ದೇಶಕ್ಕೆ ಕಾಂಗ್ರೆಸ್ ಮಾತ್ರ ಪರ್ಯಾಯ ಕೊಡಬಲ್ಲದು ಎಂದು ವಿಜಯಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಹೇಳಿದರು.
ಸಿಂದಗಿ ಮತಕ್ಷೇತ್ರದ ತಾಂಬಾ ಮತ್ತು ಚಾಂದಕವಟೆ ಗ್ರಾಮಗಳಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು
ದೇಶವೀಗ ಬದಲಾವಣೆ ಬಯಸಿದೆ. ವಿಜಯಪುರ ಲೋಕಸಭೆ ಕ್ಷೇತ್ರದ ಜನರೂ ಹೊಸ ಬೆಳಕಿನ ನಿರೀಕ್ಷೆಯಲ್ಲಿದ್ದಾರೆ. ತಮಗೆ ಮತ ನೀಡಿ ಆರಿಸಿ ಕಳಿಸಿದ್ದೇ ಆದರೆ, ಜಿಲ್ಲೆ ಹಿಂದೆಂದೂ ಕಂಡರಿಯದ ಅಭಿವೃದ್ಧಿ ಮಾಡಿ ತೋರಿಸಿ ನಿಮ್ಮೆಲ್ಲರ ನಂಬಿಕೆ ಉಳಿಸಿಕೊಳ್ಳುವೆ ಎಂದು ಹೇಳಿದರು.
ಶಾಸಕ ಅಶೋಕ ಮನಗೂಳಿ ಮಾತನಾಡಿ, ಕಾಂಗ್ರೆಸ್ ಪಕ್ಷದಿಂದ ಮಾತ್ರ ಜನಹಿತ ಸಾಧ್ಯ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಕೇಂದ್ರ ಸರಕಾರದಿಂದ ಬರುವ ಹಕ್ಕಿನಿಂದ ವಂಚಿತರಾಗಿರುವ ಜನರ ಬದುಕು ಹಸನಾಗಲು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಎಂದು ಮನವಿ ಮಾಡಿದರು.
ಮುಖಂಡರಾದ ಎಸ್.ಎಂ.ಪಾಟೀಲ ಗಣಿಹಾರ, ರವಿ ಚವ್ಹಾಣ, ಗುರಣ್ಣಗೌಡ ಪಾಟೀಲ ಚಾಂದಕವಟೆ, ಇಲಿಯಾಸ್ ಬೋರಾಮಣಿ, ಗಂಗಾಧರ ಸಂಬಣ್ಣಿ, ಕಾಮೇಶ ಉಕ್ಕಲಿ, ದೊಡ್ಡಮನಿ, ಅಧ್ಯಕ್ಷ ರಜಾಕ್, ಮಶಾಕ್ ಕಾಳೆ, ಫಾರೂಕ್ ಮುಲ್ಲಾ, ಮಹ್ಮದ ಉಜನಿ ಮತ್ತಿತರರು ಇದ್ದರು.