“ರಾಜ್ಯದ 25 ಎಂಪಿಗಳ ಮನಸ್ಸಿಗೆ ರಾಜ್ಯದ ಬರಗಾಲ ಅರಿವಿಗೆ ಬಂದಿಲ್ವೆ? “-, ಭಾರತ ದೇಶದ ಭೂಮಿಯ ಮೇಲೆ ಕಂಗೊಳಿಸುವ ಹೆಮ್ಮೆಯ ನಾಡು ನಮ್ಮ ಕನ್ನಡನಾಡು,ಕೃಷ್ಣೆ,ಕಾವೇರಿ,ತುಂಗಭದ್ರೆ ಹರಿಯುವ ಮಲೆನಾಡು, ಬಯಲು ಸೀಮೆ ಹೊಂದಿದ ಚೆಲುವಿನ ನಾಡು ಆದರೆ,ಇಂದು ಬಿಸಿಲಿನ ತಾಪಕ್ಕೆ ಭೂಮಿ ಬೇಯುತ್ತಿದೆ,ಜಾನವಾರಗಳು ನೀರು ಮೇವು ಇಲ್ಲದೆ ಸಾಯುತ್ತಿದ್ದಾವೆ,ಒಂದು ಕಡೆ ಕೆಲಸವಿಲ್ಲದೆ ಕೃಷಿ ಕಾರ್ಮಿಕರು ಪರದಾಡುತ್ತಿದ್ದಾರೆ ಕಾರಣ ಬರಗಾಲ, 122 ವರ್ಷದ ನಂತರ ರಾಜ್ಯಕ್ಕೆ ಇಂತಹ ತೀರ್ವವಾದ ಬರಗಾಲ ಸೃಷ್ಟಿಯಾಗಿದೆಂದು ತಜ್ಞರ ವರದಿಗಳು ಹೇಳುತ್ತಿವೆ, ಇದರ ವರದಿ ಪ್ರಕಾರ ರಾಜ್ಯ ಸರ್ಕಾರ 223 ತಾಲ್ಲೂಕುಗಳನ್ನ ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿದೆ ಸುಮಾರು 41ಲಕ್ಷದ 56ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿ ಭೀಕರ ಬರಗಾಲ ಬಂದಿದೆ ಎಂದು ರಾಜ್ಯದ ಮುಖ್ಯಮಂತ್ರಿ ಗಳು ಅಕ್ಟೋಬರ್ ಮತ್ತು ನವೆಂಬರ್ ನಲ್ಲಿ ಕೇಂದ್ರಕ್ಕೆ ಪತ್ರ ಬರೆದು ಬರಪರಿಹಾರ ಕೇಳಿದ್ದಾರೆ ಕೇಂದ್ರ ಸ್ಪಂದಿಸಿಲ್ಲಾ, ನಂತರ ಡಿಸೆಂಬರ್ ನಲ್ಲಿ ಸಿ ಎಂ ಮತ್ತು ಸಚಿವರಾದ ಕೃಷ್ಣೆಭೈರೆಗೌಡರು ನೇರವಾಗಿ ದೆಹಲಿಗೆ ಹೋಗಿ ಪ್ರಧಾನಿ ಮೋದಿ ಹಾಗೂ ಗೃಹಸಚಿವ ಅಮೀತ್ ಷಾ ರನ್ನು ಭೇಟಿ ಮಾಡಿ ನಮ್ಮ ರಾಜ್ಯಕ್ಕೆ ಕೊಡಬೇಕಾದ ಬರಪರಿಹಾರ ನಿಧಿಯನ್ನು ಕೊಡಿರೆಂದು ಮನವಿ ಮಾಡಿ ಬಂದಿದ್ದಾರೆ ಸ್ಪಂದನೆಯಿಲ್ಲಾ, ನಿಯಮದ ಪ್ರಕಾರ ಕೇಂದ್ರದ ಬರಪರಿಹಾರ ತಂಡ ರಾಜ್ಯಕ್ಕೆ ಬಂದು ವರದಿಮಾಡಿ ಕೇಂದ್ರಕ್ಕೆ ಸಲ್ಲಿಸಿ ಆರು ತಿಂಗಳಾದರು ರಾಜ್ಯಕ್ಕೆ ಕೊಡಬೇಕಾದ ಬರಪರಿಹಾರ ನಿಧಿಯನ್ನು ಕೊಟ್ಟಿಲ್ಲಾ. ಆದರೆ,ಚುನಾವಣೆ ಪ್ರಚಾರಕ್ಕೆ ರಾಜ್ಯಕ್ಕೆ ಭೇಟಿ ನೀಡಿದ ಅಮಿತ್ ಷಾ ತನ್ನ ಭಾಷಣದಲ್ಲಿ ರಾಜ್ಯ ಬರಗಾಲದಿಂದ ತತ್ತರಿಸುತ್ತಿದೆ ನಿಮ್ಮ ಮುಖ್ಯಮಂತ್ರಿಗಳು ನಮ್ಮ ಗಮನಕ್ಕೆ ತಂದಿಲ್ಲಾ ಬರಪರಿಹಾರ ಕೇಳಿಲ್ಲಾ ಇಂತಹ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಿರಿ ಪುಂಗಿ ಊದಿದ್ದಾನೆ ಇಂತಹ ಪರಮ ,ಸುಳ್ಳಗಾರನ ಮಾತುಗಳಿಗೆ ಚಪ್ಪಾಳೆ ತಟ್ಟುವ ನರಸತ್ತ 25 ಎಂ ಪಿ ಗಳು ಇರುವಾಗ ರಾಜ್ಯ ಉದ್ದಾರಾಗುತ್ತಾ…? ಈ ಮಾನಗೇಡಿ ಮೋದಿಯಾದರೆ, ಪರಮ ಸುಳ್ಳುಗಾರ ಅಮಿತ್ ಷಾ. ಅರ್ಥ ಮಾಡಿಕೊಳ್ಳಿ ಬಂಧುಗಳೆ ಕರ್ನಾಟಕ ಜನರ ತೆರಿಗೆ ಬೇಕು,ಇವರ ಓಟು ಬೇಕು ಆದರೆ,ಕರ್ನಾಟಕ ಜನರ ಬದುಕುಬೇಡ,ನೆಮ್ಮದಿಬೇಡ,ಸಂತೋಷವಾಗಿರುವುದು ಈ ಬಿಜೆಪಿಗರಿಗೆ ಬೇಡ. ಹತ್ತು ವರ್ಷಗಳಿಂದ ಇವರ ಸುಳ್ಳು ಮಾತುಗಳಿಗೆ ಬಲಿಯಾಗಿ ಅನುಭವಿಸುವ ಕಷ್ಟಗಳನ್ನ ಅರ್ಥಮಾಡಿಕೊಳ್ಳಿ ಈ ಬಿಜೆಪಿಯ ಮೋದಿ ಹಾಗೂ ಸಂಘಪರಿವಾರದವರು ಹಸಿ ಹಸಿ ಸುಳ್ಳುಗಳನ್ನು ಹೇಳಿದ್ದಕ್ಕೆ ಈವತ್ತು ಸೋಲಿನ ಭೀತಿ ಬಿಜೆಪಿಯವರಿಗೆ ಶುರುವಾಗಿದೆ ಆ ಕಾರಣಕ್ಕಾಗಿಯೆ ಈವತ್ತು ವಿಪಕ್ಷಗಳ ನಾಯಕರುಗಳಿಗೆ ED ಮೂಲಕ ಬಂಧಿಸುವ ಪ್ರಯತ್ನ ಮಾಡುತ್ತಿದ್ದಾರೆ,ವಿಪಕ್ಷಗಳ ಖಾತೆಗಳನ್ನು ಮುಚ್ಚಿಸುವ ಪ್ರಯತ್ನ ಮಾಡುತ್ತಿದ್ದಾರೆ,ಮಾಧ್ಯಮಗಳನ್ನು ಖರೀದಿ ಮಾಡಿಕೊಂಡು ಬಾಯಿ ಮುಚ್ಚಿಸಿದ್ದಾರೆ ಬಂಧುಗಳೇ, ಈ ಲೋಕಸಭಾ ಚುನಾವಣೆ ಮುಂದಿನ ನಮ್ಮ ಹಾಗೂ ನಮ್ಮ ಮಕ್ಕಳ ಭವಿಷ್ಯದ ಚುನಾವಣೆ,ಈ ದೇಶ ಹಾಗೂ ನಾಡಿನ ಭದ್ರತೆಗಾಗಿ ನಿಮ್ಮ ಮತವಿರಲಿ ಒಂದು ವೇಳೆ ಮೋದಿ ಮೋದಿ ಎಂದು ಯ್ಯಾಮಾರ ಬೇಡಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ಚುನಾವಣೆ ನಿಮ್ಮ ತೀರ್ಮಾನ ಯೋಚಿಸಿ ಜನರು ಆಯ್ಕೆ ಮಾಡುವ ಸರ್ಕಾರ ಬೇಕೋ ಅಥವಾ ಬ್ರಿಟಿಷ್ ರ ತರ ಹೊಡೆದಾಳುವ ತಂತ್ರದ ಮೋದಿ ಬಿಜೆಪಿ ಸರ್ಕಾರ ಬೇಕೋ ಆಯ್ಕೆ ನಿಮ್ಮದು…..? :: ಹಿತೈಷಿ…ಅಂಜಿನಪ್ಪಲೋಕಿಕೆರೆ.
ಬಿ.ಜೆ.ಪಿ.ಗರಿಗೆ ಕರ್ನಾಟಕದ ಜನರ ತೆರಿಗೆ ಬೇಕು,ಇವರ ಓಟು ಬೇಕು ಆದರೆ,ಕರ್ನಾಟಕ ಜನರ ಬದುಕುಬೇಡ,ನೆಮ್ಮದಿಬೇಡ:ಅಂಜಿನಪ್ಪಲೋಕಿಕೆರೆ
RELATED ARTICLES