Saturday, December 21, 2024
Homeರಾಜಕೀಯಸಿಪಿಐ ನಿಂದ ಪ್ರಜಾಪ್ರಭುತ್ವದ ಉಳಿವಿಗಾಗಿ ರಾಜಕೀಯ ಸಮಾವೇಶ.

ಸಿಪಿಐ ನಿಂದ ಪ್ರಜಾಪ್ರಭುತ್ವದ ಉಳಿವಿಗಾಗಿ ರಾಜಕೀಯ ಸಮಾವೇಶ.

ದಾವಣಗೆರೆ -ಸಂವಿಧಾನ, ಪ್ರಜಾತಂತ್ರ ,ಬಹುತ್ವ ಭಾರತ ಉಳಿಸಲು ಭಾರತ ಕಮ್ಯುನಿಸ್ಟ್ ಪಕ್ಷದ ದಾವಣಗೆರೆ ಜಿಲ್ಲಾ ಮಂಡಳಿ ನೇತ್ರತ್ವದಲ್ಲಿ ಏಪ್ರಿಲ್ 1 ನೇ ತಾರೀಖು ಸೋಮವಾರ ರಾಜಕೀಯ ಸಮಾವೇಶ ನಡೆಸಲಾಗುವುದು ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಕಾಂ ಆವರಗೆರೆ ಚಂದ್ರು ತಿಳಿಸಿದ್ದಾರೆ.
ದಾವಣಗೆರೆ ನಗರದ ಜಯದೇವ ಸರ್ಕಲ್ ಬಳಿ ಇರುವ ಶಿವಯೋಗಿ ಮಂದಿರದ ಆವರಣದಲ್ಲಿ ನಡೆಯುವ ಈ ಸಮಾವೇಶವನ್ನು ಸಿ ಪಿ ಐ ರಾಷ್ಟ್ರೀಯ ಮಂಡಳಿ ಸದಸ್ಯರಾದ ಕಾಂ ಪಿವಿ ಲೋಕೇಶ್ ರವರು ಸಮಾವೇಶ ಉದ್ಘಾಟಿಸಿ ಮಾತನಾಡುವರು ಸಿಪಿಐ ರಾಜ್ಯ ಮಂಡಳಿ ಕಾರ್ಯದರ್ಶಿ ಕಾಂ ಸಾತಿ ಸುಂದರೇಶ್ ಪ್ರಧಾನಿ ಮೋದಿ ಅವರು ಕಳೆದ ಹತ್ತು ವರ್ಷಗಳಲ್ಲಿ ನೀಡಿದ ಹುಸಿ ಭರವಸೆಗಳ ಪುಸ್ತಕವನ್ನು ಬಿಡುಗಡೆಗೊಳಿಸಿ ಪ್ರಸ್ತಾವಿಕವಾಗಿ ಮಾತನಾಡುವರು ಉಳಿದಂತೆ ಸಮಾವೇಶದಲ್ಲಿ ಕಾಂಗ್ರೆಸ್ ನ ಜಿಲ್ಲಾಧ್ಯಕ್ಷರಾದ ಹೆಚ್ ಬಿ ಮಂಜಪ್ಪ, ದಿನೇಶ್ ಕೆ ಶೆಟ್ಟಿ, ಸಿಪಿಐ ಜಿಲ್ಲಾ ಖಜಾಂಚಿ ಆನಂದರಾಜ್, ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷರಾದ ಶ್ರೀ ಶಿವಕುಮಾರಪ್ಪ, ಮತ್ತು ಅರುಣ್ ಕುಮಾರ್, ಜಬೀನಾ ಖಾನಂ ರವರು ಸೇರಿದಂತೆ ಮತ್ತಿತರರು ಸಮಾವೇಶದಲ್ಲಿ ಅತಿಥಿಗಳಾಗಿ ಭಾಗವಹಿಸುವರು.
ಸಮಾವೇಶದ ಆರಂಭಕ್ಕೂ ಮೊದಲು ಅಂದು ಬೆಳಗ್ಗೆ 11 ಗಂಟೆಗೆ ಗಾಂಧಿ ಸರ್ಕಲ್ ನಿಂದ ಕಾರ್ಯಕರ್ತರು ಮೆರವಣಿಗೆಯಲ್ಲಿ ಅಶೋಕ ರಸ್ತೆ ಮೂಲಕ ಶಿವಯೋಗಿ ಮಂದಿರಕ್ಕೆ ಆಗಮಿಸಿದ ನಂತರ ರಾಜಕೀಯ ಸಮಾವೇಶ ಆರಂಭಿಸಲಾಗುವುದು.
ಸಿಪಿಐ, ಕಾಂಗ್ರೆಸ್, ಆಮ್ ಆದ್ಮಿ ಪಕ್ಷದ ಎಲ್ಲಾ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಿ ಸಮಾವೇಶವನ್ನು ಯಶಸ್ವಿಗೊಳಿಸುವಂತೆ ಸಿಪಿಐ ಜಿಲ್ಲಾ ಸಹಕಾರದರ್ಶಿಗಳಾದ ಹೆಚ್ ಜಿ ಉಮೇಶ್ ಆವರಗೆರೆ, ಆವರಗೆರೆ ವಾಸು, ಮುಖಂಡರುಗಳಾದ ಎಂ ಬಿ ಶಾರದಮ್ಮ, ಕೆರನಹಳ್ಳಿ ರಾಜು ಪತ್ರಿಕಾ ಪ್ರಕಟಣೆ ಮೂಲಕ ಕರೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments