ದಾವಣಗೆರೆ : ಕರ್ನಾಟಕ ಸ್ಟೇಟ್ ಕೇರಂ ಅಸೋಸಿಯೇಷನ್, ಬೆಂಗಳೂರು ಇವರು
ನಡೆಸಿದ ರಾಜ್ಯಮಟ್ಟದ ಕೇರಂ ರ್ಯಾಕಿಂಗ್ ಪಂದ್ಯಾವಳಿ-2024 ದಿನಾಂಕ: 27 ರಿಂದ 30 ರ ವರೆಗೆ ಬೆಂಗಳೂರಿನ ರಿಸರ್ವ ಬ್ಯಾಂಕ್ ಕ್ವಾಟ್ರಸ್ ನಲ್ಲಿ ನಡೆದ ಪಂದ್ಯಾವಳಿಯಲ್ಲಿ ದಾವಣಗೆರೆ ಡಿಸ್ಟ್ರಿಕ್ಟ್ ಕೇರಂ ಅಸೋಸಿಯೇಷನ್ ವತಿಯಿಂದ ಭಾಗವಹಿಸಿ ಆರ್. ಶಿವಕುಮಾರ್ ಅವರು ತೃತೀಯ ಸ್ಥಾನ ಪಡೆದು ಮಧ್ಯಪ್ರದೇಶದ ಗ್ವಾಲಿಯರ್ನನಲ್ಲಿ ದಿನಾಂಕ 06-04-2024 ರಿಂದ 10-04-2024ರ ವರೆಗೆ ನಡೆಯುವ ರಾಷ್ಟ್ರಮಟ್ಟದ ಸೀನಿಯರ್ ಯಾಂಕಿಂಗ್ ಕೇರಂ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ತೆರಳಲಿದ್ದಾರೆ. ಹಾಗೂ ಇದೇ ಪಂದ್ಯಾವಳಿಯಲ್ಲಿ ಸೈಯದ್ ನೂರುಲ್ಲಾ ಅವರು ನಾನ್ ಮೆಡಿಲಿಸ್ಟ್‌ನಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.
ರಾಷ್ಟ್ರೀಯ ಪಂದ್ಯಾವಳಿಗೆ ಆಯ್ಕೆಯಾಗಿರುವ ಆರ್. ಶಿವಕುಮಾರ್ ಇವರನ್ನು ದಾವಣಗೆರೆ ಜಿಲ್ಲಾ ಕೇರಂ ಸಮಿತಿ ಅಧ್ಯಕ್ಷರಾದ ದಿನೇಶ್ ಕೆ. ಶೆಟ್ಟಿ, ಉಪಾಧ್ಯಕ್ಷರಾದ ಕೇರಂ ಗಣೇಶ್, ಮಹಾನಗರ ಪಾಲಿಕೆ ಸದಸ್ಯರಾದ ಎ. ನಾಗರಾಜ್, ಡಿ.ಎನ್. ಜಗದೀಶ್, ಎಂ.ಆರ್. ಮಾಲತೇಶ್, ಪ್ರಧಾನ ಕಾರ್ಯದರ್ಶಿ ಸಿರಾಜುದ್ದೀನ್, ಎಸ್. ಮಲ್ಲಿಕಾರ್ಜುನ್, ಎಸ್. ಮಾನು, ಗೋಪಾಲ್, ಸತೀಶ್, ಆರೋಗ್ಯಸ್ವಾಮಿ ಅವರುಗಳು ಸನ್ಮಾನಿಸಿ ರಾಜ್ಯಕ್ಕೆ ಹಾಗೂ ಜಿಲ್ಲೆಗೆ ಕೀರ್ತಿ ತರಲೆಂದು ಶುಭ ಹಾರೈಸಿದರು.