Thursday, August 21, 2025
Homeಕಾನೂನುದಾವಣಗೆರೆ ಅಂತಿಮ ಕಣದಲ್ಲಿ 30 ಅಭ್ಯರ್ಥಿಗಳು :ಜಿಲ್ಲಾ ಚುನಾವಣಾಧಿಕಾರಿ ಡಾ.ವೆಂಕಟೇಶ್ ಎಂ.ವಿ

ದಾವಣಗೆರೆ ಅಂತಿಮ ಕಣದಲ್ಲಿ 30 ಅಭ್ಯರ್ಥಿಗಳು :ಜಿಲ್ಲಾ ಚುನಾವಣಾಧಿಕಾರಿ ಡಾ.ವೆಂಕಟೇಶ್ ಎಂ.ವಿ

ದಾವಣಗೆರೆ,ಏ.20 ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮೇ 7 ರಂದು ಚುನಾವಣೆ ನಡೆಯುತ್ತಿದ್ದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾದ ಏಪ್ರಿಲ್ 22 ರಂದು 3 ಅಭ್ಯರ್ಥಿಗಳು ಉಮೇದುವಾರಿಕೆ ವಾಪಸ್ ಪಡೆಯುವ ಮೂಲಕ ಚುನಾವಣಾ ಕಣದಲ್ಲಿ 30 ಅಭ್ಯರ್ಥಿಗಳಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಏ.19 ಕೊನೆಯ ದಿನವಾಗಿತ್ತು, ಒಟ್ಟು 40 ಅಭ್ಯರ್ಥಿಗಳಿಂದ 54 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಏ.20 ರಂದು ನಡೆದ ನಾಮಪತ್ರ ಪರಿಶೀಲನೆಯಲ್ಲಿ 7 ಅಭ್ಯರ್ಥಿಗಳ ನಾಮಪತ್ರ ತಿರಸ್ಕ್ರತವಾಗಿ 33 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ದವಾಗಿದ್ದವು. ಏ.22 ರ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿತ್ತು. ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಇರ್ಫಾನ್ ಮುಲ್ಲಾ, ಅಲ್ಲಾಭಕ್ಷಾ ಬಿ ಹಾಗೂ ಕೆ.ಜಿ ಅಜ್ಜಪ್ಪ ಸೇರಿ 3 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ವಾಪಸ್ ಪಡೆಯುವ ಮೂಲಕ ಚುನಾವಣಾ ಅಂತಿಮ ಕಣದಲ್ಲಿ ಎಲ್ಲಾ ಪಕ್ಷ, ಪಕ್ಷೇತರರು ಸೇರಿದಂತೆ ಅಂತಿಮ ಕಣದಲ್ಲಿ 30 ಅಭ್ಯರ್ಥಿಗಳು ಉಳಿದಿದ್ದಾರೆ.
ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ವಿವರ; ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಪಕ್ಷ ತಿಪ್ಪೇಸ್ವಾಮಿ ಎ.ಕೆ, ಭಾರತೀಯ ಕಾಂಗ್ರೆಸ್ ಪಕ್ಷದ ಡಾ; ಪ್ರಭಾ ಮಲ್ಲಿಕಾರ್ಜುನ್, ಉತ್ತಮ ಪ್ರಜಾಕೀಯ ಪಕ್ಷದ ಈಶ್ವರ, ಭಾರತೀಯ ಜನತಾ ಪಾರ್ಟಿ ಜಿ.ಎಸ್.ಗಾಯಿತ್ರಿ, ಬಿ.ಎಸ್.ಪಿ ಹನುಮಂತಪ್ಪ, ಸಮಾಜ ವಿಕಾಸ ಕ್ರಾಂತಿ ರುದ್ರೇಶ್ ಕೆ.ಹೆಚ್, ರಾಣಿ ಚೆನ್ನಮ್ಮ ಪಾರ್ಟಿ ವೀರೇಶ್.ಎಸ್, ಕಂಟ್ರಿ ಸಿಟಿಜನ್ ಪಾರ್ಟಿ ಎ.ಟಿ.ದಾದಾಖಲಂದರ್, ನವಭಾರತ ಸೇನಾ ಎಂ.ಜಿ.ಶ್ರೀಕಾಂತ್, ಜನಹಿತ ಪಕ್ಷ ದೊಡ್ಡೇಶ್ ಹೆಚ್.ಎಸ್, ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷ ಶ್ರೀನಿವಾಸ ಎಂ.ಸಿ, ಕೆ.ಆರ್.ಎಸ್.ನಿಂದ ಕೆ.ಎಸ್.ವೀರಭದ್ರಪ್ಪ.
 ಪಕ್ಷೇತರರಾಗಿ ವಿನಯ್ ಕುಮಾರ್ ಜಿ.ಬಿ, ಟಿ.ಜಬೀನ್ ತಾಜ್, ಎ.ಕೆ.ಗಣೇಶ್, ಬರ್ಕತ್ ಅಲಿ, ಮೊಹಮದ್ ಹಯಾತ್ ಎಂ, ಎಂ.ಟಿ.ಚಂದ್ರಣ್ಣ, ಸೈಯದ್ ಜಬೀವುಲ್ಲಾ.ಕೆ, ರವಿನಾಯ್ಕ್ ಬಿ, ತಸ್ಲಿಮ್ ಬಾನು, ಪರ್ವೇಜ್ ಹೆಚ್, ರಶೀದ್ ಖಾನ್, ಸಲೀಮ್ ಎಸ್, ಮಂಜುನಾಥ ಎ.ಕೆ,  ಅಬ್ದುಲ್ ನಜೀರ್ ಅಹ್ಮದ್, ಪೆದ್ದಪ್ಪ ಎಸ್, ಮೆಹಬೂಬ್ ಬಾಷಾ ಜಿ.ಎಂ.ಬರ್ಕತ್ ಅಲಿ ಬಾಷಾ,  ಜಿ.ಎಂ.ಗಾಯಿತ್ರಿ, ಇವರು  ಅಂತಿಮ ಕಣದಲ್ಲಿರುವವರು.ಎಂದು ಜಿಲ್ಲಾ ಮುಖ್ಯ ಚುನಾವಣಾ ಅಧಿಕಾರಿ ಪ್ರಕಟಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments