ಬಾಗಲಕೋಟೆ ಗ್ರಾಮೀಣ ಹಾಗೂ ಶಹರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರದ ಅಂಗವಾಗಿ ನಗರದ ಚರಂತಿಮಠ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಯಿತು.
ಈ ಸಮಾವೇಶದಲ್ಲಿ ಮಾನ್ಯ ಸಚಿವರಾದ ಆರ್ ಬಿ ತಿಮ್ಮಾಪುರ, ಶಾಸಕರಾದ ಜಿ ಟಿ ಪಾಟೀಲ್, ಎಚ್ ವೈ ಮೇಟಿ, ಭೀಮಸೇನ ಚಿಮ್ಮನಕಟ್ಟಿ, ಮಾಜಿ ಸಚಿವರಾದ S R ಪಾಟೀಲ್ -ಶಿವನಗೌಡ ಆರ್ ಪಾಟೀಲ್, ಆನಂದ ನ್ಯಾಮಗೊಂಡ್ , ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ನಂಜಯ್ಯಮಠ,ಮುಖಂಡರಾದ ಸಿದ್ದು ಕೊಣ್ಣೂರ, ರಕ್ಷಿತಾ ಈಟಿ, ಲೋಕಸಭಾ ಅಭ್ಯರ್ಥಿ ಸಂಯುಕ್ತ ಪಾಟೀಲ್ ಬ್ಲಾಕ್ ಅಧ್ಯಕ್ಷರು ಹಾಗೂ ಪಕ್ಷದ ಎಲ್ಲ ಮುಂಚೂಣಿ ಘಟಕಗಳ ಅಧ್ಯಕ್ಷರು, ಹಿರಿಯ ಕಿರಿಯ
ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.