ದಾವಣಗೆರೆ:ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ 79 ನೇ ಸ್ಥಾಪನಾ ದಿನಾಚರಣೆಯ ಈ ಸಂದರ್ಭದಲ್ಲಿ ಕೆ.ರಾಘವೇಂದ್ರ ನಾಯರಿ ಹಂಚಿಕೊಂಡ ಕ್ರಾಂತಿಕಾರಿ ಶುಭಾಶಯಗಳು
ದೇಶಕ್ಕೆ ಬ್ಯಾಂಕ್ ರಾಷ್ಟ್ರೀಕರಣದಂತಹ ಮಹತ್ತರ ಕೊಡುಗೆಗಳನ್ನು ನೀಡಿ, ಬ್ಯಾಂಕ್ ಉದ್ಯೋಗಿಗಳಿಗೆ ಗೌರವಯುತ ಬದುಕು ನೀಡಿದ ನಮ್ಮ ಪ್ರೀತಿಯ AIBEA – ಅಖಿಲ ಭಾರತ ಬ್ಯಾಂಕ್ ನೌಕರರ ಸಂಘವು 78 ಸಂವತ್ಸರಗಳನ್ನು ದಾಟಿ 79 ಕ್ಕೆ ಕಾಲಿಡುತ್ತಿರುವ ಈ ಪವಿತ್ರ ಸಂದರ್ಭದಲ್ಲಿ ನಿಮಗೆಲ್ಲರಿಗೂ ಕ್ರಾಂತಿಕಾರಿ ಶುಭಾಶಯಗಳು.
ಅದರಲ್ಲೂ ಬಹುಮುಖ್ಯವಾಗಿ ನಮ್ಮ ಸಂಘದ ಉದಯಕ್ಕೆ ಕಾರಣರಾದ ಮತ್ತು ಇಂದಿಗೂ ತಮ್ಮ ಅಮೂಲ್ಯವಾದ ಮಾರ್ಗದರ್ಶನದೊಂದಿಗೆ ನಮ್ಮನ್ನು ಮುನ್ನಡೆಸುತ್ತಿರುವ ನಮ್ಮೆಲ್ಲ ಹಿರಿಯ ಸಂಗಾತಿಗಳಿಗೆ ಕೆಂಪು ವಂದನೆಗಳನ್ನು ಸಲ್ಲಿಸಿ ಗೌರವ ಸಲ್ಲಿಸೋಣ…ಏಕತೆ, ಸಂಘಟನೆ, ಬದ್ಧತೆಯ ಹೋರಾಟ ನಮ್ಮ ಉಸಿರಾಗಲಿ…ಅಖಿಲ ಭಾರತ ಬ್ಯಾಂಕ್ ನೌಕರರ ಸಂಘಕ್ಕೆ ಜಯವಾಗಲಿ…ಅಖಿಲ ಭಾರತ ಬ್ಯಾಂಕ್ ನೌಕರರ ಸಂಘವು ಚಿರಾಯುವಾಗಲಿ…
////
ದಾವಣಗೆರೆ-ಕರ್ನಾಟಕ