Wednesday, May 6, 2026
Homeರಾಜಕೀಯಅಹಿಂದ ಮುಖಂಡ ಚೆನ್ನಯ್ಯ ಒಡೆಯರ್ ರವರಿಗೆ ಆದಂತ ಅನ್ಯಾಯ ನನಗೂ ಆಗಿದೆ - ವಿನಯ್ ಕುಮಾರ್

ಅಹಿಂದ ಮುಖಂಡ ಚೆನ್ನಯ್ಯ ಒಡೆಯರ್ ರವರಿಗೆ ಆದಂತ ಅನ್ಯಾಯ ನನಗೂ ಆಗಿದೆ – ವಿನಯ್ ಕುಮಾರ್

ದಾವಣಗೆರೆ ಮಾ.4:ಜಿಲ್ಲೆಯ ರಾಜಕಾರಣದಲ್ಲಿ ಅಹಿಂದ ವರ್ಗಕ್ಕೆ ಸಾಕಷ್ಟು ಅನ್ಯಾಯಗಳಾಗುತ್ತಲೇ ಬಂದಿದೆ. ನನ್ನ ಹೋರಾಟ ನನ್ನ ಸ್ವಾಭಿಮಾನದ ಹೋರಾಟ ಒಬ್ಬ ವ್ಯಕ್ತಿ ಪಕ್ಷದ ವಿರುದ್ಧ ಅಲ್ಲ ಜಾತಿವಾದಿಗಳ ‌ಪ್ರಜಾಪ್ರಭುತ್ವ ವ್ಯವಸ್ಥೆ ವಿರುದ್ಧ ಎಂದು ವಿನಯ್ ಕುಮಾರ್ ಖಡ ಖಂಡಿತವಾಗಿ ಹೇಳಿದರು
ಹರಪನಹಳ್ಳಿ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ. ವಿನಯ್ ಚಿತ್ತ ಮತದಾರರತ್ತ.* ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ ಔಟ್ ರೀಚ್ ವಿಭಾಗದ ಕರ್ನಾಟಕ ಉಪಾಧ್ಯಕ್ಷರೂ, ಅಹಿಂದ ಯುವ ನಾಯಕ ಜಿ.ಬಿ. ವಿನಯ್ ಕುಮಾರ್ ತಾಲೂಕಿನ ಗ್ರಾಮಗಳಿಗೆ ಭೇಟಿ ನೀಡಿ, ಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಬಗ್ಗೆ ಮತದಾರರ ಅಭಿಪ್ರಾಯ ಸಂಗ್ರಹಿಸುವ ಸಂದರ್ಭದಲ್ಲಿ
ಜಿಲ್ಲೆಯ ಮತದಾರರು ಅಪೇಕ್ಷಿತ ಅಭ್ಯರ್ಥಿಗೆ ಅವಕಾಶ ವಂಚಿತವಾಗಿರುವುದರಿಂದ
ಈ ವ್ಯವಸ್ಥೆಯ ವಿರುದ್ಧ ಚುನಾವಣೆಯಲ್ಲಿ ಪಕ್ಷಗಳು.. ಜನರ ವಿರುದ್ಧವಾಗಿರುವ
ಅಭ್ಯರ್ಥಿಗಳನ್ನು ಸ್ಪರ್ಧೆ ಮಾಡಲು ಅವಕಾಶ ಮಾಡಿದ್ದಾರೆ ಇಂತಹ ವ್ಯವಸ್ಥೆಯ ವಿರುದ್ಧ ನನ್ನ ಹೋರಾಟವಾಗಿದೆ ನಾನು ಒಬ್ಬ ವ್ಯಕ್ತಿ . ಪಕ್ಷದ ವಿರುದ್ಧ ನನ್ನ ಹೋರಾಟ ಅಲ್ಲ ನನ್ನ ಸ್ವಾಭಿಮಾನದ ಹೋರಾಟ. ದಾವಣಗೆರೆ ಲೋಕಸಭಾ ಕ್ಷೇತ್ರದ ಸರ್ವಾಂಗಿನ ಅಭಿವೃದ್ಧಿಯ ಕನಸ್ಸನ್ನು ಕಂಡಿದ್ದ .. ನನ್ನಂಥವನಿಗೆ ಅನ್ಯಾಯವಾಗಿದೆ. 30 ವರ್ಷಗಳ ಹಿಂದೆ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಅಹಿಂದ ವರ್ಗದ ದಿವಂಗತ. ಚೆನ್ನಯ್ಯ ಒಡಿಯರ್ ರವರಿಗೆ ಅನ್ಯಾಯವಾಗಿದ್ದು ಇಂದು ನನಗೆ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ ಈ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು. ಶೋಷಿತ ಸಮುದಾಯದವರು. ಹಿಂದುಳಿದ ವರ್ಗ ಅಲ್ಪಸಂಖ್ಯಾತ ಸಮುದಾಯಗಳು ಜಾಗೃತರಾಗಬೇಕಾಗಿದೆ
ಎಂದು ಈ ಸಂದರ್ಭದಲ್ಲಿ ಹೇಳಿದರು.
ಹರಪನಹಳ್ಳಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪರಶುರಾಮಪ್ಪ, ಯುವ ಮುಖಂಡ ಶರತ್ ಕುಮಾರ್
ರಿಯಾಜ್ ಅಹ್ಮದ್, ಅನಂತ ಚಿಕ್ಕಬೂದಳ್, ಪರಶುರಾಮ್ ಭಟ್ಲಕಟ್ಟೆ, ಪುರಂದರಲೋಕಿಕೆರೆ,
ಯುವಜನರು ಮುಖಂಡರು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments