೆ.
RELATED ARTICLES