ದಾವಣಗೆರೆ:ದಿನಾಂಕ:-02-04-2024 ಬೆಳಿಗ್ಗೆ ಪೋಲಿಸ್ ಧ್ವಜದಿನಾಚರಣೆ ಪ್ರಯುಕ್ತ ದಾವಣಗೆರೆ ಜಿಲ್ಲಾ ಪೋಲಿಸ್ ಮತ್ತು ಪೋಲಿಸ್ ಕಲ್ಯಾಣ ಸಮಿತಿ ಹಾಗೂ ಕರ್ನಾಟಕ ಹಿಮೊಫಿಲಿಯಾ ಸೊಸೈಟಿಯ ಲೈಫ್ ಲೈನ್ರಕ್ತ ನಿಧಿ ಕೇಂದ್ರದ ಸಹಯೋಗದೊಂದಿಗೆ ಜಿಲ್ಲಾ ಪೋಲಿಸ್ ಕವಾಯತು ಆವರಣದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಸ್ವಯಂ ಪ್ರೇರಿತರಕ್ತದಾನ ಶಿಬಿರವನ್ನು ಮಾನ್ಯ ಪೊಲೀಸ್ ಮಹಾ ನಿರೀಕ್ಷಕರವರು ಪೂರ್ವ ವಲಯ ದಾವಣಗೆರೆ ರವರಾದ ಡಾ. ಕೆ ತ್ಯಾಗರಾಜನ್ ಐಪಿಎಸ್ ರವರು & ಮಾನ್ಯ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರು ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.