ಹರಿಹರ:2024 ನೇ ಸಾಲಿನ ಬೇಸಿಗೆ ಹಂಗಾಮಿನಲ್ಲಿ ಭದ್ರಾ ಜಲಾಶಯದಿಂದ ಬಲದಂಡೆ ಕಾಲುವೆಗಳಿಗೆ ನೀರು ಸಂಗ್ರಹ ಕಡಿಮೆ ಇರುವುದರಿಂದ ಬೇಸಿಗೆಯಲ್ಲಿ ಕುಡಿಯುವ ನೀರು ಸಂಗ್ರಹಣ ಮಾಡಬೇಕಾಗಿರುತ್ತದೆ, ಆದ್ದರಿಂದ ಭದ್ರಾ ಕಾಲುವೆಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ವಂಪ್ ಸೆಟ್ಗಳನ್ನು ತೆರವುಗೊಳಿಸುವುದು ಹಾಗೂ ವಿದ್ಯುತ್ ಪೂರೈಕೆ ಕಡಿತಗೊಳಿಸುವುದು ಅವಶ್ಯವಾಗಿರುತ್ತದೆ, ನದಿ ಪಾತ್ರದ ಗ್ರಾಮಗಳಾದ ಕೊಪ್ಪ, ಹಾಲಿವಾಣ, ದಿಬ್ಬದಹಳ್ಳಿ, ಕೋಮಾರನಹಳ್ಳಿ, ಮಲೇಬೆನ್ನೂರು, ಜಿಗಳ ಜಿ ಬೇವಿನಹಳ್ಳಿ, ವಡೆದ ಬಸಾಪುರ, ಯಲಪಟ್ಟಿ ಲಾರೆಟ್ಟಹಳ್ಳಿ ಸಿಂಗರ ಕಮಲಾಪುರ, ವಾಸನ, ಪಾಳ್ಯ, ಗೋವಿನಹಾಳ್, ಭೈರನಪಾದ ಗ್ರಾಮಗಳ ಕಾಲುವೆಗಳಲ್ಲಿ ಅಳವಡಿಸಿರುವ ಅನಧೀಕೃತವಾಗಿ ಪಂಪ್ ಸೆಟ್ ಗಳನ್ನು ತೆರವುಗೊಳಿಸುವುದು ಕೆರವುಗೊಳಿಸುವ ಬಗ್ಗೆ ಹಾಗೂ ಕುಡಿಯುವ ನೀರು ನಿರ್ವಹಣೆ ಬಗ್ಗೆ ನಡೆದ ಸಭೆಯಲ್ಲಿ ಸೂಚಿಸಿರುವಂತೆ, ಹರಿಹರ ತಾಲ್ಲೂಕಿನ ಮೇಲ್ಕಂಡ ನದಿ ಪಾತ್ರದಲ್ಲಿ ಪೂರೈಕೆ ಸಂಬಂಧ ಹಾಗೂ ಅನಧಿಕೃತ ಪಂಪ್ ಸೆಟ್‌ಗಳ ತೆರವು ಕಾರ್ಯಚರಣೆಗೆ ಸದರಿ ನಿಷೇದಾಜ್ಞೆಯು ಜಾರಿಯಲ್ಲಿರುತ್ತದೆ. ಆದುದರಿಂದ ನಿಷೇದಿತ ಪ್ರದೇಶಗಳಲ್ಲಿ ಹರಿಹರ ಮತ್ತು ಮಲೇಬೆನ್ನೂರು ವ್ಯಾಪ್ತಿಯ ಪೊಲೀಸ್ ಇಲಾಖೆಯವರು ಸೂಕ್ತ ಬಂದೋಬಸ್ತ್ ಒದಗಿಸುವಂತೆ ಸಂಬಂಧಿಸಿದವರ ಮೇಲೆ ಕಾನೂನಿನ ಪ್ರಕಾರ ಸೂಕ್ತ ಕ್ರಮ ಜರಗಿಸಲಾಗುವುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ ಎಂದು ಹರಿಹರದ ತಹಶಿಲ್ದಾರರು ತಿಳಿಸಿದ್ದಾರೆ.